ನವದೆಹಲಿ : ಡಿಜಿಟಲ್ ಪ್ಲಾಂಟ್ಫಾರ್ಮ್ ವೇದಿಕೆಯ ಮೂಲಕ ಭಾರತೀಯ ಜನತಾ ಪಾರ್ಟಿಗೆ ಸವಾಲೊಡ್ಡುವ ಸಲುವಾಗಿ ಕಾಂಗ್ರೆಸ್ ಪಕ್ಷ 'ಸಾಮಾಜಿಕ ಜಾಲತಾಣದ ಯೋಧರು'( social media warriors) ಎಂಬ ಅಭಿಯಾನವನ್ನು ಇಂದಿನಿಂದ ಆರಂಭಿಸಿದೆ. ನಮ್ಮ ದೇಶಕ್ಕೆ ಅಹಿಂಸಾತ್ಮಕ ಯೋಧರು ಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಪಕ್ಷದ ಹಿರಿಯ ಮುಖಂಡ ಪವನ್ ಕುಮಾರ್ ಬನ್ಸಾಲ್, ವಕ್ತಾರ ಪವನ್ ಖೇಡಾ ಮತ್ತು ಪಕ್ಷದ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥ ರೋಹನ್ ಗುಪ್ತಾ ನೇತೃತ್ವದಲ್ಲಿ ಇಂದು ಸಾಮಾಜಿಕ ಜಾಲತಾಣದ ಯೋಧರು ಎಂಬ ಅಭಿಯಾನ ಪ್ರಾರಂಭಗೊಂಡಿದೆ. ಐದು ಲಕ್ಷ ಸೋಷಿಯಲ್ ಮೀಡಿಯಾ ಯೋಧರನ್ನು ರಚಿಸುವುದು ನಮ್ಮ ಗುರಿ ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರೆ.
-
India needs non violent warriors to fight for truth, compassion & harmony. You are central to defending the idea of India.
— Rahul Gandhi (@RahulGandhi) February 8, 2021 " class="align-text-top noRightClick twitterSection" data="
Come, #JoinCongressSocialMedia in this fight.
India needs you! pic.twitter.com/DhBsHMKU22
">India needs non violent warriors to fight for truth, compassion & harmony. You are central to defending the idea of India.
— Rahul Gandhi (@RahulGandhi) February 8, 2021
Come, #JoinCongressSocialMedia in this fight.
India needs you! pic.twitter.com/DhBsHMKU22India needs non violent warriors to fight for truth, compassion & harmony. You are central to defending the idea of India.
— Rahul Gandhi (@RahulGandhi) February 8, 2021
Come, #JoinCongressSocialMedia in this fight.
India needs you! pic.twitter.com/DhBsHMKU22
ಆ ಬಳಿಕ ರಾಹುಲ್ ಗಾಂಧಿ ಟ್ವಿಟರ್ ಮೂಲಕ ವಿಡಿಯೋವೊಂದನ್ನು ಹರಿಬಿಟ್ಟಿದ್ದು, ಸತ್ಯ, ಸಹಾನುಭೂತಿ ಹಾಗೂ ಸಾಮರಸ್ಯಕ್ಕಾಗಿ ಹೋರಾಡಲು ಭಾರತಕ್ಕೆ ಅಹಿಂಸಾತ್ಮಕ ಯೋಧರ ಅಗತ್ಯವಿದೆ.
ಭಾರತ ದೇಶದ ಕಲ್ಪನೆ ಸಮರ್ಥಿಸಿಕೊಳ್ಳಲು ನಿಮ್ಮಂತಹ ಯೋಧರ ಅನಿವಾರ್ಯತೆ ಇದೆ. ಭವ್ಯ ಭಾರತದ ಅಭಿವೃದ್ಧಿಗಾಗಿ ಕಾಂಗ್ರೆಸ್ನ ಸಾಮಾಜಿಕ ಜಾಲತಾಣದ ಸದಸ್ಯರಾಗಿ, ಬನ್ನಿ ಇದು ನಿಮಗೋಸ್ಕರ ಎಂದು ರಾಹುಲ್ ಗಾಂಧಿ ಕರೆ ನೀಡಿದ್ದಾರೆ.
ಇನ್ನು, ಕಾಂಗ್ರೆಸ್ ಸಹ ಐದು ಲಕ್ಷ ಸೋಷಿಯಲ್ ಮೀಡಿಯಾ ಯೋಧರನ್ನು ರಚಿಸುವ ಗುರಿ ಹೊಂದಿದೆ. ಇದರಿಂದಾಗಿ ದೇಶದಲ್ಲಿನ ಸಮಸ್ಯೆಗಳು ತಿಳಿಯಲಿವೆ. ಈ ಯೋಧರ ಮೂಲಕ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಪರಿಹರಿಸಲಾಗುವುದು ಎಂದಿದ್ದಾರೆ ರಾಹುಲ್ ಗಾಂಧಿ.