ETV Bharat / bharat

ಏರ್​​ಪೋರ್ಟ್​​ನಲ್ಲಿ 45 ಪಿಸ್ತೂಲ್​​ ಪತ್ತೆ.. ವಿಯೆಟ್ನಾನಿಂದ ಭಾರತಕ್ಕೆ ಬಂದಿದ್ದ ದಂಪತಿ ಅರೆಸ್ಟ್​​​ - ಏರ್​ಪೋರ್ಟ್​ನಲ್ಲಿ 45 ಪಿಸ್ತೂಲ್​ ವಶ

ಅಕ್ರಮವಾಗಿ ಪಿಸ್ತೂಲ್​​ ಕಳ್ಳಸಾಗಾಣೆ ಮಾಡ್ತಿದ್ದ ಭಾರತೀಯ ದಂಪತಿ ಬಂಧನ ಮಾಡುವಲ್ಲಿ ದೆಹಲಿ ಅಂತಾರಾಷ್ಟ್ರೀಯ ಏರ್​​ಪೋರ್ಟ್​ನ ಕಸ್ಟಮ್ಸ್​ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

45 pistols in delhi Airport
45 pistols in delhi Airport
author img

By

Published : Jul 13, 2022, 5:11 PM IST

ನವದೆಹಲಿ: ವಿಯೆಟ್ನಾನಿಂದ ಭಾರತಕ್ಕೆ ಆಗಮಿಸಿದ್ದ ದಂಪತಿಗಳ ಬಳಿ ಎರಡು ಟ್ರಾಲಿ ಬ್ಯಾಗ್​​ಗಳಲ್ಲಿ ಬರೋಬ್ಬರಿ 45 ಪಿಸ್ತೂಲ್​​​​ ಪತ್ತೆಯಾಗಿದ್ದು, ಅವರನ್ನ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್​ ಅಧಿಕಾರಿಗಳು ಬಂಧನ ಮಾಡಿದ್ದಾರೆ. ಪಿಸ್ತೂಲ್​​​ಗಳ ಒಟ್ಟು ಮೌಲ್ಯ ಬರೋಬ್ಬರಿ 22 ಲಕ್ಷ ರೂಪಾಯಿ ಆಗಿರುವುದಾಗಿ ತಿಳಿದು ಬಂದಿದ್ದು, 25 ಗನ್​​​ಗಳು 12ಲಕ್ಷಕ್ಕೂ ಹೆಚ್ಚಿನ ಮೌಲ್ಯ ಹೊಂದಿವೆ ಎಂದು ಕಸ್ಟಮ್ಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಂಧಿತರನ್ನ ಜಗಜಿತ್ ಸಿಂಗ್​​ ಮತ್ತು ಆತನ ಪತ್ನಿ ಜಸ್ವಿದರ್ ಕೌರ್​ ಎಂದು ಗುರುತಿಸಲಾಗಿದೆ. ವಿಯೆಟ್ನಾನಿಂದ ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಈ ಜೋಡಿ ಬಂದಿದ್ದು, ತಪಾಸಣೆಗೊಳಪಡಿಸಿದಾಗ ಇಷ್ಟೊಂದು ಪಿಸ್ತೂಲ್​ ಪತ್ತೆಯಾಗಿವೆ.

  • Delhi | An Indian couple that arrived from Vietnam was nabbed & 45 guns worth over Rs 22 lakh from two trolley bags seized. They admitted their previous indulgence in smuggling 25 pieces of guns having a value of over Rs 12 lakh: Commissioner of Customs, IGI Airport & General pic.twitter.com/TvjNbJt5yA

    — ANI (@ANI) July 13, 2022 " class="align-text-top noRightClick twitterSection" data=" ">

ಇದನ್ನೂ ಓದಿರಿ: ಶುಕ್ರವಾರದಿಂದ ಮುಂದಿನ 75ದಿನ ಉಚಿತ ಕೋವಿಡ್​ ಬೂಸ್ಟರ್ ಡೋಸ್​.. ಕೇಂದ್ರದ ಮಹತ್ವದ ನಿರ್ಧಾರ

ಪ್ರಕರಣಕ್ಕೆ ಸಂಬಂಧಿಸಿದಂತೆ ಭಯೋತ್ಪಾದನಾ ನಿಗ್ರಹ ಘಟಕ ರಾಷ್ಟ್ರೀಯ ಭದ್ರತಾ ಪಡೆ(ಎನ್​ಎಸ್​ಜಿ) ತನಿಖೆ ನಡೆಸುತ್ತಿದ್ದು, ಪಿಸ್ತೂಲ್​​ಗಳ ನಕಲಿ, ಅಸಲಿಯತೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ. ಬಂಧಿತ ದಂಪತಿಗಳು ಜುಲೈ 10ರಂದು ವಿಯೆಟ್ನಾನಿಂದ ಭಾರತಕ್ಕೆ ಮರಳಿದ್ದರು. ಈ ಜೋಡಿ ಈ ಹಿಂದೆ ಸಹ ಟರ್ಕಿಯಿಂದ 25 ಪಿಸ್ತೂಲ್​ ಭಾರತಕ್ಕೆ ತಂದಿರುವುದಾಗಿ ಒಪ್ಪಿಕೊಂಡಿದ್ದಾರೆ. ಪ್ರಕರಣ ಹೆಚ್ಚು ಗಂಭೀರವಾಗಿರುವ ಕಾರಣ ತನಿಖೆ ನಡೆಸಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.