ನವದೆಹಲಿ: ಇಂಗ್ಲೆಂಡ್ನ ಗ್ಲಾಸ್ಗೋದಲ್ಲಿ ನಡೆಯುತ್ತಿರುವ ಕಾಪ್-26 (COP-26) ಶೃಂಗಸಭೆಯಲ್ಲಿ ಎಲೆಕ್ಟ್ರಿಕ್ ವಾಹನಗಳ (Electric Vehicles) ಇ-ಅಮೃತ್ (E-Amrit) ವೆಬ್ ಪೋರ್ಟಲ್ ಅನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ನೀತಿ ಆಯೋಗ (NITI Aayog) ಹೊರಡಿಸಿರುವ ಹೇಳಿಕೆ ಪ್ರಕಾರ, ಇ-ಅಮೃತ್ (E-Amrit) ಪೋರ್ಟಲ್ ಎಲೆಕ್ಟ್ರಿಕ್ ವಾಹನಗಳ ಮಾಹಿತಿಯ ಒಂದು ಪ್ರಮುಖ ನಿಲ್ದಾಣವಾಗಿದೆ. EV-ಗಳ ಖರೀದಿ, ಅಳವಡಿಕೆ, ಹೂಡಿಕೆ ಅವಕಾಶ, ನೀತಿ ಮತ್ತು ಸಬ್ಸಿಡಿ ಯೋಜನೆ ಕುರಿತು ಮಾಹಿತಿ ಲಭ್ಯವಾಗಲಿದೆ.
ಯುಕೆ ಸರ್ಕಾರ (UK Government)ದ ಸಹಯೋಗದ ಜ್ಞಾನ ವಿನಿಮಯ ಕಾರ್ಯಕ್ರಮದಡಿ ನೀತಿ ಆಯೋಗ ಈ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಿದೆ. ಉಭಯ ದೇಶದ ಪ್ರಧಾನಮಂತ್ರಿಗಳು ಸಹಿ ಮಾಡಿರುವ ಯುಕೆ - ಇಂಡಿಯಾ ಜಂಟಿ ಮಾರ್ಗಸೂಚಿ (UK-India Joint Roadmap) 2030ರ ಭಾಗವಾಗಿ ಈ ಪೋರ್ಟಲ್ ಲೋಕಾರ್ಪಣೆಯಾಗಿದೆ ಎಂದು ತಿಳಿಸಿದೆ.
ಇ-ಅಮೃತ್ (E-Amrit) ಇವಿಗಳ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಯಿಸುವ ಪ್ರಯೋಜನಗಳ ಬಗ್ಗೆ ಗ್ರಾಹಕರನ್ನು ಸೆಳೆಯುವುದು ಈ ಯೋಜನೆಯ ಉದ್ದೇಶವಾಗಿದೆ. ಇತ್ತೀಚಿನ ದಿನಗಳಲ್ಲಿ ಭಾರತ ಸಾರಿಗೆ ವಲಯ (Transport Sector of India)ದ ಡಿಕಾರ್ಬೊನೈಸೇಶನ್ ಮತ್ತು ವಿದ್ಯುತ್ ಚಾಲಿತ ವಾಹನ ಅಳವಡಿಸಿಕೊಳ್ಳಲು (Adoption of electric mobility) ಅನೇಕ ಉಪಕ್ರಮಗಳನ್ನು ಜಾರಿ ಮಾಡುತ್ತಿದೆ.
ಇದನ್ನೂ ಓದಿ: ಖಾಸಗಿ ದರ್ಬಾರ್ ನಡುವೆ ಸರ್ಕಾರಿ ಸೇವೆ ಪಡೆದ ಅಧಿಕಾರಿ.. ಸರ್ಕಾರಿ ಆಸ್ಪತ್ರೆಯಲ್ಲೇ ಮಗುವಿಗೆ ಜನ್ಮನೀಡಿದ ಡಿಸಿ ಪತ್ನಿ