ETV Bharat / bharat

ಚಂದ್ರಯಾನ 3 ಉಡಾವಣೆಗೆ ಕ್ಷಣಗಣನೆ: ಮಧ್ಯಾಹ್ನ 2.35 ಕ್ಕೆ ನಭಕ್ಕೆ ಚಿಮ್ಮಲಿದೆ ಉಪಗ್ರಹ - Chandrayaan 3

ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ 3 ಉಡಾವಣೆಗೆ ಕ್ಷಣಗಣನೆ ಪ್ರಾರಂಭವಾಗಿದೆ.

Chandrayaan 3
ಚಂದ್ರಯಾನ 3
author img

By

Published : Jul 14, 2023, 11:00 AM IST

ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರ (ಆಂಧ್ರಪ್ರದೇಶ) : ಇಂದು ಮಧ್ಯಾಹ್ನ 2.35 ಕ್ಕೆ ಭಾರತದ ಚಂದ್ರಯಾನ-3 ಉಡಾವಣೆಗೆ ಆಂಧ್ರಪ್ರದೇಶದ ಸುಳ್ಳೂರುಪೇಟೆಯಲ್ಲಿರುವ ಇಸ್ರೋದ ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರ ಸಿದ್ಧವಾಗಿದ್ದು, ಐತಿಹಾಸಿಕ ದಾಖಲೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ಇದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ನಡೆಸಿದ ಚಂದ್ರಯಾನ-2 ರ ಮುಂದುವರೆದ ಭಾಗವಾಗಿದೆ.

ಚಂದ್ರಯಾನ 3 ಮಿಷನ್ ಉದ್ದೇಶಗಳು: ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತ ಮತ್ತು ಸಾಫ್ಟ್ ಲ್ಯಾಂಡಿಂಗ್‌ ಮಾಡುವಲ್ಲಿ ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸುವುದು, ಚಂದ್ರನ ಮೇಲೆ ರೋವರ್ ಇಳಿಸುವುದು ಮತ್ತು ಆ ಸ್ಥಳದಲ್ಲಿ ವೈಜ್ಞಾನಿಕ ಪ್ರಯೋಗಗಳನ್ನು ನಡೆಸುವುದು ಈ ಮಿಷನ್​ನ ಪ್ರಮುಖ ಉದ್ದೇಶವಾಗಿದೆ. ಚಂದ್ರಯಾನ ಸರಣಿಯಲ್ಲಿ ಇದು ಭಾರತದ 3ನೇ ಉಡಾವಣೆಯಾಗಿದೆ. LVM3 M4 ಉಡಾವಣಾ ರಾಕೆಟ್ ಲ್ಯಾಂಡರ್, ರೋವರ್ ಮತ್ತು ಮಾಡ್ಯೂಲ್‌ ಹೊತ್ತು ನಭಕ್ಕೆ ಚಿಮ್ಮಲಿದೆ. ಈ ರಾಕೆಟ್ ಸುಮಾರು 3,84,000 ಕಿ.ಮೀ ದೂರ ಪ್ರಯಾಣಿಸಿ ಚಂದ್ರನ ಮೇಲಿರುವ 100 ಕಿಲೋಮೀಟರ್ ಕಕ್ಷೆಯನ್ನು ತಲುಪಲಿದೆ.

ISRO ವಿಜ್ಞಾನಿಗಳ ಪ್ರಕಾರ, ಲ್ಯಾಂಡರ್ ಮಾಡ್ಯೂಲ್ (LM), ಪ್ರೊಪಲ್ಷನ್ ಮಾಡ್ಯೂಲ್ (PM) ಮತ್ತು ರೋವರ್ ಮೂಲಕ ಚಂದ್ರಯಾನ-3 ಯಶಸ್ವಿಗೊಳಿಸುವ ಗುರಿ ಹೊಂದಲಾಗಿದೆ. ಹೀಗಾಗಿ, ಅತ್ಯಂತ ಸೂಕ್ಷ್ಮ ತಂತ್ರಜ್ಞಾನವನ್ನು ಇದರಲ್ಲಿ ಬಳಸಲಾಗಿದೆ. ಚಂದ್ರನ ದಕ್ಷಿಣ ಧ್ರುವದ ಮೇಲೆ ನೌಕೆಯನ್ನ ಇಳಿಸಲಾಗುವುದು. ಪ್ರೊಪಲ್ಷನ್ ಮಾಡ್ಯೂಲ್, ಲ್ಯಾಂಡರ್ ಮತ್ತು ರೋವರ್ ಕಾನ್ಫಿಗರೇಶನ್ ಅನ್ನು ಚಂದ್ರನ ಕಕ್ಷೆಯಲ್ಲಿ 100 ಕಿ.ಮೀ ವರೆಗೆ ಸಾಗಿಸುತ್ತದೆ.

ಇನ್ನು ಇಸ್ರೋ ನೌಕೆಯು ಚಂದ್ರನ ನೆಲದಲ್ಲಿ ಇಳಿಯಲು 45 ರಿಂದ 48 ದಿನಗಳು ತೆಗೆದುಕೊಳ್ಳಬಹುದು. ಚಂದ್ರನಿಗೆ 5 ಬಾರಿ ಪ್ರದಕ್ಷಿಣೆ ಹಾಕಿದ ಬಳಿಕ ಇಳಿಯಬೇಕಾದ ಲ್ಯಾಂಡರ್‌ ಮಾಡ್ಯೂಲ್‌, ಪ್ರೊಪಲ್ಷನ್‌ ಮಾಡ್ಯೂಲ್‌ನಿಂದ ಬೇರ್ಪಡುತ್ತದೆ. ಬಳಿಕ, ಪ್ರೊಪಲ್ಷನ್‌ ಮಾಡ್ಯೂಲ್‌ ಅದೇ ಕಕ್ಷೆಯಲ್ಲೇ ಸುತ್ತುವುದು ಮುಂದುವರಿಸುತ್ತದೆ. ಲ್ಯಾಂಡರ್‌ ನಿಧಾನಕ್ಕೆ ಚಂದ್ರನ ಮೇಲ್ಮೈಯಲ್ಲಿ ಇಳಿಯಲು ಪ್ರಾರಂಭಿಸುತ್ತದೆ. ಲ್ಯಾಂಡರ್‌ ಎಲ್ಲಾ ನಾಲ್ಕು ದಿಕ್ಕುಗಳಲ್ಲಿ ಒಟ್ಟು 8 ಸಣ್ಣ ಎಂಜಿನ್‌ಗಳನ್ನ ಹೊಂದಿದೆ. ಇದು ವಾಹನವನ್ನು ನಿರ್ದೇಶಿಸಲು ಮತ್ತು ತಿರುಗಿಸಲು ನೆರವಾಗುತ್ತದೆ. ಇವುಗಳನ್ನು 'ಲ್ಯಾಂಡರ್‌ ಪ್ರೊಪಲ್ಷನ್‌ ಸಿಸ್ಟಂ' ಎನ್ನಲಾಗುತ್ತದೆ. ಲ್ಯಾಂಡರ್‌ ಸೆಕೆಂಡಿಗೆ 2 ಮೀಟರ್‌ ವೇಗದಲ್ಲಿ ಇಳಿಯುತ್ತದೆ. ಆದರೆ, ಮೇಲ್ಮೈ ಮೇಲೆ ಇಳಿಯುವ ವೇಳೆ ಅದು ಸೆಕೆಂಡಿಗೆ 0.5 ಮೀ. ವೇಗವನ್ನಷ್ಟೇ ಹೊಂದಿರುತ್ತದೆ.

ಇದನ್ನೂ ಓದಿ : Chandrayana-3: ಲ್ಯಾಂಡರ್​, ರೋವರ್​ ಹೇಗೆಲ್ಲ ಕಾರ್ಯನಿರ್ವಹಿಸುತ್ತವೆ ಗೊತ್ತಾ..?; ಗಿರೀಶ್​ ಲಿಂಗಣ್ಣ ಮಾತಲ್ಲಿ ಕೇಳಿ!

LVM3 M4 ರಾಕೆಟ್‌ನ ಸಾಮರ್ಥ್ಯ: ಇದು 640 ಟನ್‌ ತೂಕವುಳ್ಳ ದೇಶದ ಅತ್ಯಂತ ಭಾರವಾದ ರಾಕೆಟ್‌ ಆಗಿದೆ. ಇದರ ಒಟ್ಟು ಉದ್ದ 43.5 ಮೀಟರ್‌. 8 ಟನ್‌ ಪೇಲೋಡನ್ನು ಭೂಮಿಯಿಂದ 200 ಕಿಲೋ ಮೀಟರ್​ ಎತ್ತರಕ್ಕೆ ಹೊತ್ತೊಯ್ಯಬಲ್ಲದು. ಇಲ್ಲಿಯವರೆಗೆ, ಅಮೆರಿಕ, ರಷ್ಯಾ ಮತ್ತು ಚೀನಾ ತಮ್ಮ ಬಾಹ್ಯಾಕಾಶ ನೌಕೆಯನ್ನ ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಇಳಿಸಿವೆ. ಇದೀಗ, ಈ ಮೈಲಿಗಲ್ಲು ಸಾಧಿಸಿದ ನಾಲ್ಕನೇ ರಾಷ್ಟ್ರವಾಗಲು ಭಾರತ ಸಿದ್ಧವಾಗಿದೆ.

ಇದನ್ನೂ ಓದಿ : India Moon Mission: ಚಂದ್ರಯಾನ 3 ಉಡಾವಣೆ ಕ್ಷಣಗಣನೆ ಆರಂಭ.. ನಭಕ್ಕೆ ಜಿಗಿಯಲು ಸಜ್ಜಾದ ಉಪಗ್ರಹ

ಇನ್ನು ಉಡಾವಣೆಯ ಸಮಯದಲ್ಲಿ ಯಾವುದೇ ತೊಂದರೆ ಉಂಟಾಗದಂತೆ ಚಂದ್ರಯಾನ-3 ರಲ್ಲಿ ಹಾರ್ಡ್‌ವೇರ್, ರಚನೆ, ಕಂಪ್ಯೂಟರ್‌ಗಳು, ಸಾಫ್ಟ್‌ವೇರ್ ಮತ್ತು ಸಂವೇದಕಗಳಲ್ಲಿ ಮಹತ್ತರ ಬದಲಾವಣೆ ಕಾರ್ಯ ನಡೆದಿದೆ. ಹೆಚ್ಚು ಇಂಧನವನ್ನೂ ಅದರಲ್ಲಿ ಅಳವಡಿಸಲಾಗಿದೆ. ನೌಕೆಯ ಲ್ಯಾಂಡಿಂಗ್ ಕಾಲುಗಳನ್ನು ಬಲಪಡಿಸಲಾಗಿದೆ. ಹೆಚ್ಚಿನ ಶಕ್ತಿ ಉತ್ಪಾದಿಸಲು ದೊಡ್ಡ ಸೌರ ಫಲಕಗಳನ್ನು ಜೋಡಿಸಲಾಗಿದೆ. ನೌಕೆಯ ವೇಗವನ್ನು ಅಳೆಯಲು ಅಭಿವೃದ್ಧಿಪಡಿಸಿರುವ 'ಲೇಸರ್ ಡಾಪ್ಲರ್ ವೆಲೋಸಿಮೀಟರ್' ಉಪಕರಣವನ್ನ ಅಹ ಅದರಲ್ಲಿ ಅಳವಡಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.