ನವದೆಹಲಿ: ಬಾಂಗ್ಲಾ ವಿರುದ್ಧ ಕಾನ್ಪುರದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಇಂದಿನ 4ನೇ ದಿನದಾಟದಲ್ಲಿ ಭಾರತದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಹೊಸ ದಾಖಲೆ ಬರೆದಿದ್ದಾರೆ. ದೀರ್ಘ ಸ್ವರೂಪದ ಕ್ರಿಕೆಟ್‌ನಲ್ಲಿ ಅವರು 300 ವಿಕೆಟ್‌ಗಳನ್ನು ಪೂರೈಸಿದ್ದಾರೆ. ಇದರೊಂದಿಗೆ ಈ ಸಾಧನೆ ಮಾಡಿದ 7ನೇ ಭಾರತೀಯ ಮತ್ತು ಮೊದಲ ಎಡಗೈ ಬೌಲರ್ ಎನಿಸಿಕೊಂಡಿದ್ದಾರೆ.
ಈ ಮೈಲಿಗಲ್ಲು ತಲುಪಲು ಜಡೇಜಾ 17,428 ಎಸೆತಗಳನ್ನು ತೆಗೆದುಕೊಂಡಿದ್ದಾರೆ. ಅಶ್ವಿನ್ ಬಳಿಕ ಅತ್ಯಂತ ವೇಗವಾಗಿ 300 ವಿಕೆಟ್ ಪಡೆದ ಎರಡನೇ ಬೌಲರ್ ಕೂಡ ಹೌದು. ಬಾಂಗ್ಲಾದೇಶದ ಖಲೀಲ್ ಅಹ್ಮದ್ ಅವರ ವಿಕೆಟ್ ಪಡೆಯುತ್ತಲೇ ಜಡೇಜಾ ಈ ಮೈಲಿಗಲ್ಲು ತಲುಪಿದರು.
Last wicket of the innings and it's a special one for @imjadeja 😎
— BCCI (@BCCI) September 30, 2024
3⃣0⃣0⃣ wickets in Test Cricket 👏👏
Live - https://t.co/JBVX2gz6EN#TeamIndia | #INDvBAN | @IDFCFIRSTBank pic.twitter.com/1hZhQcq7Vz
7ನೇ ಭಾರತೀಯ: ಜಡೇಜಾ ಟೆಸ್ಟ್ ಕ್ರಿಕೆಟ್‌ನಲ್ಲಿ 300 ವಿಕೆಟ್ ಪಡೆದ 7ನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. 300 ಅಥವಾ ಅದಕ್ಕಿಂತ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಭಾರತದ ಇತರ ಬೌಲರ್‌ಗಳ ಪಟ್ಟಿಯಲ್ಲಿ ಅನಿಲ್ ಕುಂಬ್ಳೆ (619) ಮೊದಲ ಸ್ಥಾನದಲ್ಲಿದ್ದರೇ, ಆರ್ ಅಶ್ವಿನ್ (524), ಕಪಿಲ್ ದೇವ್ (434), ಹರ್ಭಜನ್ ಸಿಂಗ್ (417), ಇಶಾಂತ್ ಶರ್ಮಾ (311) ಮತ್ತು ಜಹೀರ್ ಖಾನ್ (311) ನಂತರದ ಸ್ಥಾನದಲ್ಲಿದ್ದಾರೆ.
RAVINDRA JADEJA HAS COMPLETED 300 WICKETS IN TEST CRICKET.
— Tanuj Singh (@ImTanujSingh) September 30, 2024
- Sir Jadeja, One of the Greatest Ever. 🐐 pic.twitter.com/NFeFmmE2DY
300 ವಿಕೆಟ್ ಮತ್ತು 3000+ ರನ್‌ಗಳನ್ನು ವೇಗದ ಆಟಗಾರ: ರವೀಂದ್ರ ಜಡೇಜಾ ಅವರು ಇಂದು ತಮ್ಮ 74ನೇ ಟೆಸ್ಟ್ ಪಂದ್ಯದಲ್ಲಿ 300 ವಿಕೆಟ್‌ಗಳನ್ನು ಪೂರೈಸುವುದರ ಜೊತೆಗೆ 3000+ ರನ್‌ಗಳ ಅನ್ನು ಪೂರ್ಣಗೊಳಿಸಿದರು. ಈ ಸಾಧನೆ ಮಾಡಿದ ಶ್ರೇಷ್ಠ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಇಯಾನ್ ಬೋಥಮ್ ನಂತರ ಎರಡನೇ ಆಟಗಾರರಾದರು. ಈ ಸಾಧನೆ ಮಾಡಲು ಇಯಾನ್ ಬೋಥಮ್ 72 ಪಂದ್ಯಗಳನ್ನು ತೆಗೆದುಕೊಂಡರೇ, ರವೀಂದ್ರ ಜಡೇಜಾ 74 ಪಂದ್ಯಗಳನ್ನು ತೆಗೆದುಕೊಂಡಿದ್ದಾರೆ. ಉಳಿದಂತೆ ಈ ಸಾಧನೆ ಮಾಡಿರುವ ಇತರ ಆಟಗಾರರಲ್ಲಿ ಇಮ್ರಾನ್ ಖಾನ್ 75 ಪಂದ್ಯ, ಕಪಿಲ್ ದೇವ್/ ರಿಚರ್ಡ್ ಹ್ಯಾಡ್ಲಿ 83, ಶಾನ್ ಪೊಲಾಕ್ 87, ರವಿಚಂದ್ರನ್ ಅಶ್ವಿನ್ 88 ಪಂದ್ಯಗಳನ್ನು ತೆಗೆದುಕೊಂಡಿದ್ದಾರೆ.
ಇದನ್ನೂ ಹೊರತು ಪಡಿಸಿ ಏಕದಿನ ಪಂದ್ಯದಲ್ಲೂ ಜಡೇಜಾ ಉತ್ತಮ ದಾಖಲೆ ಹೊಂದಿದ್ದಾರೆ. ಇದೂವರೆಗೂ 189 ಪಂದ್ಯಗಳನ್ನು ಆಡಿರುವ ಜಡ್ಡು ಒಟ್ಟು 220 ವಿಕೆಟ್‌ಗಳನ್ನು ಪಡೆದಿದಿದ್ದಾರೆ. 33 ರನ್ಗಳಿಗೆ 5 ವಿಕೆಟ್ ಪಡೆದಿರುವುದು ಅವರ ಅತ್ಯುತ್ತಮ ದಾಖಲೆಯಾಗಿದೆ. ಜತೆಗೆ 7 ಬಾರಿ 4 ವಿಕೆಟ್ ಪಡೆದಿದ್ದು, 2 ಬಾರಿ 5 ವಿಕೆಟ್‌ಗಳನ್ನು ಉರುಳಿಸಿದ್ದಾರೆ.