ನವದೆಹಲಿ : ಹೊಸ ಕೋವಿಡ್ ಸೋಂಕುಗಳ ಸಂಖ್ಯೆಯಲ್ಲಿ ಸ್ಥಿರವಾಗಿ ಇಳಕೆ ಕಾಣುತ್ತಿದ್ದು, ಇಂದು ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 2,483 ಹೊಸ ಪ್ರಕರಣಗಳು ದಾಖಲೆಯಾಗಿವೆ. ಕೊರೊನಾ ಪಾಸಿಟಿವ್ ದರವು ಶೇ 0.55ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಂಗಳವಾರ ತಿಳಿಸಿದೆ.
-
#AmritMahotsav#Unite2FightCorona#LargestVaccineDrive
— Ministry of Health (@MoHFW_INDIA) April 26, 2022 " class="align-text-top noRightClick twitterSection" data="
𝗖𝗢𝗩𝗜𝗗 𝗙𝗟𝗔𝗦𝗛https://t.co/o9p3XDIXOm pic.twitter.com/xaT3gdRbLv
">#AmritMahotsav#Unite2FightCorona#LargestVaccineDrive
— Ministry of Health (@MoHFW_INDIA) April 26, 2022
𝗖𝗢𝗩𝗜𝗗 𝗙𝗟𝗔𝗦𝗛https://t.co/o9p3XDIXOm pic.twitter.com/xaT3gdRbLv#AmritMahotsav#Unite2FightCorona#LargestVaccineDrive
— Ministry of Health (@MoHFW_INDIA) April 26, 2022
𝗖𝗢𝗩𝗜𝗗 𝗙𝗟𝗔𝗦𝗛https://t.co/o9p3XDIXOm pic.twitter.com/xaT3gdRbLv
ನಿನ್ನೆಗೆ ಹೋಲಿಸಿದರೆ ದೇಶದಲ್ಲಿ ಇಂದು ಒಟ್ಟು 58 ಕೋವಿಡ್ ಪ್ರಕರಣ ಕಡಮೆಯಾಗಿವೆ. ದೇಶದಲ್ಲಿ ಸೋಮವಾರ 2,541 ಕೋವಿಡ್ ಪ್ರಕರಣ ಪತ್ತೆಯಾಗಿದ್ದವು. ಸದ್ಯದ ಮಟ್ಟಿಗೆ ದೇಶದಲ್ಲಿ ಸಕ್ರಿಯ ಪ್ರಕರಣಗಳು 15,636 ರಷ್ಟಿವೆ ಎಂದು ತಿಳಿದು ಬಂದಿದೆ.
ಓದಿ: ದೇಶದಲ್ಲಿ ಕೊಂಚ ಇಳಿಕೆಯತ್ತ ಮುಖ ಮಾಡಿದ ಕೊರೊನಾ ಪ್ರಕರಣಗಳು!
ಕಳೆದ 24 ಗಂಟೆಗಳಲ್ಲಿ ಒಟ್ಟು 1,970 ಕೋವಿಡ್ ರೋಗಿಗಳು ರೋಗದಿಂದ ಚೇತರಿಸಿಕೊಂಡಿದ್ದು, ಸಾಂಕ್ರಾಮಿಕ ರೋಗದ ಪ್ರಾರಂಭದಿಂದ ಒಟ್ಟು ಚೇತರಿಕೆಯ ಸಂಖ್ಯೆ 4,25,23,311ಕ್ಕೆ ತಲುಪಿದೆ. ಚೇತರಿಕೆ ಪ್ರಮಾಣ ಶೇ. 98.75 ರಷ್ಟಿದೆ. ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಡ್ರೈವ್ ಅಡಿ ನಿರ್ವಹಿಸಲಾದ ಒಟ್ಟು ಲಸಿಕೆ ಡೋಸ್ಗಳ ಸಂಖ್ಯೆ 187.95 ಕೋಟಿ ಆಗಿದೆ.