ETV Bharat / bharat

ಐಎಂಎ ಪಾಸಿಂಗ್​ ಔಟ್​ ಪರೇಡ್ : ಭಾರತೀಯ ಸೇನೆಗೆ ಸೇರಿದ 319 ಯುವ ಅಧಿಕಾರಿಗಳು - ಡೆಹ್ರಾಡೂನ್​ನ ಭಾರತೀಯ ಮಿಲಿಟರಿ ಅಕಾಡೆಮಿ

ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ ತರಬೇತಿ ಪಡೆದು ಉತ್ತೀರ್ಣರಾದ 319 ಯುವ ಅಧಿಕಾರಿಗಳು ಇಂದು ಸೇನೆಗೆ ಸೇರ್ಪಡೆಯಾಗಿದ್ದಾರೆ..

Passing out parade of IMA
ಐಎಂಎ ಪಾಸಿಂಗ್​ ಔಟ್​ ಪರೇಡ್
author img

By

Published : Dec 11, 2021, 5:53 PM IST

ಡೆಹ್ರಾಡೂನ್​ (ಉತ್ತರಾಖಂಡ): ಇಂದು ಡೆಹ್ರಾಡೂನ್​ನ ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ (ಐಎಂಎ) ನಡೆದ ಪಾಸಿಂಗ್ ಔಟ್ ಪರೇಡ್​ನಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕೆಡೆಟ್‌ಗಳ ಗೌರವ ವಂದನೆ ಸ್ವೀಕರಿಸಿದರು. ಅಕಾಡೆಮಿಯಲ್ಲಿ ತರಬೇತಿ ಪಡೆದು ಉತ್ತೀರ್ಣರಾದ 319 ಯುವ ಅಧಿಕಾರಿಗಳು ಸೇನೆಗೆ ಸೇರ್ಪಡೆಯಾಗಿದ್ದಾರೆ.

ಪಾಸಿಂಗ್ ಔಟ್ ಪರೇಡ್​ನಲ್ಲಿ ರಾಷ್ಟ್ರಪತಿ ರಾಮ್​ ನಾಥ್ ಕೋವಿಂದ್ ಭಾಷಣ..

1971ರ ಭಾರತ-ಪಾಕ್ ಯುದ್ಧದಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಜಯಗಳಿಸಿ 50 ವರ್ಷಗಳನ್ನು ಪೂರೈಸಿರುವ ಸಂದರ್ಭದಲ್ಲಿ ಈ ಬಾರಿಯ ಐಎಂಎ ಪರೇಡ್ ಅನ್ನು ಸ್ಮರಣೀಯವಾಗಿಸಲು ಸಿದ್ಧತೆ ನಡೆಸಲಾಗಿತ್ತು.

ಈ ಕಾರ್ಯಕ್ರಮಕ್ಕೆ ಸಿಡಿಎಸ್​ ಜನರಲ್ ಬಿಪಿನ್ ರಾವತ್ ಕೂಡ ಆಗಮಿಸಬೇಕಿತ್ತು. ಆದರೆ, ವಿಧಿಯಾಟವೇ ಬೇರೆಯಾಗಿದ್ದು, ಕೂನೂರು ಹೆಲಿಕಾಪ್ಟರ್​ ದುರಂತದಲ್ಲಿ ಹುತಾತ್ಮರಾಗಬೇಕಾಯಿತು.

ಇದನ್ನೂ ಓದಿ: ರಾವತ್​ ನಿಧನ ಪ್ರತಿಯೊಬ್ಬ ದೇಶಭಕ್ತನಿಗೂ ನಷ್ಟ: ಕ್ಯಾ. ವರುಣ್​​ ಸಿಂಗ್​​ ಜೀವ ಉಳಿಸಲು ವೈದ್ಯರ ಸರ್ವ ಪ್ರಯತ್ನ: ನಮೋ

ರಾವತ್​ ಹಾಗೂ ಇತರ 11 ಸೇನಾ ಸಿಬ್ಬಂದಿ ನಿಧನ ಹಿನ್ನೆಲೆ ನಡೆದ ಪಾಸಿಂಗ್ ಔಟ್ ಪರೇಡ್​ ಅನ್ನು ಬೆಳಕು ಮತ್ತು ಧ್ವನಿ ಪ್ರದರ್ಶನವಿಲ್ಲದೆ ಸರಳವಾಗಿ ಆಯೋಜಿಸಲಾಗಿತ್ತು. ಇಂದು ಸೇನೆಗೆ ಸೇರ್ಪಡೆಯಾದ 319 ಅಧಿಕಾರಿಗಳ ಪೈಕಿ ಉತ್ತರಪ್ರದೇಶ ಮತ್ತು ಉತ್ತರಾಖಂಡ ಮೂಲದ ಕೆಡೆಟ್‌ಗಳs ಹೆಚ್ಚಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.