ಲಡಾಖ್: ಭಾರತ-ಚೀನಾ ಗಡಿಯ ಪೂರ್ವ ಲಡಾಖ್‌ನಲ್ಲಿ 28 ತಿಂಗಳ ನಂತರ ಬಿಕ್ಕಟ್ಟು ಕೊನೆಗೊಳ್ಳುವ ಲಕ್ಷಣ ಗೋಚರಿಸುತ್ತಿದೆ. ಸೆಪ್ಟೆಂಬರ್ 12ರ (ಇಂದು) ವೇಳೆಗೆ ಎರಡೂ ದೇಶಗಳು ತಮ್ಮ ಸೇನೆಯನ್ನು ಹಿಂಪಡೆಯಲಿವೆ ಎಂದು ತಿಳಿದುಬಂದಿದೆ. ಆದರೆ ಇದರ ನಡುವೆ, ಭಾರತೀಯ ಸೇನೆ ಲಡಾಖ್ ಸೆಕ್ಟರ್‌ನಲ್ಲಿ ಹರಿದು ಹೋಗುತ್ತಿರುವ ಸಿಂಧೂ ನದಿಗೆ ಅಡ್ಡಲಾಗಿ ಅದ್ಭುತ ಸೇತುವೆಯೊಂದನ್ನು ನಿರ್ಮಿಸಿದೆ. ಈ ಸೇತುವೆ ನಿರ್ಮಾಣದಿಂದ ಚೀನಾ ನರಿಬುದ್ಧಿಗೆ ತಕ್ಕ ಪ್ರತ್ಯುತ್ತರ ನೀಡಲು ಭಾರತ ಸಜ್ಜಾಗಿದೆ.
-
'Bridging Challenges - No Terrain nor Altitude Insurmoutable’#SaptaShaktiEngineers in #EasternLadakh carrying out mobility tasks and training. Bridging the mighty #Indus River, enabling movement of both combat and logistic echelons.#SarvadaAgraniBde#IndianArmy@adgpi pic.twitter.com/7JxiNmhVlm
— SouthWesternCommand_IA (@SWComd_IA) September 11, 2022 " class="align-text-top noRightClick twitterSection" data="
">'Bridging Challenges - No Terrain nor Altitude Insurmoutable’#SaptaShaktiEngineers in #EasternLadakh carrying out mobility tasks and training. Bridging the mighty #Indus River, enabling movement of both combat and logistic echelons.#SarvadaAgraniBde#IndianArmy@adgpi pic.twitter.com/7JxiNmhVlm
— SouthWesternCommand_IA (@SWComd_IA) September 11, 2022'Bridging Challenges - No Terrain nor Altitude Insurmoutable’#SaptaShaktiEngineers in #EasternLadakh carrying out mobility tasks and training. Bridging the mighty #Indus River, enabling movement of both combat and logistic echelons.#SarvadaAgraniBde#IndianArmy@adgpi pic.twitter.com/7JxiNmhVlm
— SouthWesternCommand_IA (@SWComd_IA) September 11, 2022
1. ಸಿಂಧೂ ನದಿಗೆ ನಿರ್ಮಿಸಿದ ಸೇತುವೆ: ಸಿಂಧೂ ನದಿಯ ಮೇಲೆ ಸೇನಾ ಕಾರ್ಪ್ಸ್ ಆಫ್ ಇಂಜಿನಿಯರ್ಸ್ ವಿಭಾಗ ಈ ಸೇತುವೆ ಕಟ್ಟಿದೆ. ಇದರ ನಿರ್ಮಾಣದಿಂದಾಗಿ ಭಾರಿ ಪ್ರಮಾಣದ ವಾಹನಗಳು ಸುಲಭವಾಗಿ ಚಲಿಸಲು ಸಾಧ್ಯವಾಗುತ್ತದೆ.
2. ಸೇನೆಯಿಂದ ಸೇತುವೆ ಕಟ್ಟುವ ಡ್ರಿಲ್: ಸೇತುವೆ ನಿರ್ಮಿಸುತ್ತಿರುವ ವಿಡಿಯೋವನ್ನು 'ಬ್ರಿಡ್ಜಿಂಗ್ ಚಾಲೆಂಜಸ್ - ನೋ ಟೆರೈನ್ ಅಥವಾ ಆಲ್ಟಿಟ್ಯೂಡ್ ಇನ್ಸರ್ಮೌಟಬಲ್' ಎಂದು ಹೆಸರಿಸಲಾಗಿದೆ. ಸೌತ್ ವೆಸ್ಟರ್ನ್ ಕಮಾಂಡ್ ಟ್ವಿಟರ್‌ನಲ್ಲಿ ಇದನ್ನು ಹಂಚಿಕೊಳ್ಳಲಾಗಿದೆ. ಪೂರ್ವ ಲಡಾಖ್‌ನಲ್ಲಿರುವ ಸಪ್ತ ಶಕ್ತಿ ಎಂಜಿನಿಯರ್‌ಗಳು ಈ ಸೇತುವೆ ನಿರ್ಮಿಸುವ ಡ್ರಿಲ್ ನಡೆಸಿದ್ದಾರೆ.
3. ಚೀನಾಕ್ಕೆ ತಕ್ಕ ಪ್ರತ್ಯುತ್ತರ ನೀಡಿದ ಭಾರತ: ಗಡಿಗೆ ಹೊಂದಿಕೊಂಡಿರುವ ಸಿಂಧೂ ನದಿಗೆ ಅಡ್ಡಲಾಗಿರುವ ಸೇತುವೆ ಮೇಲೆ ಭಾರತೀಯ ಸೇನೆಯ ಭಾರಿ ಗಾತ್ರದ ಟ್ರಕ್‌ಗಳು ಸಂಚರಿಸಲಿವೆ. ಇದು ಗಡಿಯಲ್ಲಿ ಚೀನಾ ಸೇನೆಯ ಚಟುವಟಿಕೆಗಳಿಗೆ ಭಾರತದ ತಕ್ಕ ಪ್ರತ್ಯುತ್ತರವಾಗಿದೆ.
ಇದನ್ನೂ ಓದಿ: ಅರುಣಾಚಲ ಪ್ರದೇಶದ ಗಡಿಯಲ್ಲಿ ಸೇನಾ ಬಲ ಹೆಚ್ಚಳ: ಎಂ 777 ಅಲ್ಟ್ರಾಲೈಟ್ ಹೊವಿಟ್ಜರ್‌ಗಳ ನಿಯೋಜನೆ