ETV Bharat / bharat

ಲಂಡನ್‌ ಭಾರತೀಯ ಹೈಕಮಿಷನ್ ಕಚೇರಿಯಲ್ಲಿ ತ್ರಿವರ್ಣ ಧ್ವಜ ಕೆಳಗಿಳಿಸಿ ಖಲಿಸ್ತಾನಿಗಳ ಅಟ್ಟಹಾಸ!

ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ ಕಚೇರಿ ಕಟ್ಟಡದಲ್ಲಿದ್ದ ಭಾರತದ ತ್ರಿವರ್ಣ ಧ್ವಜವನ್ನು ಖಲಿಸ್ತಾನ್ ಪ್ರತ್ಯೇಕತಾವಾದಿಗಳು ಕೆಳಗಿಳಿಸಿ ಅವಮಾನಿಸಿದ್ದಾರೆ.

Khalistanis with flag down
ಭಾರತದ ಧ್ವಜ ಕೆಳಗಿಳಿಸಿ ಅಟ್ಟಹಾಸ ಮೆರೆದ ಖಲಿಸ್ತಾನಿಗಳು
author img

By

Published : Mar 20, 2023, 8:49 AM IST

Updated : Mar 20, 2023, 8:55 AM IST

ನವದೆಹಲಿ: ಖಲಿಸ್ತಾನಿಗಳ ಉಪಟಳ ಮಿತಿಮೀರಿದೆ. ಪ್ರತ್ಯೇಕತಾವಾದಿ ಸಂಘಟನೆಯ ಬೆಂಬಲಿಗರು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ನಲ್ಲಿರುವ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿದ್ದಾರೆ. ಆ ಬಳಿಕ ಖಲಿಸ್ತಾನ್ ಧ್ವಜ ಹಾರಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಭಾರತ ಸರ್ಕಾರವು ನವದೆಹಲಿಯಲ್ಲಿರುವ ಬ್ರಿಟಿಷ್ ಡೆಪ್ಯೂಟಿ ಹೈಕಮಿಷನರ್​ ಕರೆಸಿಕೊಂಡು ಭದ್ರತಾ ಲೋಪದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ವಿವರಣೆ ಕೇಳಿದೆ.

ಬ್ರಿಟನ್‌ನಲ್ಲಿರುವ ಭಾರತೀಯ ರಾಜತಾಂತ್ರಿಕ ಕಚೇರಿ ಮತ್ತು ಸಿಬ್ಬಂದಿಯ ಭದ್ರತೆಗೆ ಯುಕೆ ಸರ್ಕಾರದ ಉದಾಸೀನತೆ ತೋರಿಸಿರುವುದನ್ನು ಭಾರತ ಖಂಡಿಸಿದೆ. ಭದ್ರತಾ ಲೋಪ ''ಸ್ವೀಕಾರಾರ್ಹವಲ್ಲ'' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ತಿಳಿಸಿದೆ. ಹೈಕಮಿಷನರ್ ಅಲೆಕ್ಸ್ ಎಲ್ಲಿಸ್ ದೆಹಲಿಯಿಂದ ಹೊರಗಿರುವ ಕಾರಣ, ಬ್ರಿಟಿಷ್ ಡೆಪ್ಯುಟಿ ಹೈ ಕಮಿಷನರ್ ಕ್ರಿಸ್ಟಿನಾ ಸ್ಕಾಟ್ ಅವರನ್ನು ಸಚಿವಾಲಯಕ್ಕೆ ಕರೆಸಿ ಘಟನೆ ಬಗ್ಗೆ ವಿವರಣೆ ಕೇಳಲಾಗಿದೆ.

ಕಠಿಣ ಕ್ರಮಕ್ಕೆ ಒತ್ತಾಯ: ವಿಯೆನ್ನಾ ಒಪ್ಪಂದದ ಅಡಿಯಲ್ಲಿ ಯುಕೆ ಸರ್ಕಾರದ ಮೂಲಭೂತ ಜವಾಬ್ದಾರಿಗಳನ್ನು ರಾಜತಾಂತ್ರಿಕ ಅಧಿಕಾರಿಗೆ ನೆನಪಿಸಲಾಗಿದೆ. ಭಾರತೀಯ ರಾಜತಾಂತ್ರಿಕ ಕಚೇರಿ ಆವರಣ ಮತ್ತು ಸಿಬ್ಬಂದಿಯ ಭದ್ರತೆಗೆ ಸರ್ಕಾರ ಉದಾಸೀನತೆ ಪ್ರದರ್ಶಿಸಿದೆ. ಇದು ಸ್ವೀಕಾರಾರ್ಹವಲ್ಲ ಎಂದು ಎಂಇಎ ಕಠಿಣ ಪದಗಳಲ್ಲಿ ತಿಳಿಸಿದೆ. ಘಟನೆಯಲ್ಲಿ ಭಾಗಿಯಾಗಿರುವವರನ್ನು ಗುರುತಿಸಿ ಬಂಧಿಸಬೇಕು. ತಕ್ಷಣವೇ ಕಾನೂನು ಕ್ರಮ ಜರುಗಿಸಬೇಕು ಎಂದು ಭಾರತ ಒತ್ತಾಯಿಸಿದೆ.

  • I condemn the disgraceful acts today against the people and premises of the @HCI_London - totally unacceptable.

    — Alex Ellis (@AlexWEllis) March 19, 2023 " class="align-text-top noRightClick twitterSection" data=" ">

ಹೈಕಮಿಷನರ್ ಎಲ್ಲಿಸ್ ಟ್ವೀಟ್‌ನಲ್ಲಿ ಪ್ರತಿಕ್ರಿಯಿಸಿ, "ಹೇಯ ಕೃತ್ಯವನ್ನು ಖಂಡಿಸುತ್ತೇನೆ. ಇದು ಸ್ವೀಕಾರಾರ್ಹವಲ್ಲ'' ಎಂದು ತಿಳಿಸಿದ್ದಾರೆ.

  • Indian flag is being pulled down from the Indian High Commission in London by Khalistan supporters. A regime that calls itself nationalist can’t even protect country’s flag in its diplomatic premises. pic.twitter.com/VA8gkzwR9b

    — Ashok Swain (@ashoswai) March 19, 2023 " class="align-text-top noRightClick twitterSection" data=" ">

ವಿಡಿಯೋದಲ್ಲೇನಿದೆ?: ಹೈಕಮಿಷನ್‌ ಕಚೇರಿಯ ಮೊದಲ ಮಹಡಿಯ ಕಿಟಕಿಯ ಮೂಲಕ ಭಾರತೀಯ ಅಧಿಕಾರಿಯೊಬ್ಬರು ಈ ದೃಶ್ಯ ಸೆರೆ ಹಿಡಿದ್ದಾರೆ. ಪ್ರತಿಭಟನಾಕಾರರು ಭಾರತದ ಧ್ವಜ ಕೆಳಗಿಳಿಸಿ ಖಲಿಸ್ತಾನಿ ಧ್ವಜ ಹಾರಿಸಿರುವುದು ಕಂಡುಬಂದಿದೆ. ಸ್ಕಾಟ್ಲೆಂಡ್ ಯಾರ್ಡ್ ಪ್ರದೇಶದಲ್ಲಿ ಘಟನೆ ನಡೆದಿದೆ. ಯುಕೆ ಸರ್ಕಾರ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ.

ಇದನ್ನೂ ಓದಿ: ತೋಷಖಾನಾ ಕೇಸ್​: ವಿಚಾರಣೆಗೆ ತೆರಳುವಾಗ ಇಮ್ರಾನ್​ ಖಾನ್​ ಬೆಂಗಾವಲು ವಾಹನ ಪಲ್ಟಿ

Last Updated : Mar 20, 2023, 8:55 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.