ETV Bharat / bharat

ರಸ್ತೆ ಅಪಘಾತಗಳಲ್ಲಿ ಸಾವಿಗೀಡಾಗುವವರ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲೇ ನಂಬರ್​ ಒನ್ - Geneva, India ranks number 3 as per number of accidents.

ಜಿನೀವಾದ ಇಂಟರ್​​ನ್ಯಾಷನಲ್ ರೋಡ್ ಫೆಡರೇಶನ್ ಹೊರ ತಂದಿರುವ ವಿಶ್ವ ರಸ್ತೆ ಅಂಕಿ-ಅಂಶಗಳ ಪ್ರಕಾರ, ರಸ್ತೆ ಅಪಘಾತಗಳಲ್ಲಿ ಸಾವಿಗೀಡಾಗುವವರ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲೇ ಅಗ್ರಸ್ಥಾನದಲ್ಲಿದೆ ಎಂದು ತಿಳಿದು ಬಂದಿದೆ..

India tops world in terms of number of persons killed in road accidents
ಸಚಿವ ನಿತಿನ್ ಗಡ್ಕರಿ
author img

By

Published : Apr 6, 2022, 5:39 PM IST

ನವದೆಹಲಿ : ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ರಸ್ತೆ ಅಪಘಾತಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ರಸ್ತೆ ಅಪಘಾತಗಳಲ್ಲಿ ಸಾವಿಗೀಡಾಗುವವರ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲೇ ಅಗ್ರಸ್ಥಾನದಲ್ಲಿದೆ ಎಂದು ಅವರು ಹೇಳಿದ್ದಾರೆ. ಜಿನೀವಾದ ಇಂಟರ್​​ನ್ಯಾಷನಲ್ ರೋಡ್ ಫೆಡರೇಶನ್ ಹೊರತಂದಿರುವ ವಿಶ್ವ ರಸ್ತೆ ಅಂಕಿ-ಅಂಶಗಳು (ಡಬ್ಲ್ಯುಆರ್ಎಸ್) 2018ರ ಇತ್ತೀಚಿನ ಸಂಚಿಕೆಯನ್ನು ಆಧರಿಸಿ, ಅಪಘಾತದಲ್ಲಿ ಸತ್ತವರ ಸಂಖ್ಯೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ.

ಇನ್ನೂ ಗಾಯಗೊಂಡ ವ್ಯಕ್ತಿಗಳ ಸಂಖ್ಯೆಯಲ್ಲಿ 3 ನೇ ಸ್ಥಾನದಲ್ಲಿದೆ. ಇದಲ್ಲದೆ, 18 ರಿಂದ 45 ವರ್ಷದವರ ಸಾವಿನ ಶೇಕಡಾವಾರು ಪ್ರಮಾಣವು 2020 ರಲ್ಲಿ 69.80ರಷ್ಟಿದೆ ಎಂದು ಸಂಸತ್ತಿಗೆ ನಿತಿನ್​ ಗಡ್ಕರಿ ತಿಳಿಸಿದರು.

ಇದನ್ನೂ ಓದಿ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಸಿಬಿಐ ವಶಕ್ಕೆ

ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯ ಮೂರು ವಿಭಾಗಗಳು ಅಂದರೆ, ದೆಹಲಿ-ದೌಸಾ-ಲಾಲ್ಸೋಟ್ (ಜೈಪುರ) (214 ಕಿಮೀ), ವಡೋದರಾ- ಅಂಕೆಲೇಶ್ವರ (100 ಕಿ.ಮೀ) ಮತ್ತು ಕೋಟಾ-ರತ್ಲಾಮ್ ಜಬುವಾ (245 ಕಿ.ಮೀ) ಮಾರ್ಚ್ 23ರೊಳಗೆ ಪೂರ್ಣಗೊಳ್ಳಲು ಯೋಜಿಸಲಾಗಿದೆ ಎಂದು ಅವರು ಹೇಳಿದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.