ಮುಂಬೈ: ಜೂನ್ 18 ರಿಂದ ಆರಂಭವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ನಲ್ಲಿ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲ್ಯಾಂಡ್ ಭಾರತ ಸಲೀಸಾಗಿ ತೆಗೆದುಕೊಳ್ಳಬಾರದು ಎಂದು ಭಾರತದ ಮಾಜಿ ವೇಗಿ ಅಜಿತ್ ಅಗರ್ಕರ್ ಹೇಳಿದ್ದಾರೆ.
"ಟೆಸ್ಟ್ ಚಾಂಪಿಯನ್‌ಶಿಪ್, ಟಿ 20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ, ವಿಶ್ವಕಪ್ ಆಗಿರಲಿ ಅವರನ್ನು ಸಲೀಸಾಗಿ ತೆಗೆದುಕೊಳ್ಳಲು ಆಗುವುದಿಲ್ಲ. ಕಾರಣ ಅವರು ಯಾವಾಗಲೂ ತಿರುಗಿ ಬೀಳುತ್ತಾರೆ. ಅದು ಫೈನಲ್ಸ್ ಅಲ್ಲದಿದ್ದರೆ, ಕ್ವಾರ್ಟರ್-ಫೈನಲ್ಸ್ ಅಥವಾ ಸೆಮಿಫೈನಲ್ನಲ್ಲಿ" ಎಂದು ಹೇಳಿದರು.
ಭಾರತ ಮತ್ತು ನ್ಯೂಜಿಲ್ಯಾಂಡ್ ಜೂನ್ 18 ರಿಂದ ಸೌತಾಂಪ್ಟನ್‌ನಲ್ಲಿ ನಡೆಯಲಿರುವ ಉದ್ಘಾಟನಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಡಲು ಸಜ್ಜಾಗಿದೆ.
"ಭಾರತವು ನ್ಯೂಜಿಲ್ಯಾಂಡ್ ಅನ್ನು ಸಲೀಸಾಗಿ ತೆಗೆದುಕೊಳ್ಳುವುದಿಲ್ಲ ಎಂದು ಭಾವಿಸುತ್ತೇನೆ. ಈ ಹಿಂದೆ ಭಾರತ ನ್ಯೂಜಿಲ್ಯಾಂಡ್ ಪ್ರವಾಸ ಕೈಗೊಂಡಾಗ ಅವರು ನಮ್ಮನ್ನ ಸೋಲಿಸಿದರು. ಆದ್ದರಿಂದ, ನಾವು ಉತ್ತಮವಾಗಿ ಆಡಬೇಕಾಗುತ್ತದೆ. ಈ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಸೋಲಿಸಿ ಎಂದು, "ಅವರು ಹೇಳಿದರು.