ನವದೆಹಲಿ: ಮಹತ್ವದ ಮೈಲಿಗಲ್ಲನ್ನು ಸಾಧಿಸಿರುವ ಭಾರತೀಯ ನೌಕಾಪಡೆಯ ಎಂಎಚ್-60 ರೋಮಿಯೋ ಹೆಲಿಕಾಪ್ಟರ್ ಬುಧವಾರ ಸ್ವದೇಶಿ ವಿಮಾನವಾಹಕ ನೌಕೆ (ಎರ್ಕ್ರಾಪ್ಟ್ ಕ್ಯಾರಿಯರ್) ಐಎನ್‌ಎಸ್ ವಿಕ್ರಾಂತ್‌ನಲ್ಲಿ ಮೊದಲ ಬಾರಿಗೆ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದೆ. ಭಾರತೀಯ ನೌಕಾಪಡೆಯು ಯುಎಸ್ ನಿರ್ಮಿತ ಎಂಎಚ್-60ಆರ್ ಹೆಲಿಕಾಪ್ಟರ್‌ನ ಯಶಸ್ವಿ ಮೊದಲ ಲ್ಯಾಂಡಿಂಗ್‌ನ ವಿಡಿಯೋವನ್ನು ಹಂಚಿಕೊಂಡಿದೆ. ಆ್ಯಂಟಿ ಸಬ್ಮರೀನ್ ಹಾಗೂ ಫ್ಲೀಟ್ ಬೆಂಬಲಿತ ಸಾಮರ್ಥ್ಯಗಳಲ್ಲಿ ಇದು ಪ್ರಮುಖ ಉತ್ತೇಜನವಾಗಿದೆ ಎಂದು ಹೇಳಲಾಗುತ್ತಿದೆ.
-
Another milestone for #IndianNavy - MH60R helicopter undertakes maiden landing on the indigenously designed & constructed aircraft carrier #INSVikrant.
— SpokespersonNavy (@indiannavy) May 31, 2023 " class="align-text-top noRightClick twitterSection" data="
A major boost to Indian Navy’s Anti-Submarine Warfare & Fleet Support capability.#AatmaNirbharBharat@DefenceMinIndia pic.twitter.com/AGOLEV0QbR
">Another milestone for #IndianNavy - MH60R helicopter undertakes maiden landing on the indigenously designed & constructed aircraft carrier #INSVikrant.
— SpokespersonNavy (@indiannavy) May 31, 2023
A major boost to Indian Navy’s Anti-Submarine Warfare & Fleet Support capability.#AatmaNirbharBharat@DefenceMinIndia pic.twitter.com/AGOLEV0QbRAnother milestone for #IndianNavy - MH60R helicopter undertakes maiden landing on the indigenously designed & constructed aircraft carrier #INSVikrant.
— SpokespersonNavy (@indiannavy) May 31, 2023
A major boost to Indian Navy’s Anti-Submarine Warfare & Fleet Support capability.#AatmaNirbharBharat@DefenceMinIndia pic.twitter.com/AGOLEV0QbR
ಭಾರತೀಯ ನೌಕಾಪಡೆಗೆ ಮತ್ತೊಂದು ಮೈಲಿಗಲ್ಲು: "ಭಾರತೀಯ ನೌಕಾಪಡೆಗೆ ಮತ್ತೊಂದು ಮೈಲಿಗಲ್ಲು ಆಗಿದೆ. ಎಂಎಚ್-60ಆರ್ ಹೆಲಿಕಾಪ್ಟರ್ ಸ್ಥಳೀಯವಾಗಿ ವಿನ್ಯಾಸಗೊಳಿಸಲಾದ ಮತ್ತು ನಿರ್ಮಿಸಲಾದ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್‌ನಲ್ಲಿ ಮೊದಲ ಲ್ಯಾಂಡಿಂಗ್ ಅನ್ನು ಯಶಸ್ವಿಗೊಳಿಸಿದೆ. ಭಾರತೀಯ ನೌಕಾಪಡೆಯ ಆ್ಯಂಟಿ ಸಬ್ಮರೀನ್ ಮತ್ತು ಫ್ಲೀಟ್ ಬೆಂಬಲಿಸುವಂತ ಸಾಮರ್ಥ್ಯಕ್ಕೆ ಪ್ರಮುಖ ಉತ್ತೇಜನವಾಗಿದೆ" ಎಂದು ಭಾರತೀಯ ನೌಕಾಪಡೆಯ ವಕ್ತಾರರು ಹೆಲಿಕಾಪ್ಟರ್ ಇಳಿಯುವಿಕೆಯ ವಿಡಿಯೋ ಹಾಗೂ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಎಂಎಚ್ - 60 ರೋಮಿಯೋ, ಜಾಗತಿಕವಾಗಿ ಅತ್ಯಾಧುನಿಕ ಆ್ಯಂಟಿ ಸಬ್ಮರೀನ್ ಹೆಲಿಕಾಪ್ಟರ್‌ಗಳಲ್ಲಿ ಒಂದಾಗಿದೆ. ಇದನ್ನು ಲಾಕ್‌ಹೀಡ್ ಮಾರ್ಟಿನ್ ತಯಾರಿಸಿದೆ. ಹೆಲಿಕಾಪ್ಟರ್ ಅನ್ನು ನೌಕಾಪಡೆಯ ಯುದ್ಧನೌಕೆಗಳಲ್ಲಿ ನಿಯೋಜಿಸಲಾಗುವುದು. 905 ಮಿಲಿಯನ್ ಡಾಲರ್ ಮೌಲ್ಯದ ಒಪ್ಪಂದವನ್ನು ಸರ್ಕಾರ ಮಾಡಿಕೊಂಡಿದೆ. ಭಾರತವು ಈ 24 ಹೆಲಿಕಾಪ್ಟರ್‌ಗಳನ್ನು ಆರ್ಡರ್ ಮಾಡಿದೆ. ಈಗಾಗಲೇ ಎರಡು ಹೆಲಿಕಾಪ್ಟರ್‌ಗಳನ್ನು ಭಾರತೀಯ ನೌಕಾಪಡೆಗೆ ಬಂದು ಮುಟ್ಟಿವೆ.
ಇದನ್ನೂ ಓದಿ: ಭಾರತೀಯ ಜ್ಞಾನ ವ್ಯವಸ್ಥೆಯಲ್ಲಿದೆ ಮಾನಸಿಕ ಆರೋಗ್ಯಕ್ಕೆ ಮದ್ದು: ಐಐಟಿ ಮಂಡಿ ಸಂಶೋಧನೆ ಆರಂಭ
ಎಲ್ಲ ಹವಾಮಾನಕ್ಕೆ ಹೊಂದಿಕೊಳ್ಳುತ್ತೆ ಹೆಲಿಕಾಪ್ಟರ್: ಎಲ್ಲ ಹವಾಮಾನದಲ್ಲೂ ಹೆಲಿಕಾಪ್ಟರ್ ಅನ್ನು ವಿವಿಧ ಕಾರ್ಯಾಚರಣೆಗಳನ್ನು ಮಾಡುವಂತೆ ವಿನ್ಯಾಸಗೊಳಿಸಲಾಗಿದೆ. ನೌಕಾಪಡೆಯ ಸೀಕಿಂಗ್ ಹೆಲಿಕಾಪ್ಟರ್‌ಗಳನ್ನು ಬದಲಾಯಿಸುತ್ತದೆ. ಇತ್ತೀಚೆಗೆ, MH-60R ದೇಶೀಯವಾಗಿ ನಿರ್ಮಿಸಲಾದ ಕ್ಷಿಪಣಿ ವಿಧ್ವಂಸಕ ಐಎನ್ಎಸ್ ಕೋಲ್ಕತ್ತಾದಲ್ಲಿ ತನ್ನ ಮೊದಲ ಲ್ಯಾಂಡಿಂಗ್ ಅನ್ನು ಯಶಸ್ವಿಯಾಗಿ ಮಾಡಿತು. ಈ ಘಟನೆಯು ಕಣ್ಗಾವಲು, ಶಿಪ್ಪಿಂಗ್ ವಿರೋಧಿ ಕಾರ್ಯಾಚರಣೆಗಳು, ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ನೌಕಾಪಡೆಯ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ ಎಂದು ನೌಕಾ ಪಡೆ ಹೇಳಿಕೊಂಡಿದೆ.
ಇದನ್ನೂ ಓದಿ: ಮೂರು ಬಾಹ್ಯಗ್ರಹಗಳನ್ನು ಪತ್ತೆ ಮಾಡಿದ ನಾಸಾದ ಕೆಪ್ಲರ್ ದೂರದರ್ಶಕ
ಈ ತಿಂಗಳ ಆರಂಭದಲ್ಲಿ, ಭಾರತೀಯ ನೌಕಾಪಡೆಯು ತನ್ನ ಮುಂಚೂಣಿ ನಿರ್ದೇಶಿತ ಕ್ಷಿಪಣಿ ವಿಧ್ವಂಸಕ ಐಎನ್ಎಸ್ ಮೊರ್ಮುಗೋವಾವನ್ನು ಬಳಸಿಕೊಂಡು ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿ ಫೈರಿಂಗ್ ಅನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಿತು. ಗಮನಾರ್ಹವಾಗಿ ಚೊಚ್ಚಲ ಬ್ರಹ್ಮೋಸ್ ಗುಂಡು ಹಾರಿಸುವ ಮೂಲಕ ಎಲ್ಲರನ್ನ ಚಕಿತಗೊಳಿಸಿತು. 'ಬುಲ್ಸ್ ಐ' ಅನ್ನು ಹೊಡೆಯುವಲ್ಲಿ ಯಶಸ್ವಿಯಾಗಿ ಇದು ನಿರ್ವಹಿಸುತ್ತದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಭಾರತೀಯ ನೌಕಾಪಡೆಯು ಸುಮಾರು 20,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ 45,000 ಟನ್ ವಿಮಾನವಾಹಕ ನೌಕೆಯನ್ನು ದೇಶೀಯವಾಗಿ ನಿರ್ಮಿಸಿದ ಐಎನ್ಎಸ್ ವಿಕ್ರಾಂತ್ ಅನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡಲಾಗಿತ್ತು.
ಇದನ್ನೂ ಓದಿ: ಹೊಸದಾಗಿ ರೂಪಗೊಳ್ಳುತ್ತಿರುವ ಭಯೋತ್ಪಾದಕ ಸಂಘಟನೆ: ಕಾಶ್ಮೀರದ 3 ಕಡೆ ಸೇರಿ ಕೇರಳದಲ್ಲೂ ಎನ್ಐಎ ದಾಳಿ
ಇದನ್ನೂ ಓದಿ: 1 ಲಕ್ಷ ಬಳಕೆದಾರರನ್ನು ದಾಟಿದ ಜಾಕ್ ಡಾರ್ಸೆ ಬೆಂಬಲಿತ 'ಬ್ಲೂಸ್ಕೈ'