ETV Bharat / bharat

ಯುದ್ಧದ ಮಧ್ಯೆಯೇ ರಷ್ಯಾದಿಂದ ಸಿಮ್ಯುಲೇಟರ್​ ಖರೀದಿಸಿದ ಭಾರತ - India Receives S-400 Overhauled Engines

ಉಕ್ರೇನ್​ ಮೇಲೆ ಯುದ್ಧ ಸಾರಿರುವ ರಷ್ಯಾದ ಮೇಲೆ ಪಾಶ್ಚಿಮಾತ್ಯ ರಾಷ್ಟ್ರಗಳು ಹಲವಾರು ನಿರ್ಬಂಧಗಳನ್ನು ವಿಧಿಸಿವೆ. ಇದರ ಮಧ್ಯೆಯೇ ಭಾರತ, ರಷ್ಯಾದ ಜೊತೆ ಒಪ್ಪಂದ ಮಾಡಿಕೊಂಡು ಯುದ್ಧ ಸಾಮಗ್ರಿಯ ಬಿಡಿಭಾಗಗಳನ್ನು ಖರೀದಿಸಿದೆ.

purchased
ಸಿಮ್ಯುಲೇಟರ್
author img

By

Published : Apr 16, 2022, 7:57 AM IST

ನವದೆಹಲಿ: ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ ಮಧ್ಯೆಯೇ ಭಾರತ ರಷ್ಯಾದಿಂದ ಎಸ್​- 400 ಟ್ರಯಂಫ್ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯ ಸಿಮ್ಯುಲೇಟರ್‌ಗಳು ಮತ್ತು ಇತರ ಉಪಕರಣಗಳನ್ನು ಖರೀದಿಸಿದೆ. ಇದರಲ್ಲಿ ಸ್ಕ್ವಾಡ್ರನ್ ಮತ್ತು ಸಿಮ್ಯುಲೇಟರ್‌ಗಳು ಹಾಗೂ ತರಬೇತಿ ಸಂಬಂಧಿತ ಉಪಕರಣಗಳು ಮಾತ್ರ ಇವೆ. ಕ್ಷಿಪಣಿಗಳು ಅಥವಾ ಲಾಂಚರ್‌ಗಳನ್ನು ಒಳಗೊಂಡಿಲ್ಲ ಎಂದು ರಕ್ಷಣಾ ಮೂಲಗಳು ತಿಳಿಸಿವೆ.

ಉಕ್ರೇನ್​ ಮೇಲೆ ರಷ್ಯಾ ಯುದ್ಧ ನಡೆಸುತ್ತಿರುವ ಮಧ್ಯೆಯೇ ವಿಮಾನಗಳ ಎಂಜಿನ್ ಮತ್ತು ಬಿಡಿಭಾಗಗಳನ್ನು ಖರೀದಿಸಿದ ಬಳಿಕ ಇದೀಗ ಸಿಮ್ಯುಲೇಟರ್​ಗಳನ್ನು ಪಡೆದುಕೊಂಡಿದೆ. ಇದಕ್ಕೆ ಯಾವ ರೀತಿಯಾಗಿ ಹಣ ಸಂದಾಯ ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಭಾರತೀಯ ರಕ್ಷಣಾ ಪಡೆಗಳು ಇತ್ತೀಚೆಗೆ ರಷ್ಯನ್ನರಿಂದ ಯುದ್ಧ ಸಾಮಗ್ರಿಗಳನ್ನು ಪಡೆದುಕೊಂಡಿದೆ. ದೇಶಕ್ಕೆ ಅವುಗಳನ್ನು ರಷ್ಯಾ ಸಾಗಿಸುತ್ತಿದೆ. ನಮ್ಮ ಪಡೆಗಳಿಗೆ ಯುದ್ಧ ಸಾಮಗ್ರಿ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ರಷ್ಯಾದ ಮೇಲೆ ಪಾಶ್ಚಿಮಾತ್ಯ ರಾಷ್ಟ್ರಗಳು ಹಣಕಾಸು ನಿರ್ಬಂಧ ವಿಧಿಸಿದ ಪರಿಣಾಮ ಯಾವ ಮಾದರಿಯಲ್ಲಿ ರಷ್ಯಾಗೆ ಹಣ ಪಾವತಿ ಮಾಡಬೇಕು ಎಂಬ ಬಗ್ಗೆ ಚಿಂತನೆ ಮುಂದುವರಿದಿದೆ. ಇದನ್ನು ಬಗೆಹರಿಸಲು ಉಭಯ ರಾಷ್ಟ್ರಗಳ ಅಧಿಕಾರಿಗಳು ಸಮಾಲೋಚನೆ ನಡೆಸುತ್ತಿದ್ದಾರೆ. ಬೇರೆ ಆಯ್ಕೆಗಳನ್ನು ಅನ್ವೇಷಿಸಲಾಗುತ್ತಿದೆ ಎಂದು ತಿಳಿಸಿವೆ.

ರಷ್ಯಾದಿಂದ ಪಡೆದುಕೊಂಡ ಎಸ್​ 400 ಟ್ರಯಂಫ್ ವಾಯು ರಕ್ಷಣಾ ವ್ಯವಸ್ಥೆಯ ಸಿಮ್ಯುಲೇಟರ್​​ಗಳನ್ನು ಬೆದರಿಕೆ ಒಡ್ಡಿರುವ ಪಾಕಿಸ್ತಾನ ಮತ್ತು ಚೀನಾ ವಿರುದ್ಧ ನಿಯೋಜಿಸಲಾಗುತ್ತಿದೆ.

ಓದಿ: ಟ್ವಿಟ್ಟರ್​ ಖರೀದಿಸುವ ಎಲಾನ್​​ ಮಸ್ಕ್​ ಕನಸಿಗೆ ಭಂಗ.. ಇದು ಕ್ರಮಬದ್ಧವಲ್ಲದ ನಿರ್ಧಾರ ಎಂದ ಮಂಡಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.