ETV Bharat / bharat

ಸ್ವದೇಶಿ ನಿರ್ಮಿತ ಪರಮಾಣು ಸಾಮರ್ಥ್ಯದ ಜಲಾಂತರ್ಗಾಮಿ ಕೆ-4 ಕ್ಷಿಪಣಿ ಪರೀಕ್ಷೆ ಯಶಸ್ವಿ - ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ

3,500 ಕಿ.ಮೀ. ದೂರ ಕ್ರಮಿಸಬಲ್ಲ ಪರಮಾಣು ಸಾಮರ್ಥ್ಯದ ಜಲಾಂತರ್ಗಾಮಿ ಲಾಂಚರ್ ಕೆ-4 ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ನೀರೊಳಗಿನ ನಿಗದಿತ ಸ್ಥಳದಿಂದ ಭಾರತ ಯಶಸ್ವಿಯಾಗಿ ಪ್ರಾಯೋಗಿಕ ಪರೀಕ್ಷೆ ನಡೆಸಿದೆ.

India tests submarine launched ballistic missile
ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆ, ಯಶಸ್ವಿಯಾಗಿ ನಡೆಸಿದ ಭಾರತ
author img

By

Published : Jan 20, 2020, 9:38 AM IST

Updated : Dec 15, 2022, 11:10 AM IST

ವಿಶಾಖಪಟ್ಟಣಂ: 3,500 ಕಿ.ಮೀ. ದೂರ ಕ್ರಮಿಸಬಲ್ಲ ಪರಮಾಣು ಸಾಮರ್ಥ್ಯದ ಜಲಾಂತರ್ಗಾಮಿ ಲಾಂಚರ್ ಕೆ-4 ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ನೀರೊಳಗಿನ ನಿಗದಿತ ಸ್ಥಳದಿಂದ ಭಾರತ ಯಶಸ್ವಿ ಪ್ರಾಯೋಗಿಕ ಪರೀಕ್ಷೆ ನಡೆಸಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮೂಲಗಳು ತಿಳಿಸಿವೆ.

ಭಾನುವಾರ ಮಧ್ಯಾಹ್ನ ವಿಶಾಖಪಟ್ಟಣಂ ಕರಾವಳಿ ಭಾಗದಲ್ಲಿ ಯಶಸ್ವಿಯಾಗಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ. ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಈ ಕ್ಷಿಪಣಿಗಳನ್ನು ಪರಮಾಣು ಚಾಲಿತ ಅರಿಹಂತ್​ನಂತಹ ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆಗಳಲ್ಲಿ ಅಳವಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಈ ಕ್ಷಿಪಣಿಗಳನ್ನು ಒಮ್ಮೆ ಸೇರಿಸಿಕೊಂಡರೆ ಸ್ಥಳೀಯ ಬ್ಯಾಲಿಸ್ಟಿಕ್ ಕ್ಷಿಪಣಿ (ಎಸ್‌ಎಸ್‌ಬಿಎನ್) ಅರಿಹಂತ್​ಗೆ ಮುಖ್ಯ ಬಲವಾಗಲಿದೆ. ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆಗಳಿಂದಲೇ ಕ್ಷಿಪಣಿಗಳನ್ನು ಉಡಾಯಿಸುವ ಸಾಮರ್ಥ್ಯವನ್ನು ಭಾರತ ಹೊಂದಲಿದೆ. ಕ್ಷಿಪಣಿ 1.3 ಮೀಟರ್ ವ್ಯಾಸ ಹೊಂದಿದ್ದು, 12 ಮೀಟರ್ ಉದ್ದವಿದೆ ಎಂದು ವರದಿಯಾಗಿದೆ. ಇದರ ತೂಕ ಸುಮಾರು 17 ಟನ್ ಆಗಿದೆ.

ಕೆ-4 ಅಭಿವೃದ್ಧಿಪಡಿಸುವ ಮೊದಲು ಅನೇಕ ಬಾರಿ ಪರೀಕ್ಷೆ ನಡೆಸಲಾಗಿದೆ. ಕ್ಷಿಪಣಿಯನ್ನು ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಕರಾವಳಿಯಿಂದ 45 ನಾಟಿಕಲ್ ಮೈಲಿ ದೂರದಲ್ಲಿರುವ ಐಎನ್ಎಸ್ ಅರಿಹಂತ್​ನಿಂದ ಮಾರ್ಚ್ 31, 2016ರಂದು ಮೊದಲಿಗೆ ಪರೀಕ್ಷೆ ನಡೆಸಲಾಗಿತ್ತು.

Last Updated : Dec 15, 2022, 11:10 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.