ಬಾರಾಮುಲ್ಲಾ(ಜಮ್ಮು-ಕಾಶ್ಮೀರ): ದೇಶಾದ್ಯಂತ ಮೈ ಕೊರೆಯುವ ಚಳಿ ಆರಂಭವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ದೇಶ ಕಾಯುವ ಯೋಧರು ಮೈಮರಗಟ್ಟಿಸುವ ಹಿಮದಲ್ಲೇ ದೇಶದ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಮಧ್ಯೆ ಮತ್ತೊಂದು ಮಹತ್ವದ ಮಾನವೀಯ ಕಾರ್ಯ ಮಾಡಿ, ದೇಶದ ಜನರ ಮೆಚ್ಚುಗೆ ಜೊತೆ ಪ್ರೀತಿಗೆ ಪಾತ್ರರಾಗಿದ್ದಾರೆ.
ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದ ಕಡಿದಾದ ಪ್ರದೇಶವಾಗಿರುವ ಘಾಗ್ಗರ್ ಹಳ್ಳಿಯಲ್ಲೂ ಭಾರಿ ಹಿಮಪಾತವಾಗುತ್ತಿದ್ದು, ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನ ಸ್ಟ್ರೆಚರ್ ಮೂಲಕ ಬಾರಾಮುಲ್ಲಾದ ಸಲ್ಸಾನ್ವರೆಗೂ ಹೆಗಲ ಮೇಲೆ ಹೊತ್ತು ಸಾಗಿದ್ದಾರೆ. ಸುರಿಯುತ್ತಿರುವ ಹಿಮದಲ್ಲೇ ಹೊತ್ತುಕೊಂಡು ಸಾಗಿರುವ ಯೋಧರ ವಿಡಿಯೋ ಇದೀಗ ವೈರಲ್ ಆಗಿದೆ.
ಭಾರಿ ಹಿಮಪಾತದ ನಡುವೆ, ವೀರ ಯೋಧರ ವೈದ್ಯಕೀಯ ತಂಡ ಗರ್ಭಿಣಿಯನ್ನ ಬಾರಾಮುಲ್ಲಾದ ಸಲ್ಸಾನ್ವರೆಗೂ ಹೊತ್ತು ಸಾಗಿದ್ದು, ಇದಾದ ಬಳಿಕ ಆ್ಯಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಇದನ್ನೂ ಓದಿರಿ: ವಿಡಿಯೋ ನೋಡಿ: ಭಾರಿ ಹಿಮಪಾತದ ನಡುವೆಯೂ ಗಸ್ತು ತಿರುಗುತ್ತಿರುವ ನಮ್ಮ ವೀರ ಯೋಧರು
ಜಮ್ಮು-ಕಾಶ್ಮೀರದಲ್ಲಿ ಅತಿಯಾದ ಹಿಮ ಬೀಳುತ್ತಿರುವ ಕಾರಣ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದ್ದು, ಕೆಲವೊಂದು ರಸ್ತೆಗಳು ಸಂಪೂರ್ಣವಾಗಿ ಬಂದ್ ಆಗಿವೆ.