ನವದೆಹಲಿ: ಶತ್ರು ಟ್ಯಾಂಕರುಗಳನ್ನು ಹೊಡೆದುರುಳಿಸಲು ಮತ್ತು ಸೇನಾ ಸಿಬ್ಬಂದಿ ಹೊತ್ತೊಯ್ಯಲು ಮೇಕ್ ಇನ್ ಇಂಡಿಯಾ ಉಪಕ್ರಮದಡಿಯಲ್ಲಿ ಒಟ್ಟು 1,750 ಫ್ಯೂಚರಿಸ್ಟಿಕ್ ಇನ್ಫ್ಯಾಂಟರಿ ಕಾಂಬ್ಯಾಟ್ ವೆಹಿಕಲ್ (ಎಫ್ಐಸಿವಿ) ಖರೀದಿಗೆ ಸರ್ಕಾರ ನಿರ್ಧರಿಸಿದೆ. ಈ ಯುದ್ಧ ವಾಹನಗಳನ್ನು ಲಡಾಖ್ನಂತಹ ಭೂಮಿಯಲ್ಲಿ ನಿಯೋಜಿಸಲು ಯೋಚಿಸಲಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ.
ಇದಲ್ಲದೆ ಕಾರ್ಯಕ್ಷಮತೆ ಆಧಾರಿತ ಲಾಜಿಸ್ಟಿಕ್ಸ್, ಸ್ಥಾಪಿತ ತಂತ್ರಜ್ಞಾನಗಳು, ಇಂಜಿನಿಯರಿಂಗ್ ಬೆಂಬಲ ಪ್ಯಾಕೇಜ್ ಮತ್ತು ಇತರ ನಿರ್ವಹಣೆ ಮತ್ತು ತರಬೇತಿ ಅವಶ್ಯಕತೆಗಳ ಜೊತೆಗೆ ಹಂತ ಹಂತವಾಗಿ 350 ಲೈಟ್ ಟ್ಯಾಂಕ್‌ಗಳನ್ನು ಸೇನೆಗೆ ಸೇರಿಸಲು ಭಾರತೀಯ ಸೇನೆ ಮುಂದಾಗಿದೆ. 350 ಲೈಟ್ ಟ್ಯಾಂಕರ್ಗಳ ಖರೀದಿಗೆ ಈಗಾಗಲೇ ಸಿದ್ಧತೆ ನಡೆದಿದೆ. ಇವು ಟ್ಯಾಂಕ್ ಬಸ್ಟಿಂಗ್ ಸಾಮರ್ಥ್ಯ ಹೊಂದಿರುವ ಯುದ್ಧ ವಾಹನಗಳಾಗಿವೆ ಎಂದು ಸೇನೆ ಮಾಹಿತಿ ನೀಡಿದೆ.
25 ಟನ್‌ಗಿಂತ ಕಡಿಮೆ ತೂಕವಿರುವ ಟ್ಯಾಂಕ್‌ಗಳನ್ನು ಹೈ ಆಲ್ಟಿಟ್ಯೂಡ್ ಏರಿಯಾ (ಎಚ್‌ಎಎ), ಫ್ರಾಂಟಿಯರ್ ಏರಿಯಾ ಸೇರಿ ನೀರು ಮತ್ತು ನೆಲದ ಮೇಲೂ ಕಾರ್ಯ ನಿರ್ವಹಿಸಲಿದೆ ಎಂದು ಸೇನೆ ತಿಳಿಸಿದೆ. ಇತ್ತೀಚಿಗಿನ ಲಡಾಖ್ ಘರ್ಷಣೆಯ ನಂತರ ಇಂತಹ ಲೈಟ್ ಟ್ಯಾಂಕರ್ಗಳ ಅಗತ್ಯತೆ ಬಗ್ಗೆ ಸೇನೆ ಪ್ರಸ್ತಾಪವಿರಿಸಿತ್ತು. ಇದೀಗ ಸೇನೆಗೆ ಟ್ಯಾಂಕರ್ಗಳ ಸೇರ್ಪಡೆಯಿಂದಾಗಿ ಇನ್ನಷ್ಟು ಬಲ ಬರಲಿದೆ.
ಇದನ್ನೂ ಓದಿ: ಕಾಲು ಕಳೆದುಕೊಂಡ ಮಗನನ್ನು ಪೊಲೀಸ್ ಠಾಣೆ ಸುತ್ತಿಸಿ ನ್ಯಾಯ ಕೇಳಿದ ತಾಯಿ! Video