ETV Bharat / bharat

India Covid Report: ದೇಶದಲ್ಲಿ ಹೊಸದಾಗಿ 8,309 ಕೋವಿಡ್‌​​ ಕೇಸ್​​ ಪತ್ತೆ, 236 ಮಂದಿ ಸಾವು

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 8,309 ಮಂದಿ ಹೊಸ ಕೋವಿಡ್​​ ಸೋಂಕಿತರು ಪತ್ತೆಯಾಗಿದ್ದು, 236 ಜನ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

author img

By

Published : Nov 29, 2021, 12:12 PM IST

ಕೋವಿಡ್
India covid report

ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 8,309 ಮಂದಿ ಹೊಸ ಕೋವಿಡ್​​ ಸೋಂಕಿತರು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 3,45,80,832ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ದೇಶದಲ್ಲಿ ಸದ್ಯಕ್ಕೆ ಒಟ್ಟು 1,03,859 ಸಕ್ರಿಯ ಪ್ರಕರಣಗಳಿವೆ. ಕೇರಳದಲ್ಲಿ 47,652 , ಮಹಾರಾಷ್ಟ್ರದಲ್ಲಿ11,863 ಮತ್ತು ತಮಿಳುನಾಡಿನಲ್ಲಿ 8,337 ಸಕ್ರಿಯ ಪ್ರಕರಣಗಳಿವೆ. ಜೊತೆಗೆ ನಿನ್ನೆ 236 ಮಂದಿ ಸೋಂಕಿಗೆ ಬಲಿಯಾಗಿದ್ದು, ಈ ಮೂಲಕ ದೇಶದಲ್ಲಿ ಸಾವಿನ ಸಂಖ್ಯೆ 4,68,790ಕ್ಕೆ ಏರಿಕೆಯಾಗಿದೆ.

  • " class="align-text-top noRightClick twitterSection" data="">

ಕೇರಳದಲ್ಲಿ ಕಳೆದ 24 ಗಂಟೆಗಳಲ್ಲಿ 159 ಮಂದಿ ಸೋಂಕಿತರು ಸಾವನ್ನಪ್ಪಿರುವ ಕುರಿತು ವರದಿಯಾಗಿದ್ದು, ಮಹಾರಾಷ್ಟ್ರ (33) ಮತ್ತು ಪಶ್ಚಿಮ ಬಂಗಾಳ (12) ಮಂದಿ ಮರಣ ಹೊಂದಿದ್ದಾರೆ.

ಇದನ್ನೂ ಓದಿ: ಹೊಸ ಕೋವಿಡ್​ ರೂಪಾಂತರದ ಬಗ್ಗೆ ನಿಮಗೆಷ್ಟು ಗೊತ್ತು.. ಏನಿದು ಒಮಿಕ್ರೋನ್?​

ಕಳೆದ 24 ಗಂಟೆಗಳಲ್ಲಿ 9,905 ಜನರು ವೈರಸ್‌ನಿಂದ ಚೇತರಿಸಿಕೊಂಡಿದ್ದು, ದೇಶದಲ್ಲಿ ಚೇತರಿಕೆ ಪ್ರಮಾಣ ಶೇ. 98.34 ಇದೆ. ಈ ವರೆಗೆ ದೇಶದಲ್ಲಿ ಕೊರೊನಾದಿಂದ ಚೇತರಿಸಿಕೊಂಡವರ ಸಂಖ್ಯೆ 3,40,08,183 ಕ್ಕೆ ಏರಿಕೆಯಾಗಿದೆ. ಪಾಸಿಟಿವಿಟಿ ದರ ಸಹ ಕಡಿಮೆಯಾಗಿದೆ. ಜನವರಿ 16 ರಿಂದ ದೇಶಾದ್ಯಂತ ಕೊರೊನಾ ಲಸಿಕಾ ಅಭಿಯಾನ ಆರಂಭಿಸಲಾಗಿದ್ದು, ಈವರೆಗೆ 122.41 ಕೋಟಿಗೂ ಅಧಿಕ ಡೋಸ್ ವ್ಯಾಕ್ಸಿನ್​ ನೀಡಲಾಗಿದೆ.

ಹೊಸ ರೂಪಾಂತರಿ ಭಯ:

ದಕ್ಷಿಣ ಆಫ್ರಿಕಾದಲ್ಲಿ ಮತ್ತೊಂದು ಬಗೆಯ ಕೊರೊನಾ ರೂಪಾಂತರಿ ಪತ್ತೆಯಾಗಿದ್ದು, ವಿಶ್ವಸಂಸ್ಥೆ ಅದಕ್ಕೆ 'ಒಮಿಕ್ರೋನ್' ಎಂದು ಹೆಸರಿಟ್ಟಿದೆ. ಇದು ಕೋವಿಡ್​ನಿಂದ ಗುಣಮುಖರಾದವರಿಗೂ ಮತ್ತೆ ಅಂಟುವ ಅಪಾಯವನ್ನು ಸೂಚಿಸುತ್ತದೆ. ದಕ್ಷಿಣ ಆಫ್ರಿಕಾದ ಹೆಚ್ಚು ಜನಸಂಖ್ಯೆ ಹೊಂದಿರುವ ಗೌಟೆಂಗ್​​​​ ಪ್ರಾಂತ್ಯದಲ್ಲಿ ಈ ರೂಪಾಂತರಿ ಕಂಡು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.