ETV Bharat / bharat

ಕಂದಕಕ್ಕೆ ಉರುಳಿದ ಟ್ರಕ್.. ಹಗ್ಗದ ಸಹಾಯದಿಂದಲೇ ಮೇಲೆತ್ತಿದ ಗ್ರಾಮಸ್ಥರು..! ವಿಡಿಯೋ - ಹಗ್ಗದ ಸಹಾಯದಿಂದ ಕಂದಕಕ್ಕೆ ಉರುಳಿದ ಟ್ರಕ್ ಮೇಲೆತ್ತಿದ ಗ್ರಾಮಸ್ಥರು

ನೂರಾರು ಗ್ರಾಮಸ್ಥರು ಕಿರಿದಾದ ರಸ್ತೆಯಿಂದ 70 ಅಡಿಗಳಷ್ಟು ಕೆಳಗೆ ಬಿದ್ದಿದ್ದ ಟ್ರಕ್​ ಅನ್ನು ಹಗ್ಗದ ಸಹಾಯದಿಂದ ಹೊರತೆಗೆದಿದ್ದಾರೆ.

truck
truck
author img

By

Published : Jan 12, 2021, 1:07 PM IST

ಕುಟ್ಸಾಪೊ (ನಾಗಾಲ್ಯಾಂಡ್): ಇಲ್ಲಿನ ಹಳ್ಳಿಯೊಂದರ ನೂರಾರು ಗ್ರಾಮಸ್ಥರು ಕಿರಿದಾದ ರಸ್ತೆಯಿಂದ 70 ಅಡಿಗಳಷ್ಟು ಕೆಳಗೆ ಬಿದ್ದಿದ್ದ ಟ್ರಕ್ ಅನ್ನು ಹೊರತೆಗೆದಿದ್ದಾರೆ. ಯಾವುದೇ ಯಂತ್ರೋಪಕರಣಗಳು ಲಭ್ಯವಿಲ್ಲದ ಕಾರಣ, ಗ್ರಾಮಸ್ಥರು ಹಗ್ಗದ ಸಹಾಯದಿಂದ ಟ್ರಕ್​​ ಮೇಲೆತ್ತಿದ್ದಾರೆ.

ಹಗ್ಗದ ಸಹಾಯದಿಂದ ಟ್ರಕ್ ಮೇಲೆತ್ತಿದ ಗ್ರಾಮಸ್ಥರು

ನಾಗಾಲ್ಯಾಂಡ್‌ನ ಕುಟ್ಸಾಪೊ ಗ್ರಾಮದಲ್ಲಿ ಟ್ರಕ್ ಕಂದಕಕ್ಕೆ ಬಿದ್ದಿದ್ದು, ಸ್ಥಳೀಯ ಗ್ರಾಮಾಡಳಿತವು ಟ್ರಕ್ ಮೇಲೆತ್ತಲು ಗ್ರಾಮದ ದಷ್ಟಪುಷ್ಟ ಯುವಕರ ಬಳಿ ಕೋರಿಕೊಂಡಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಟ್ರಕ್​ನೊಂದಿಗೆ ಚಾಲಕ ಕೂಡಾ ಕೆಳಗೆ ಬಿದ್ದಿದ್ದು, ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.