ETV Bharat / bharat

'ಭಾರತ ಇಸ್ರೇಲ್​ ಜೊತೆಗಿದೆ': ಇಸ್ರೇಲ್ ಪ್ರಧಾನಿಯೊಂದಿಗೆ ಮೋದಿ ಮಾತು

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರಧಾನಿ ಮೋದಿ ಅವರಿಗೆ ದೂರವಾಣಿ ಕರೆ ಮಾಡಿ ಇಸ್ರೇಲ್​ನಲ್ಲಿನ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದಾರೆ.

'India stands with Israel': PM Modi speaks to Israeli PM on Hamas attacks

author img

By ETV Bharat Karnataka Team

Published : Oct 10, 2023, 5:27 PM IST

ನವದೆಹಲಿ: ಇಸ್ರೇಲ್-ಹಮಾಸ್ ಯುದ್ಧದ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಭಾರತವು ಭಯೋತ್ಪಾದನೆಯನ್ನು ಅದರ ಎಲ್ಲಾ ರೂಪಗಳಲ್ಲಿ ಖಂಡಿಸುತ್ತದೆ ಎಂದು ಮೋದಿ ಈ ಸಂದರ್ಭದಲ್ಲಿ ಹೇಳಿದರು.

  • I thank Prime Minister @netanyahu for his phone call and providing an update on the ongoing situation. People of India stand firmly with Israel in this difficult hour. India strongly and unequivocally condemns terrorism in all its forms and manifestations.

    — Narendra Modi (@narendramodi) October 10, 2023 " class="align-text-top noRightClick twitterSection" data=" ">

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಇಸ್ರೇಲ್ ಪ್ರಧಾನಿ ತಮಗೆ ಕರೆ ಮಾಡಿ ಇಸ್ರೇಲ್​​ನ ಬೆಳವಣಿಗೆಗಳ ಮಾಹಿತಿ ನೀಡಿದರು ಎಂದು ಬರೆದಿದ್ದಾರೆ. "ಈ ಕಷ್ಟದ ಸಮಯದಲ್ಲಿ ಭಾರತದ ಜನರು ಇಸ್ರೇಲ್​ನೊಂದಿಗೆ ದೃಢವಾಗಿ ಬೆಂಬಲಕ್ಕೆ ನಿಲ್ಲುತ್ತಾರೆ. ಭಾರತವು ಭಯೋತ್ಪಾದನೆಯನ್ನು ಅದರ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳಲ್ಲಿ ಬಲವಾಗಿ ಮತ್ತು ನಿಸ್ಸಂದಿಗ್ಧವಾಗಿ ಖಂಡಿಸುತ್ತದೆ" ಎಂದು ಪ್ರಧಾನಿ ಬರೆದಿದ್ದಾರೆ.

ನೆತನ್ಯಾಹು ಅವರ ಜೊತೆಗೆ ದೂರವಾಣಿಯಲ್ಲಿ ಮಾತನಾಡಿದ ಬಗ್ಗೆ ಪ್ರಧಾನಿ ಮಾಡಿದ ಪೋಸ್ಟ್​ ಗೆ ಪ್ರತಿಕ್ರಿಯಿಸಿರುವ ಇಸ್ರೇಲ್​ನ ವಿದೇಶಾಂಗ ಸಚಿವಾಲಯ, "ಥ್ಯಾಂಕ್ ಯು ಪ್ರಧಾನಿ ನರೇಂದ್ರ ಮೋದಿ" ಎಂದು ಪೋಸ್ಟ್ ಮಾಡಿದೆ. ಇದಕ್ಕೂ ಮುನ್ನ ಇಸ್ರೇಲ್ ಮೇಲೆ ಹಮಾಸ್​ ದಾಳಿ ನಡೆದ ನಂತರ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದ ಪ್ರಧಾನಿ ಮೋದಿ, "ಭಯೋತ್ಪಾದಕ ದಾಳಿಯ ಸುದ್ದಿಯಿಂದ ಆಘಾತವಾಗಿದೆ. ಈ ಸಂಕಷ್ಟದ ಸಮಯದಲ್ಲಿ ಭಾರತದ ಬೆಂಬಲ ಸದಾ ಇಸ್ರೇಲ್ ಜೊತೆಗೆ ಇರುತ್ತದೆ" ಎಂದು ಹೇಳಿದ್ದರು.

ಇಸ್ರೇಲ್ ಮತ್ತು ಭಾರತ ದ್ವಿಪಕ್ಷೀಯ ಸಂಬಂಧ: ಭಾರತವು 1950 ರಲ್ಲಿ ಇಸ್ರೇಲ್ ಅನ್ನು ಒಂದು ದೇಶವಾಗಿ ಮಾನ್ಯತೆ ನೀಡಿತ್ತು. ಆದಾಗ್ಯೂ ಎರಡೂ ದೇಶಗಳ ಮಧ್ಯೆ ಔಪಚಾರಿಕ ರಾಜತಾಂತ್ರಿಕ ಸಂಬಂಧಗಳು ಆರಂಭವಾಗಲು ದಶಕಗಳೇ ಹಿಡಿದವು. 1992 ರಲ್ಲಿ ಔಪಚಾರಿಕ ಸಂಬಂಧಗಳನ್ನು ಸ್ಥಾಪಿಸಿದ ನಂತರ, ಇಸ್ರೇಲ್​ನೊಂದಿಗೆ ರಕ್ಷಣಾ ಮತ್ತು ವ್ಯಾಪಾರ ಸಂಬಂಧಗಳು ಪ್ರಾರಂಭವಾದವು ಮತ್ತು ಇಸ್ರೇಲ್ ಶೀಘ್ರದಲ್ಲೇ ಭಾರತದ ಎರಡನೇ ಅತಿದೊಡ್ಡ ರಕ್ಷಣಾ ಪಾಲುದಾರ ದೇಶವಾಯಿತು.

ಆದರೆ 2014 ರಲ್ಲಿ ಮೋದಿ ಪ್ರಧಾನಿಯಾದ ನಂತರ ಇಸ್ರೇಲ್​ನೊಂದಿಗಿನ ಸಂಬಂಧವು ಸ್ನೇಹಪರ ತಿರುವು ಪಡೆಯಲು ಪ್ರಾರಂಭಿಸಿತು. 2015 ಮತ್ತು 2016 ರಲ್ಲಿ ಯುದ್ಧಾಪರಾಧಗಳಿಗಾಗಿ ಇಸ್ರೇಲ್ ಅನ್ನು ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ ಮುಂದೆ ತರಬೇಕೇ ಎಂದು ಚರ್ಚಿಸುವ ವಿಶ್ವಸಂಸ್ಥೆಯ ಮತದಾನದಿಂದ ಭಾರತ ದೂರ ಉಳಿದಿತ್ತು. 2017ರಲ್ಲಿ ಇಸ್ರೇಲ್ ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದರು. ಇಂದು ಉಭಯ ದೇಶಗಳ ಸಂಬಂಧವು ಪ್ರವಾಸೋದ್ಯಮದಿಂದ ಮಿಲಿಟರಿಯವರೆಗೆ ವಿಶಾಲ ವ್ಯಾಪ್ತಿಯನ್ನು ಹೊಂದಿದೆ.

ಇದನ್ನೂ ಓದಿ : ಇಸ್ರೇಲ್‌ ವೃದ್ಧೆಯನ್ನು ಬರ್ಬರವಾಗಿ ಕೊಂದು ಫೇಸ್​ಬುಕ್​ಗೆ ವಿಡಿಯೋ ಅಪ್ಲೋಡ್; ಹಮಾಸ್​ ಉಗ್ರರ ಪೈಶಾಚಿಕ ಕೃತ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.