ನವದೆಹಲಿ: ಕೋವಿಡ್ ಎರಡನೇ ಅಲೆ ದೇಶದಲ್ಲಿ ಉಲ್ಬಣಿಸಿ ಮೇ ತಿಂಗಳ ಆರಂಭದಲ್ಲಿ ದಿನವೊಂದಲ್ಲಿ ನಾಲ್ಕು ಸಾವಿರ ಜನರು ವೈರಸ್ಗೆ ಬಲಿಯಾಗುತ್ತಿದ್ದರು. ನಿಧಾನವಾಗಿ ಸಾವಿನ ಸಂಖ್ಯೆ ತಗ್ಗುತ್ತಾ ಬಂದಿದ್ದು, ನಿನ್ನೆ ಮೃತರ ಸಂಖ್ಯೆ ಎರಡು ಸಾವಿರ ಗಡಿಯಿಂದ ಕೆಳಗಿಳಿದಿದೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 62,480 ಸೋಂಕಿತರು ಪತ್ತೆಯಾಗಿದ್ದು, 1,587 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 2,97,62,793 ಹಾಗೂ ಮೃತರ ಸಂಖ್ಯೆ 3,83,490ಕ್ಕೆ ಏರಿಕೆಯಾಗಿದೆ.
ಗುಣಮುಖರ ಪ್ರಮಾಣ ಶೇ. 96.03ಕ್ಕೆ ಹೆಚ್ಚಳ
ಇತ್ತ ಗುಣಮುಖರ ಸಂಖ್ಯೆ ಹೆಚ್ಚುತ್ತಿದ್ದು, ಗುರುವಾರ ಒಂದೇ ದಿನದಲ್ಲಿ 88,977 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ಭಾರತದ ಕೋವಿಡ್ ಗುಣಮುಖರ ಪ್ರಮಾಣ ಶೇ. 96.03ಕ್ಕೆ ಹೆಚ್ಚಳವಾಗಿದೆ. ಸಕ್ರಿಯ ಪ್ರಕರಣಗಳು ಸಹ 73 ದಿನಗಳ ಬಳಿಕ 8 ಲಕ್ಷ ಗಡಿಯಿಂದ ಕೆಳಗಿಳಿದಿದ್ದು, ದೇಶದಲ್ಲೀಗ 7,98,656 ಕೇಸ್ಗಳು ಮಾತ್ರ ಆ್ಯಕ್ಟೀವ್ ಆಗಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
26.89 ಕೋಟಿ ಡೋಸ್ ವ್ಯಾಕ್ಸಿನೇಷನ್
ದೇಶಾದ್ಯಂತ ಈವರೆಗೆ ಕೊರೊನಾ ಲಸಿಕೆಯ 26,89,60,399 ಡೋಸ್ಗಳನ್ನು ಜನರಿಗೆ ನೀಡಲಾಗಿದೆ. ಇದರಲ್ಲಿ ಸುಮಾರು 21.86 ಕೋಟಿ ಜನರು ಮೊದಲ ಡೋಸ್ ಮಾತ್ರ ಪಡೆದಿದ್ದಾರೆ. 5 ಕೋಟಿಗೂ ಹೆಚ್ಚು ಜನರು ಎರಡೂ ಡೋಸ್ಗಳನ್ನು ಹಾಕಿಸಿಕೊಂಡಿದ್ದಾರೆ.