ಲೆಪ್ಚಾ (ಹಿಮಾಚಲಪ್ರದೇಶ): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರತಿವರ್ಷದಂತೆ ಈ ಬಾರಿಯೂ ಬೆಳಕಿನ ಹಬ್ಬ ದೀಪಾವಳಿಯನ್ನು ಗಡಿ ಕಾಯುತ್ತಿರುವ ಸೈನಿಕರೊಂದಿಗೆ ಆಚರಿಸಿದ್ದಾರೆ. ಯೋಧರಿಗೆ ಸಿಹಿ ತಿನ್ನಿಸುವ ಮೂಲಕ ಹಬ್ಬದ ಶುಭಾಶಯ ಕೋರಿದ್ದಾರೆ.
ಹಿಮಾಚಲಪ್ರದೇಶದ ಲೆಪ್ಚಾ ಪೋಸ್ಟ್ಗೆ ಭಾನುವಾರ ಭೇಟಿ ನೀಡಿದ ಪ್ರಧಾನಿ, ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿದರು. ಐಟಿಬಿಪಿ ಸೇನಾಧಿಕಾರಿಗಳ ಸಮವಸ್ತ್ರದಲ್ಲಿದ್ದ ಪ್ರಧಾನಿ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದರು.
ಬಳಿಕ ಮಾತನಾಡಿದ ಅವರು, ಭಾರತವು ರಕ್ಷಣಾ ಕ್ಷೇತ್ರದಲ್ಲಿ ದೊಡ್ಡ ಜಾಗತಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಭದ್ರತಾ ಪಡೆಗಳ ಸಾಮರ್ಥ್ಯ ಏರಿಕೆಯ ಜೊತೆಗೆ, ನಮ್ಮ ಮೇಲೆ ವಿಶ್ವದ ನಿರೀಕ್ಷೆಗಳೂ ಹೆಚ್ಚುತ್ತಿವೆ. ಗಡಿಗಳ ರಕ್ಷಣೆ ಅಗತ್ಯವಾಗಿದೆ. ದೇಶದಲ್ಲಿ ಶಾಂತಿ ನೆಲೆಸಿದೆ ಎಂದರೆ ಅದರಲ್ಲಿ ಯೋಧರ ಪಾತ್ರ ಬಲುದೊಡ್ಡದು. ವೀರ ಸೇನಾನಿಗಳು ಹಿಮಾಲಯದಂತಹ ಗಡಿಗಳಲ್ಲಿ ನಿಂತಿರುವವರೆಗೆ ಭಾರತ ಸುರಕ್ಷಿತ ಎಂದು ಪ್ರಧಾನಿ ಹೇಳಿದರು.
-
The courage of our security forces is unwavering. Stationed in the toughest terrains, away from their loved ones, their sacrifice and dedication keep us safe and secure. India will always be grateful to these heroes who are the perfect embodiment of bravery and resilience. pic.twitter.com/Ve1OuQuZXY
— Narendra Modi (@narendramodi) November 12, 2023 " class="align-text-top noRightClick twitterSection" data="
">The courage of our security forces is unwavering. Stationed in the toughest terrains, away from their loved ones, their sacrifice and dedication keep us safe and secure. India will always be grateful to these heroes who are the perfect embodiment of bravery and resilience. pic.twitter.com/Ve1OuQuZXY
— Narendra Modi (@narendramodi) November 12, 2023The courage of our security forces is unwavering. Stationed in the toughest terrains, away from their loved ones, their sacrifice and dedication keep us safe and secure. India will always be grateful to these heroes who are the perfect embodiment of bravery and resilience. pic.twitter.com/Ve1OuQuZXY
— Narendra Modi (@narendramodi) November 12, 2023
ದೇಶ ಸೈನಿಕರಿಗೆ ಋಣಿ: ದೇಶದೊಳಗೆ ಜನರು ಹಬ್ಬದ ಸಂಭ್ರಮ ಆಚರಿಸುತ್ತಿದ್ದರೆ, ಯೋಧರು ಕುಟುಂಬದಿಂದ ದೂರವಿದ್ದು ಗಡಿ ಕಾಯುತ್ತಿರುವುದು ಕರ್ತವ್ಯ ಬದ್ಧತೆಗೆ ಉದಾಹರಣೆಯಾಗಿದೆ. ಹೀಗಾಗಿ ದೇಶ ನಿಮಗೆ ಋಣಿಯಾಗಿದೆ. 30-35 ವರ್ಷಗಳಿಂದ ನಾನು ನಿಮ್ಮೊಂದಿಗೆ ದೀಪಾವಳಿ ಆಚರಿಸಿಕೊಂಡು ಬರುತ್ತಿದ್ದೇನೆ. ನಾನು ಪ್ರಧಾನಿ ಹಾಗೂ ಸಿಎಂ ಆಗಿದ್ದಾಗ ಗಡಿ ಪ್ರದೇಶಗಳಲ್ಲಿ ನಿಮ್ಮ ಜೊತೆ ದೀಪಾವಳಿ ಆಚರಿಸಿದ್ದೇನೆ ಎಂದು ಮೋದಿ ಹೇಳಿದರು.
ಯೋಧರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಗಡಿ ಕಾಯುತ್ತಾರೆ. ಅವರು ದೇಶಕ್ಕೆ ಬಲವಾದ ಗೋಡೆಯಾಗಿದ್ದಾರೆ. ನಮ್ಮ ಭದ್ರತಾ ಪಡೆಗಳನ್ನು ನಿಯೋಜಿಸಿದ ಸ್ಥಳವು ಯಾವುದೇ ದೇವಸ್ಥಾನಕ್ಕಿಂತ ಕಡಿಮೆ ಏನಲ್ಲ ಎಂದ ಪ್ರಧಾನಿ, ಭೂಕಂಪ ಪೀಡಿತ ಪ್ರದೇಶಗಳಲ್ಲಿ ಮತ್ತು ಇತರ ವಿಪತ್ತುಗಳ ಸಮಯದಲ್ಲಿ ನಡೆಸುವ ಸಶಸ್ತ್ರ ಪಡೆಗಳ ಕಾರ್ಯಾಚರಣೆಯನ್ನು ಶ್ಲಾಘಿಸಿದರು.
ಯೋಧರ ಜೊತೆಗೆ ಮೋದಿ ದೀಪಾವಳಿ: ಯೋಧರೊಂದಿಗೆ ದೀಪಾವಳಿ ಆಚರಿಸಿ ಸಿಹಿ ತಿಂಡಿ ತಿನ್ನಿಸಿದ ಚಿತ್ರಗಳನ್ನು ಪ್ರಧಾನಿ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಿಮಾಚಲ ಪ್ರದೇಶದ ಲೆಪ್ಚಾದಲ್ಲಿ ನಮ್ಮ ಕೆಚ್ಚೆದೆಯ ಭದ್ರತಾ ಪಡೆಗಳೊಂದಿಗೆ ದೀಪಾವಳಿ ಸಂಭ್ರಮದಲ್ಲಿ ತೊಡಗಿದ್ದು, ಹೆಮ್ಮೆ ಮೂಡಿಸಿದೆ ಎಂದು ಬರೆದುಕೊಂಡಿದ್ದಾರೆ.
2014 ರಲ್ಲಿ ಪ್ರಧಾನಿ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ, ದೀಪಾವಳಿಯನ್ನು ಸತತವಾಗಿ ಯೋಧರೊಂಗಿಗೆ ಆಚರಿಸುತ್ತಿದ್ದಾರೆ. 2014ರಲ್ಲಿ ಸಿಯಾಚಿನ್ನ ಗ್ಲೇಸಿಯರ್‌ನಲ್ಲಿ ಸೈನಿಕರೊಂದಿಗೆ ಬೆಳಕಿನ ಹಬ್ಬವನ್ನು ಆಚರಿಸಿದರೆ, 2015 ರಲ್ಲಿ ಪಂಜಾಬ್ನ ಸೇನಾ ನೆಲೆಯಲ್ಲಿ ಪಾಕಿಸ್ತಾನದೊಂದಿಗಿನ 1965 ರ ಯುದ್ಧದ 50ನೇ ವಾರ್ಷಿಕೋತ್ಸವದ ಜೊತೆಗೆ ದೀಪಾವಳಿ ಆಚರಿಸಿದ್ದರು.
2016 ರಲ್ಲಿ ಚೀನಾ ಗಡಿಯ ಸಮೀಪವಿರುವ ಸುಮ್ದೋಹ್‌ನಲ್ಲಿ, 2017 ರಲ್ಲಿ ಉತ್ತರ ಕಾಶ್ಮೀರದ ಗುರೆಜ್ ಸೆಕ್ಟರ್‌ನಲ್ಲಿ, 2018 ರಲ್ಲಿ ಉತ್ತರಾಖಂಡದ ಹರ್ಸಿಲ್, 2019 ರಲ್ಲಿ ಜಮ್ಮು ಮತ್ತು ಕಾಶ್ಮೀರದ ರಾಜೌರಿ, 2020 ರಲ್ಲಿ ಲಾಂಗೆವಾಲಾದ ಗಡಿ ಪೋಸ್ಟ್, 2021 ರಲ್ಲಿ ನೌಶೇರಾ, 2022 ರಲ್ಲಿ ಕಾರ್ಗಿಲ್‌ನಲ್ಲಿ ಸಶಸ್ತ್ರ ಪಡೆಗಳೊಂದಿಗೆ ದೀಪಾವಳಿ ಆಚರಿಸಿದ್ದರು.
ಇದನ್ನೂ ಓದಿ: AIನ ಕರಾಳ ಮುಖ ಬಿಚ್ಚಿಟ್ಟ ಡೀಪ್ ಫೇಕ್; ಬೇಕಿದೆ ಕಡಿವಾಣ