ನವದೆಹಲಿ: ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ನೇತೃತ್ವದ 11 ಸದಸ್ಯರ ಭಾರತೀಯ ನಿಯೋಗ ಮಂಗಳವಾರ ಫ್ರಾನ್ಸ್‌ನ ಪ್ಯಾರಿಸ್ ನಡೆದ ಕಾನ್ ಫಿಲ್ಮ್ ಫೆಸ್ಟಿವಲ್ ಜ್ಯೂರಿ-2022 ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಹಿಸಿದರು. ಭಾರತದ ಪ್ರಮುಖ ಸಂಗೀತ ಕ್ಷೇತ್ರದ ತಾರೆಯರು, ನಟಿಯರು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುವ ಮೂಲಕ ಸಂಚಲನ ಉಂಟು ಮಾಡಿದರು.
ಸಾಂಪ್ರದಾಯಿಕ ಉಡುಗೆ ತೊಟ್ಟು ಮಾಹಿತಿ ಮತ್ತು ಪ್ರಸಾರ ಇಲಾಖೆ ಸಚಿವ ಅನುರಾಗ್ ಠಾಕೂರ್, ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್, ಸಂಗೀತ ಸಂಯೋಜಕ ರಿಕಿ ಕೇಜ್, ಗೀತಾ ರಚನೆಕಾರ ಮತ್ತು ಕವಿ ಪ್ರಸೂನ್ ಜೋಶಿ ಮತ್ತು ಹಿರಿಯ ಚಿತ್ರ ನಿರ್ದೇಶಕ ಶೇಖರ್ ಕಪೂರ್, ತಮನ್ನಾ ಭಾಟಿಯಾ, ಪೂಜಾ ಹೆಗ್ಡೆ, ಜನಪದ ಸಂಗೀತ ರಚನಾಕಾರ ಮತ್ತು ಗಾಯಕ ಮಾಮೆ ಖಾನ್ ಹಾಗೂ ನಟಿ ನಯನತಾರಾ ಸೇರಿದಂತೆ ಹಲವರು ರೆಡ್ ಕಾರ್ಪೆಟ್ ಮೇಲೆ ನಡೆದು ಎಲ್ಲರ ಗಮನ ಸೆಳೆದರು.
ಪ್ರಾದೇಶಿಕ ಚಿತ್ರಮಂದಿರಗಳ ರಾಯಭಾರಿಗಳು ಈ ನಿಯೋಗದ ಭಾಗವಾಗಿದ್ದರು. ಈ ಬಾರಿ ಭಾರತದ ಸಂಸ್ಕೃತಿ, ಪರಂಪರೆ, ಗತವೈಭವ ಮತ್ತು ಅಭಿವೃದ್ಧಿಯನ್ನು ಚಲನಚಿತ್ರಗಳ ಮೂಲಕ ಪ್ರದರ್ಶಿಸುವ ಉದ್ದೇಶವಿದೆ. ಅದಕ್ಕಾಗಿ ದೇಶದ ನಾನಾ ಆಯಾಮಗಳು ಹಾಗೂ ಸಾಮರ್ಥ್ಯಗಳನ್ನು ಬಿಂಬಿಸುವ ರೀತಿಯಲ್ಲಿ ವಿಶಿಷ್ಟ ಪ್ರತಿಭೆಗಳನ್ನು ನಿಯೋಗಕ್ಕೆ ಆಯ್ಕೆ ಮಾಡಲಾಗಿದೆ.
-
Cannes, France | Contemporary folk music artist Mame Khan & actor-politician Kamal Haasan also walk the red carpet on the first day of #CannesFilmFestival2022 #IndiaAtCannes pic.twitter.com/C5eEb4Fke1
— ANI (@ANI) May 17, 2022 " class="align-text-top noRightClick twitterSection" data="
">Cannes, France | Contemporary folk music artist Mame Khan & actor-politician Kamal Haasan also walk the red carpet on the first day of #CannesFilmFestival2022 #IndiaAtCannes pic.twitter.com/C5eEb4Fke1
— ANI (@ANI) May 17, 2022Cannes, France | Contemporary folk music artist Mame Khan & actor-politician Kamal Haasan also walk the red carpet on the first day of #CannesFilmFestival2022 #IndiaAtCannes pic.twitter.com/C5eEb4Fke1
— ANI (@ANI) May 17, 2022
ಮೇ 17 ರಿಂದ ಮೇ 28ರವರೆಗೆ ನಡೆಯಲಿರುವ ಕಾನ್ ಸಿನಿಮೋತ್ಸವ ವಿಶ್ವದ ನಾನಾ ಸಿನಿಮಾ ರಂಗವನ್ನು ಒಟ್ಟುಗೂಡಿಸುತ್ತದೆ. ಒಟ್ಟು 12 ದಿನಗಳ ಕಾಲ ನಡೆಯುವ ಚಿತ್ರೋತ್ಸವದಲ್ಲಿ ಸಿನಿ ಜಗತ್ತಿನ ಅನೇಕ ಗಣ್ಯರು ಭಾಗಿಯಾಗಲಿದ್ದು, ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಉಪಸ್ಥಿತರಿರಲಿದ್ದಾರೆ.
ಈ ಬಾರಿ ಜ್ಯೂರಿ ಆಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮಾಧ್ಯಮಗಳೊಂದಿಗೆ ಮಾತನಾಡಿ, 'ಇದೊಂದು ದೊಡ್ಡ ಗೌರವ. ಇಂಥ ಅವಕಾಶ ಸಿಕ್ಕಾಗ ನಾವು ಅದನ್ನು ತುಂಬಾ ನಮ್ರತೆ ಮತ್ತು ಕೃತಜ್ಞತೆಯಿಂದ ಸ್ವೀಕರಿಸಬೇಕು' ಎಂದರು.
-
#WATCH | France: "It's such a huge honour. It's not something that our country has seen very often. So when we are given the opportunity, we should take it with a lot of humility & gratitude," says actor Deepika Padukone upon arriving for #CannesFilmFestival2022 opening party pic.twitter.com/To3dSpMZ6j
— ANI (@ANI) May 18, 2022 " class="align-text-top noRightClick twitterSection" data="
">#WATCH | France: "It's such a huge honour. It's not something that our country has seen very often. So when we are given the opportunity, we should take it with a lot of humility & gratitude," says actor Deepika Padukone upon arriving for #CannesFilmFestival2022 opening party pic.twitter.com/To3dSpMZ6j
— ANI (@ANI) May 18, 2022#WATCH | France: "It's such a huge honour. It's not something that our country has seen very often. So when we are given the opportunity, we should take it with a lot of humility & gratitude," says actor Deepika Padukone upon arriving for #CannesFilmFestival2022 opening party pic.twitter.com/To3dSpMZ6j
— ANI (@ANI) May 18, 2022
ಕಾನ್ ಸಿನಿಮೋತ್ಸವ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ನಟಿ ತಮನ್ನಾ ಭಾಟಿಯಾ, 'ನಾನು ತುಂಬಾ ಉತ್ಸುಕಳಾಗಿದ್ದೇನೆ, ಈ ಈವೆಂಟ್‌ಗಾಗಿ ನಿಜವಾಗಿಯೂ ಎದುರು ನೋಡುತ್ತಿದ್ದೇನೆ' ಎಂದು ಹರ್ಷ ವ್ಯಕ್ತಪಡಿಸಿದರು.
-
#WATCH | France: Actor Tamannaah Bhatia on #CannesFilmFestival says, "I'm so excited, it's such an honour. I am really looking forward to the event."
— ANI (@ANI) May 17, 2022 " class="align-text-top noRightClick twitterSection" data="
India has been named the Country of honour at Marché du Film - festival de Cannes. pic.twitter.com/7K7EfFIDhD
">#WATCH | France: Actor Tamannaah Bhatia on #CannesFilmFestival says, "I'm so excited, it's such an honour. I am really looking forward to the event."
— ANI (@ANI) May 17, 2022
India has been named the Country of honour at Marché du Film - festival de Cannes. pic.twitter.com/7K7EfFIDhD#WATCH | France: Actor Tamannaah Bhatia on #CannesFilmFestival says, "I'm so excited, it's such an honour. I am really looking forward to the event."
— ANI (@ANI) May 17, 2022
India has been named the Country of honour at Marché du Film - festival de Cannes. pic.twitter.com/7K7EfFIDhD
ಇದನ್ನೂ ಓದಿ: ನಟಿ ಚೇತನಾ ರಾಜ್ ಸಾವು: ಮರಣೋತ್ತರ ಪರೀಕ್ಷೆ ವರದಿ ಬಳಿಕ ಪೊಲೀಸ್ ತನಿಖೆ