ETV Bharat / bharat

ಭಾರತ-ಚೀನಾ ಗಡಿ ಸಂಘರ್ಷ: ಭಾರತೀಯ ಯೋಧರಿಗೆ​ ಯುಎಸ್​ನಿಂದ ಬೆಚ್ಚನೆ ಉಡುಪು! - ಭಾರತೀಯ ಸೇನೆಗೆ ಯುಎಸ್​​ನಿಂದ ತೀವ್ರ ಶೀತ ಹವಾಮಾನ ತಡೆಯುವ ಬಟ್ಟೆ

ಕೆಲ ದಿನಗಳಲ್ಲಿ ಚಳಿ ಆರಂಭಗೊಳ್ಳುವ ಗಡಿ ನಿಯಂತ್ರಣ ರೇಖೆ ಬಳಿ ಯೋಧರಿಗೋಸ್ಕರ ಇದೀಗ ಅಮೆರಿಕದಿಂದ ಬೆಚ್ಚನೆ ಉಡುಪು ಅಮೆರಿಕದಿಂದ ತರಿಸಿಕೊಳ್ಳಲಾಗುತ್ತಿದೆ.

India-US
India-US
author img

By

Published : Nov 3, 2020, 3:52 PM IST

ನವದೆಹಲಿ: ಕಳೆದ ಕೆಲ ತಿಂಗಳಿಂದ ಭಾರತ-ಚೀನಾ ನಡುವೆ ಗಡಿ ಸಂಘರ್ಷ ಉದ್ಭವವಾಗಿದ್ದು, ಚೀನಾ ಗಡಿಯಲ್ಲಿ ಈಗಾಗಲೇ ಹೆಚ್ಚಿನ ಸೈನಿಕರು ನಿಯೋಜನೆಗೊಂಡಿದ್ದಾರೆ. ಇದೀಗ ಭಾರತ ಕೂಡ ಎಲ್ಲ ಸವಾಲುಗಳಿಗೆ ಸಜ್ಜಾಗುತ್ತಿದ್ದು, ಇದರ ಮಧ್ಯೆ ಭಾರತೀಯ ಸೇನೆಗೆ ಯುಎಸ್​​ನಿಂದ ತೀವ್ರ ಶೀತ ಹವಾಮಾನ ತಡೆಯುವ ಬಟ್ಟೆ ತರಿಸಿಕೊಳ್ಳಲಾಗಿದೆ.

ಗಡಿ ನಿಯಂತ್ರಣ ರೇಖೆಯಲ್ಲಿ ಚೀನಿಯರ ಸವಾಲು ಎದುರಿಸಲು ಭಾರತ ಸರ್ವ ಸನ್ನದ್ಧವಾಗಿದ್ದು, ಅದರಲ್ಲಿ ಪ್ರಮುಖವಾಗಿ ಯೋಧರನ್ನ ಚಳಿಯಿಂದ ರಕ್ಷಣೆ ಮಾಡುವ ಉದ್ದೇಶದಿಂದ ಯುಎಸ್​ನಿಂದ ಬೆಚ್ಚನೆಯ ಉಡುಪು ತರಿಸಿಕೊಳ್ಳಲಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಿ ಮೂಲಗಳಿಂದ ಮಾಹಿತಿ ತಿಳಿದು ಬಂದಿದ್ದು, ಅಮೆರಿಕ ರಕ್ಷಣಾ ಪಡೆಗಳಿಂದ ಈ ಬಟ್ಟೆ ಸ್ವೀಕರಿಸಲಾಗಿದೆ. ಸಿಯಾಚಿನ್​ ಮತ್ತು ಪೂರ್ವ ಲಡಾಕ್​ ಸೆಕ್ಟರ್​ ಪಶ್ಚಿಮ ವಿಭಾಗದಲ್ಲಿ ಭಾರತೀಯ ಸೇನೆ ನಿಯೋಜನೆ ಮಾಡಲಾಗಿದ್ದು, ಅಲ್ಲಿ ವಿಪರೀತ ಶೀತ ಹವಾಮಾನ ಇರುವುದರಿಂದ ಬರೋಬ್ಬರಿ 60 ಸಾವಿರ ಉಡುಪು ತರಿಸಿಕೊಳ್ಳಲಾಗಿದೆ.

ಭಾರತ ಗಡಿ ಪ್ರದೇಶದಲ್ಲಿ 90 ಸಾವಿರ ಸೈನಿಕರ ನಿಯೋಜನೆ ಮಾಡಲಾಗಿದೆ. ಇನ್ನು ಎತ್ತರದ ಪರ್ವತ ಪ್ರದೇಶಗಳಲ್ಲಿ ಭಾರತೀಯ ಸೇನೆ ಕಾರ್ಯಾಚರಣೆ ನಡೆಸುತ್ತಿರುವ ಕಾರಣ ಭಾರತೀಯ ಯೋಧರಿಗೆ ಚೆಚ್ಚನೆಯ ಉಡುಪು ಅವಶ್ಯವಾಗಿರುತ್ತದೆ. ಭಾರತ ಈಗಾಗಲೇ ಆಕ್ರಮಣಕಾರಿ ರೈಫಲ್​ ಸೇರಿದಂತೆ ವಿವಿಧ ಸಾಧನ ಅಮೆರಿಕದಿಂದ ಪಡೆದುಕೊಳ್ಳುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.