ನವದೆಹಲಿ : ತೀವ್ರ ಸಂಕಷ್ಟದಲ್ಲಿರುವ ಆಫ್ಘಾನಿಸ್ತಾನಕ್ಕೆ ಭಾರತದ ನೆರವು ಮುಂದುವರದಿದೆ. 2,000 ಮೆಟ್ರಿಕ್ ಟನ್ ಗೋಧಿಯನ್ನು ಅಟ್ಟಾರಿ-ವಾಘಾ ಗಡಿಯ ಮೂಲಕ ಆಫ್ಘಾನಿಸ್ತಾನಕ್ಕೆ ರವಾನಿಸಲಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಂಗಳವಾರ ಹೇಳಿದೆ.
ನಾಲ್ಕನೇ ಬಾರಿಗೆ ಭಾರತ ಮಾನವೀಯ ನೆರವನ್ನು ನೀಡುತ್ತಿದೆ. ಈ ಬಾರಿಯೂ ಸೇರಿದಂತೆ 8000 ಸಾವಿರ ಮೆಟ್ರಿಕ್ ಟನ್ಗಳಷ್ಟು ಗೋಧಿಯನ್ನು ಆಫ್ಘಾನಿಸ್ತಾನಕ್ಕೆ ರವಾನೆ ಮಾಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವಿಟರ್ನಲ್ಲಿ ಮಾಹಿತಿ ನೀಡಿದ್ದಾರೆ.
-
Our partnership continues. Despatched fourth convoy of humanitarian assistance consisting of 2000 MTs of wheat to Afghanistan today. Total of 8000 MTs sent as on date. @WFP_Afghanistan is partnering with us for the internal distribution of wheat within Afghanistan. pic.twitter.com/rBd1nojRJW
— Arindam Bagchi (@MEAIndia) March 15, 2022 " class="align-text-top noRightClick twitterSection" data="
">Our partnership continues. Despatched fourth convoy of humanitarian assistance consisting of 2000 MTs of wheat to Afghanistan today. Total of 8000 MTs sent as on date. @WFP_Afghanistan is partnering with us for the internal distribution of wheat within Afghanistan. pic.twitter.com/rBd1nojRJW
— Arindam Bagchi (@MEAIndia) March 15, 2022Our partnership continues. Despatched fourth convoy of humanitarian assistance consisting of 2000 MTs of wheat to Afghanistan today. Total of 8000 MTs sent as on date. @WFP_Afghanistan is partnering with us for the internal distribution of wheat within Afghanistan. pic.twitter.com/rBd1nojRJW
— Arindam Bagchi (@MEAIndia) March 15, 2022
ಭಾರತದಿಂದ 2,500 ಟನ್ ಗೋಧಿಯ ನೆರವನ್ನು ಮೊದಲ ಬಾರಿಗೆ ಫೆಬ್ರವರಿ 26ರಂದು ಪಾಕಿಸ್ತಾನದ ಮೂಲಕ ಆಫ್ಘಾನಿಸ್ತಾನದ ಜಲಾಲಾಬಾದ್‌ಗೆ ತಲುಪಿಸಲಾಗಿತ್ತು.
2ನೇ ಬಾರಿಗೆ ಮಾರ್ಚ್ 3ರಂದು 2000 ಮೆಟ್ರಿಕ್ ಟನ್ ಗೋಧಿಯನ್ನು ಅಮೃತಸರದ ಅಟ್ಟಾರಿಯಿಂದ ಆಫ್ಘಾನಿಸ್ತಾನದ ಜಲಾಲಾಬಾದ್‌ಗೆ ಕಳುಹಿಸಲಾಗಿತ್ತು. ಮೂರನೇ ಬಾರಿಗೆ ಮಾರ್ಚ್ 8ರಂದು ಅಟ್ಟಾರಿ-ವಾಘಾ ಗಡಿಯ ಮೂಲಕ 40 ಟ್ರಕ್‌ಗಳಲ್ಲಿ 2,000 ಮೆಟ್ರಿಕ್ ಟನ್ ಗೋಧಿಯನ್ನು ಆಫ್ಘಾನಿಸ್ತಾನಕ್ಕೆ ಕಳುಹಿಸಲಾಗಿತ್ತು.
ಇದನ್ನೂ ಓದಿ: ದೇಶದಲ್ಲಿ 5.3 ಲಕ್ಷಕ್ಕೂ ಅಧಿಕ ಪೊಲೀಸ್ ಹುದ್ದೆಗಳು ಖಾಲಿ: ಅತಿ ಹೆಚ್ಚು ಖಾಲಿ ಇರೋದು ಎಲ್ಲಿ ಗೊತ್ತಾ?
ಈ ತಿಂಗಳ ಆರಂಭದಲ್ಲಿ ಭಾರತವು ಪಾಕಿಸ್ತಾನದ ಮೂಲಕ ಆಫ್ಘಾನಿಸ್ತಾನಕ್ಕೆ 50,000 ಮೆಟ್ರಿಕ್ ಟನ್ ಗೋಧಿಯನ್ನು ಕಳುಹಿಸುವುದಾಗಿ ಘೋಷಿಸಿತ್ತು. ಆ ಘೋಷಣೆಯಂತೆ ಈಗ ಗೋಧಿ ರವಾನೆ ಮಾಡಲಾಗುತ್ತಿದೆ.