ETV Bharat / bharat

ಭಾರತ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯ ರಾಷ್ಟ್ರವಾಗಲಿದೆ: ಸಿಡಿಎಸ್ ಅನಿಲ್ ಚೌಹಾಣ್ - ಸ್ಟಾರ್ಟ್‌ಅಪ್‌

2024ರ ವೇಳೆಗೆ ನಾವು ಜರ್ಮನಿಯನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಲಿದೆ ಎಂದು ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಅಭಿಪ್ರಾಯಪಟ್ಟಿದ್ದಾರೆ.

India will become world's fourth largest economy by next year says CDS Anil Chauhan
ಭಾರತ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆ ರಾಷ್ಟ್ರವಾಗಲಿದೆ: ಸಿಡಿಎಸ್ ಅನಿಲ್ ಚೌಹಾಣ್
author img

By

Published : Apr 29, 2023, 7:05 PM IST

ನವದೆಹಲಿ: ಭಾರತವು ಜಾಗತಿಕವಾಗಿ ಸ್ಟಾರ್ಟ್‌ಅಪ್‌ಗಳಿಗೆ ಮೂರನೇ ಅತಿದೊಡ್ಡ ಆರ್ಥಿಕ ವ್ಯವಸ್ಥೆಯಾಗಿದೆ. 2024ರ ವೇಳೆಗೆ ದೇಶವು ಜರ್ಮನಿಯನ್ನು ಹಿಂದಿಕ್ಕಿ ನಾಲ್ಕನೇ ಅತಿದೊಡ್ಡ ಆರ್ಥಿಕತೆ ರಾಷ್ಟ್ರವಾಗಲಿದೆ ಎಂದು ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (Chief of Defence Staff -CDS) ಜನರಲ್ ಅನಿಲ್ ಚೌಹಾಣ್​ ಹೇಳಿದರು.

ನವದೆಹಲಿಯಲ್ಲಿ ನಡೆದ ಶನಿವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಭಾರತವು ಜಾಗತಿಕವಾಗಿ ಸ್ಟಾರ್ಟ್‌ಅಪ್‌ಗಳಿಗೆ ಮೂರನೇ ಅತಿದೊಡ್ಡ ಆರ್ಥಿಕ ವ್ಯವಸ್ಥೆಯಾಗಿ ಹೊರಹೊಮ್ಮುತ್ತಿದೆ. ಸರ್ಕಾರದಿಂದ ಗುರುತಿಸಲ್ಪಟ್ಟ 84,000ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಇಂದು ಅಸ್ತಿತ್ವದಲ್ಲಿವೆ. 2024ರ ವೇಳೆಗೆ ನಾವು ಜರ್ಮನಿಯನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಲು ಆಶಿಸುತ್ತೇವೆ ಎಂದರು.

  • #WATCH | CDS General Anil Chauhan speaks on several policy initiatives that the govt has undertaken to encourage engineers' design, development and manufacture of defence equipment. pic.twitter.com/qcek3S9alr

    — ANI (@ANI) April 29, 2023 " class="align-text-top noRightClick twitterSection" data=" ">

ಮೇಕ್ ಇನ್ ಇಂಡಿಯಾ ಉಪಕ್ರಮದ ಅಡಿಯಲ್ಲಿ ಸರ್ಕಾರದ ನೀತಿಗಳಿಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸರ್ಕಾರವು ಕೈಗಾರಿಕಾ ಪರವಾನಗಿ ವ್ಯವಸ್ಥೆಯನ್ನು ಸರಳಗೊಳಿಸಿದೆ. ಎಫ್‌ಡಿಐ ಮಿತಿಯನ್ನು ಹೆಚ್ಚಿಸಿದೆ. ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ಎಂಎಸ್‌ಎಂಇಗಳಿಗೆ ನಿಧಿಗಳನ್ನು ಗುರುತಿಸಿದೆ. ರಕ್ಷಣಾ ಉತ್ಪಾದನೆಯಲ್ಲಿ ಖಾಸಗಿ ಕಂಪನಿಗಳಿಗೆ ಸಮತಟ್ಟಾದ ಅವಕಾಶ ಒದಗಿಸಿದೆ ಎಂದು ತಿಳಿಸಿದರು.

ಇಂದು ನಮ್ಮ ರಕ್ಷಣಾ ಕೈಗಾರಿಕೆಗಳು ರಕ್ಷಣಾ ಪಡೆಗಳ ಅಗತ್ಯತೆಗಳನ್ನು ಪೂರೈಸಲು ಮತ್ತು ರಫ್ತಿಗಾಗಿ ವಿವಿಧ ರೀತಿಯ ಮಿಲಿಟರಿ ಯಂತ್ರಾಂಶವನ್ನು ಈಗಾಗಲೇ ತಯಾರಿಸುತ್ತಿವೆ. ಇದು ದೇಶೀಯ ಅಗತ್ಯತೆಗಳ ಪಾಲು ಹೆಚ್ಚಳಕ್ಕೆ ಕಾರಣವಾಗಿದೆ, ಇದು 2018ರಿಂದ ಏರುಗತಿಯಲ್ಲಿದೆ. ರಕ್ಷಣಾ ಉತ್ಪಾದನೆಯು ಭವಿಷ್ಯದಲ್ಲಿ ಪ್ರಮುಖ ಬೆಳವಣಿಗೆಗೆ ಸಾಕ್ಷಿಯಾಗುವ ನಿರೀಕ್ಷೆ ಹೊಂದಲಾಗಿದೆ ಎಂದು ಹೇಳಿದರು.

  • India is emerging as the third largest ecosystem for startups globally and over 84,000 startups recognized by the government exist today. By 2024, we hope to overtake Germany to become the fourth-largest economy in the world: CDS General Anil Chauhan in Delhi pic.twitter.com/JVQe8GRrMS

ಇದೇ ವೇಳೆ, ಪ್ರಸ್ತುತ ಜಾಗತಿಕ ಭದ್ರತೆಯ ವಾತಾವರಣವು ಅತ್ಯಂತ ಕ್ರಿಯಾತ್ಮಕವಾಗಿದೆ. ಅದನ್ನು ಯಾವುದೋ ಒಂದು ರೂಪದಲ್ಲಿ ನೋಡಲು ಸಾಧ್ಯವಿಲ್ಲ. ಭಾರತವು ಪಶ್ಚಿಮ ಮತ್ತು ರಷ್ಯಾ ಎರಡರೊಂದಿಗೂ ನಿಕಟ ಸಂಬಂಧವನ್ನು ಹೊಂದಿದೆ. ಇದು ಈ ಭೌಗೋಳಿಕ ರಾಜಕೀಯ ರಚನೆಯಲ್ಲಿ ನಮ್ಮನ್ನು ಅತ್ಯಂತ ವಿಶಿಷ್ಟ ಸ್ಥಾನದಲ್ಲಿ ಇರಿಸುತ್ತದೆ ಎಂದು ಜನರಲ್ ಅನಿಲ್ ಚೌಹಾಣ್​ ಮಾಹಿತಿ ನೀಡಿದರು.

ಇದನ್ನೂ ಓದಿ: ಮನ್​ ಕಿ ಬಾತ್​ 100ನೇ ಸಂಚಿಕೆ: ಪ್ರಧಾನಿಗೆ ಅಭಿನಂದನೆ ಸಲ್ಲಿಸಿದ ಮೈಕ್ರೋಸಾಫ್ಟ್ ದಿಗ್ಗಜ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.