ETV Bharat / bharat

ಹಿಂಸಾಚಾರವನ್ನು ತಕ್ಷಣವೇ ಕೊನೆಗೊಳಿಸುವುದನ್ನು ಭಾರತ ಬೆಂಬಲಿಸುತ್ತದೆ : ಸಚಿವ ಎಸ್. ಜೈಶಂಕರ್

author img

By

Published : Apr 6, 2022, 3:54 PM IST

ಉಕ್ರೇನ್ ನಗರದ ಬುಚಾದಲ್ಲಿ ನಡೆದ ನಾಗರಿಕ ಹತ್ಯೆಗಳ ಕುರಿತ ವರದಿಗಳನ್ನು ನೋಡಿ ಭಾರತವು ವಿಚಲಿತವಾಗಿದೆ. ಅಲ್ಲಿ ನಡೆದಿರುವ ಹತ್ಯೆಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ. ನಾವು ಸಂಘರ್ಷದ ವಿರುದ್ಧ ಬಲವಾಗಿ ಇದ್ದೇವೆ ಎಂದು ಲೋಕಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ..

ಸಚಿವ ಎಸ್. ಜೈಶಂಕರ್
ಸಚಿವ ಎಸ್. ಜೈಶಂಕರ್

ನವದೆಹಲಿ: ಭಾರತವು ಉಕ್ರೇನ್-ರಷ್ಯಾ ಸಂಘರ್ಷವನ್ನು ವಿರೋಧಿಸುತ್ತದೆ. ಬುಚಾದಲ್ಲಿ ನಡೆದಂತಹ ನಾಗರಿಕ ಹತ್ಯೆಯ ಬಗ್ಗೆ ಸ್ವತಂತ್ರ ತನಿಖೆಯಾಗಲಿ. ಮುಗ್ಧ ಜೀವಗಳ ಬಲಿ ಪಡೆಯುವುದನ್ನು ನಿಲ್ಲಿಸಲು, ಯುದ್ಧವನ್ನು ಅಂತ್ಯಗೊಳಿಸುವುದು ಬಿಟ್ಟು ಬೇರೆ ಮಾರ್ಗವಿಲ್ಲ ಎಂದು ಸರ್ಕಾರ ಬುಧವಾರ ಲೋಕಸಭೆಗೆ ತಿಳಿಸಿದೆ.

ನಾವು ಸಂಘರ್ಷದ ವಿರುದ್ಧ ಬಲವಾಗಿ ಇದ್ದೇವೆ. ರಕ್ತವನ್ನು ಚೆಲ್ಲುವ ಮೂಲಕ ಮುಗ್ಧ ಜೀವಗಳ ಬಲಿ ಪಡೆಯಾಲಾಗುತ್ತಿದೆ. ಇದನ್ನು ನಿಲ್ಲಿಸಲು ಬೇರೆ ಯಾವ ಮಾರ್ಗವೂ ಕಾಣುತ್ತಿಲ್ಲ. ಏನೇ ಸಂಘರ್ಷವಿದ್ದರೂ ಅದನ್ನು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಬಗೆಹರಿಸಿಕೊಳ್ಳುವುದು ಸರಿಯಾದ ಮಾರ್ಗವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.

  • We have been in touch with Hungary, Romania, Czech Republic, Kazakhstan and Poland (about continuing education for the students evacuated from #Ukraine) because they have similar models of education: EAM Dr S Jaishankar in Lok Sabha pic.twitter.com/SmNsyuuZt2

    — ANI (@ANI) April 6, 2022 " class="align-text-top noRightClick twitterSection" data=" ">

ಉಕ್ರೇನ್ ನಗರದ ಬುಚಾದಲ್ಲಿ ನಡೆದ ನಾಗರಿಕ ಹತ್ಯೆಗಳ ಕುರಿತು ಮಾತನಾಡಿದ ಜೈಶಂಕರ್, ವರದಿಗಳನ್ನು ನೋಡಿ ಭಾರತವು ವಿಚಲಿತವಾಗಿದೆ. ಅಲ್ಲಿ ನಡೆದಿರುವ ಹತ್ಯೆಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ. ಇದು ಅತ್ಯಂತ ಗಂಭೀರವಾದ ವಿಷಯವಾಗಿದೆ ಮತ್ತು ಸ್ವತಂತ್ರ ತನಿಖೆಯ ಕರೆಗೆ ನಾವು ಬೆಂಬಲಿಸುತ್ತೇವೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ: ಅಲಿಘಡ್​ ಮುಸ್ಲಿಂ ವಿವಿ ಪ್ರಾಧ್ಯಾಪಕನಿಗೆ ನೋಟಿಸ್​

ಉಕ್ರೇನ್ ಪರಿಸ್ಥಿತಿಗೆ ಸಂಬಂಧಿಸಿದಂತೆ ಭಾರತದ ಕ್ರಮಗಳಿಗೆ ರಾಜಕೀಯ ಬಣ್ಣ ನೀಡುವುದು ದುರದೃಷ್ಟಕರ ಎಂದು ಜೈಶಂಕರ್​​ ಹೇಳಿದರು. ಒಂದು ವೇಳೆ ಭಾರತವು ಒಂದು ಕಡೆಯವರಿಗೆ ಬೆಂಬಲಿಸಿದ್ರೆ, ಅದು ಶಾಂತಿಯ ಒಂದು ಭಾಗವಾಗಿದೆ ಮತ್ತು ಅದು ಹಿಂಸಾಚಾರವನ್ನು ತಕ್ಷಣವೇ ಅಂತ್ಯಗೊಳಿಸಲು. ಇದು ನಮ್ಮ ತಾತ್ವಿಕ ನಿಲುವು ಮತ್ತು ವಿಶ್ವಸಂಸ್ಥೆ ಸೇರಿದಂತೆ ಅಂತಾರಾಷ್ಟ್ರೀಯ ವೇದಿಕೆಗಳು ಮತ್ತು ಚರ್ಚೆಗಳಲ್ಲಿ ನಮ್ಮ ಸ್ಥಾನವನ್ನು ಸತತವಾಗಿ ಮಾರ್ಗದರ್ಶನ ಮಾಡಿದೆ ಎಂದು ಜೈಶಂಕರ್ ಹೇಳಿದರು.

ಪ್ರತಿಪಕ್ಷಗಳು, ವಿಶೇಷವಾಗಿ ತೃಣಮೂಲ ಕಾಂಗ್ರೆಸ್, ಕಾಂಗ್ರೆಸ್ ಮತ್ತು ಇತರರು ಯುದ್ಧ ಪೀಡಿತ ದೇಶದಿಂದ ಬಂದಿರುವ ವಿದ್ಯಾರ್ಥಿಗಳ ಶಿಕ್ಷಣದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಚಾರವಾಗಿ ಭಾರತವು ಪೋಲೆಂಡ್, ರೊಮೇನಿಯಾ, ಕಜಕಿಸ್ತಾನ್, ಹಂಗೇರಿ ಜೊತೆಗೆ ಮಾತುಕತೆ ನಡೆಸುತ್ತಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.