ನವದೆಹಲಿ: ದೇಶದ ಆರ್ಥಿಕತೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಭಾರತ ಶ್ರೀಲಂಕಾದಂತೆ ಭಾಸವಾಗುತ್ತಿದೆ ಎಂದು ಹೇಳಿದ್ದಾರೆ. ಉಭಯ ದೇಶಗಳ ಆರ್ಥಿಕತೆ ತೋರಿಸುವ ನಕ್ಷೆ ಸಮೇತವಾಗಿ ಅವರು ಟ್ವೀಟ್ ಮಾಡಿದ್ದಾರೆ.
-
Distracting people won’t change the facts. India looks a lot like Sri Lanka. pic.twitter.com/q1dptUyZvM
— Rahul Gandhi (@RahulGandhi) May 18, 2022 " class="align-text-top noRightClick twitterSection" data="
">Distracting people won’t change the facts. India looks a lot like Sri Lanka. pic.twitter.com/q1dptUyZvM
— Rahul Gandhi (@RahulGandhi) May 18, 2022Distracting people won’t change the facts. India looks a lot like Sri Lanka. pic.twitter.com/q1dptUyZvM
— Rahul Gandhi (@RahulGandhi) May 18, 2022
ದೇಶದಲ್ಲಿ ತೈಲ ಬೆಲೆ ಏರಿಕೆ, ನಿರುದ್ಯೋಗ ಹಾಗೂ ಕೋಮು ಹಿಂಸಾಚಾರ ವಿಚಾರವಾಗಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಉಭಯ ದೇಶಗಳ ಪರಿಸ್ಥಿತಿ ತುಲನೆ ಮಾಡುವ ರೇಖಾ ನಕ್ಷೆ ಹಂಚಿಕೊಂಡಿದ್ದಾರೆ. ವಿವಿಧ ವಿಷಯಗಳನ್ನಿಟ್ಟುಕೊಂಡು ದೇಶದ ಜನರನ್ನ ವಿಚಲಿತಗೊಳಿಸುವುದರಿಂದ ಸತ್ಯಾಂಶ ಬದಲಾಗುವುದಿಲ್ಲ. ಭಾರತ ಶ್ರೀಲಂಕಾದಂತೆ ಭಾಸವಾಗುತ್ತಿದೆ ಎಂದಿದ್ದಾರೆ. ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಮೂರು ಗ್ರಾಫಿಕ್ಸ್ ಹಂಚಿಕೊಂಡಿರುವ ಅವರು, ಭಾರತದೊಂದಿಗೆ ತುಲನೆ ಮಾಡಿದ್ದಾರೆ.
ಇದನ್ನೂ ಓದಿ: ಡೆಲ್ಲಿ ಲೆಪ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ರಾಜೀನಾಮೆ
ಈ ಗ್ರಾಫಿಕ್ಸ್ನಲ್ಲಿ ಉಭಯ ದೇಶಗಳಲ್ಲಿ 2017ರಿಂದಲೂ ನಿರುದ್ಯೋಗ, ಪೆಟ್ರೋಲ್ ಬೆಲೆ ಹಾಗೂ ಕೋಮು ಹಿಂಸಾಚಾರ ಹೆಚ್ಚಾಗುತ್ತಲೇ ಇವೆ ಎಂದು ತೋರಿಸಿದ್ದಾರೆ.