ನವದೆಹಲಿ: ಭಾರತ 2 ಬಿಲಿಯನ್ ಅಥವಾ 200 ಕೋಟಿ ಕೋವಿಡ್ ವ್ಯಾಕ್ಸಿನ್ ಡೋಸ್ ವಿತರಿಸಿ ದಾಖಲೆ ಸೃಷ್ಟಿಸಿದೆ. ಈ ಕುರಿತು ನಿನ್ನೆ ಪ್ರತಿಕ್ರಿಯಿಸಿದ್ದ ಪ್ರಧಾನಿ ಮೋದಿ, "ಕೋವಿಡ್ ಮಹಾಮಾರಿಯನ್ನು ಹೊಡೆದೋಡಿಸಲು ದೇಶ ಪಣ ತೊಟ್ಟಿದ್ದು ಪ್ರತಿಯೊಬ್ಬ ನಾಗರಿಕನ ಪ್ರಯತ್ನದಿಂದ ಇದು ಸಾಧ್ಯವಾಗಿದೆ" ಎಂದು ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಕೇಂದ್ರ ಆರೋಗ್ಯ ಸಚಿವ ಮಾನ್ಸುಖ್ ಮಾಂಡವಿಯಾ ಪ್ರತಿಕ್ರಿಯಿಸಿ,"ಕೋವಿಡ್ ವ್ಯಾಕ್ಸಿನೇಷನ್ ವಿಚಾರದಲ್ಲಿ ಭಾರತ 2 ಬಿಲಿಯನ್ ಡೋಸ್ ಗಡಿ ದಾಟಿದೆ" ಎಂದು ತಿಳಿಸಿ ಹರ್ಷ ವ್ಯಕ್ತಪಡಿಸಿದ್ದಾರೆ. ಶನಿವಾರದವರೆಗೆ ದೇಶವು 1.99 ಬಿಲಿಯನ್ ವ್ಯಾಕ್ಸಿನ್ ಡೋಸ್ ವಿತರಿಸಿದ್ದು ಈ ಪೈಕಿ, 1.01 ಬಿಲಿಯನ್ ಮೊದಲ ಡೋಸ್ ಹಾಗು 925 ಬಿಲಿಯನ್ 2ನೇ ಡೋಸ್ ಹಾಗು 56.23 ಮಿಲಿಯನ್ ಮುನ್ನೆಚ್ಚರಿಕೆ ಡೋಸ್ ನೀಡಲಾಗಿದೆ.
-
17th July 2022, a day to remember forever. #200CroreVaccinations https://t.co/FtobFYBprV
— Dr Mansukh Mandaviya (@mansukhmandviya) July 17, 2022 " class="align-text-top noRightClick twitterSection" data="
">17th July 2022, a day to remember forever. #200CroreVaccinations https://t.co/FtobFYBprV
— Dr Mansukh Mandaviya (@mansukhmandviya) July 17, 202217th July 2022, a day to remember forever. #200CroreVaccinations https://t.co/FtobFYBprV
— Dr Mansukh Mandaviya (@mansukhmandviya) July 17, 2022
ಶನಿವಾರ ದೇಶದಲ್ಲಿ ಒದಗಿಸಲಾದ 2.5 ಮಿಲಿಯನ್ ವ್ಯಾಕ್ಸಿನ್ ಡೋಸ್‌ಗಳ ಪೈಕಿ 1,95,382 ಡೋಸ್‌ಗಳನ್ನು 12-14 ವಯೋಮಾನದವರಿಗೂ, 82,647 ಡೋಸ್‌ಗಳನ್ನು 17-18 ವಯೋಮಾನದವರಿಗೂ ಹಾಗು 1.66 ಮಿಲಿಯನ್ ಡೋಸ್‌ಗಳನ್ನು 18-59 ಹಾಗು ಮೇಲ್ಪಟ್ಟ ವಯಸ್ಸಿನವರಿಗೆ 2,52,272 ಡೋಸ್‌ಗಳನ್ನು ವಿತರಿಸಲಾಗಿದೆ.
ಭಾರತದಲ್ಲಿ ಮೊದಲ ಕೋವಿಡ್ ಸೋಂಕು ಪ್ರಕರಣ ಕೇರಳದಲ್ಲಿ 2020ರ ಜನವರಿ 30 ರಂದು ಕಂಡು ಬಂದಿತ್ತು. ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್ ಮಹಾಮಾರಿಯನ್ನು 'ಜಾಗತಿಕ ಸಾಂಕ್ರಾಮಿಕ ರೋಗ'ವೆಂದು 2020ರ ಮೇಯಲ್ಲಿ ಘೋಷಿಸಿದೆ. ಕೇಂದ್ರ ಸರ್ಕಾರವು 2020 ರ ಏಪ್ರಿಲ್ ತಿಂಗಳಲ್ಲಿ ಕೋವಿಡ್ ವ್ಯಾಕ್ಸಿನ್‌ಗಾಗಿ ವಿಶೇಷ ಟಾಸ್ಕ್ ಫೋರ್ಸ್ ರಚಿಸಿದ್ದು, 2020 ಆಗಸ್ಟ್‌ನಲ್ಲಿ ಕೋವಿಡ್ ವ್ಯಾಕ್ಸಿನೇಷನ್‌ಗಾಗಿ ರಾಷ್ಟ್ರೀಯ ತಜ್ಞರ ಸಮಿತಿಯನ್ನು ನೇಮಿಸಿತ್ತು.
2021 ರ ಜನವರಿ 1 ರಂದು ಸೀರಂ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ ಕೋವಿಶೀಲ್ಡ್ ಹಾಗು ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೊವ್ಯಾಕ್ಸಿನ್ ತುರ್ತು ಬಳಕೆಗೆ ಅನುಮತಿ ನೀಡಲಾಗಿತ್ತು. 2021ರ ಜನವರಿ 16 ರಿಂದ ದೇಶಾದ್ಯಂತ ಕೋವಿನ್ ವೇದಿಕೆಯ ಮೂಲಕ ಲಸಿಕಾಭಿಯಾನ ಶುರುವಾಗಿದ್ದು ಈವರೆಗೆ ರಾಷ್ಟ್ರದ 949 ಮಿಲಿಯನ್ ವಯಸ್ಕ ಜನಸಂಖ್ಯೆಗೆ ಯಶಸ್ವಿಯಾಗಿ ಲಸಿಕೆ ನೀಡಲಾಗಿದೆ.
ಇದನ್ನೂ ಓದಿ: ಅಸ್ಸೋಂನ ಹಂದಿಗಳಲ್ಲಿ ಆಫ್ರಿಕನ್ ಜ್ವರ ಪತ್ತೆ; ಜಪಾನೀಸ್ ಎನ್ಸೆಫಾಲಿಟಿಸ್‌ಗೆ ಮತ್ತೆ 4 ಸಾವು