ETV Bharat / bharat

'ಭಾರತದಲ್ಲಿ 47 ಲಕ್ಷ ಕೋವಿಡ್ ಸಾವು': WHO ವರದಿ ತಿರಸ್ಕರಿಸಿದ ಭಾರತ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ವಿಶ್ವ ಆರೋಗ್ಯ ಸಂಸ್ಥೆ (WHO) ಮಾಡಿರುವ ಭಾರತದ ಕೋವಿಡ್ ಸಾವುಗಳ ಅಂದಾಜುಗಳನ್ನು ಭಾರತ ಸರ್ಕಾರವು ಪ್ರಶ್ನಿಸಿದೆ. ಭಾರತದಲ್ಲಿ ಕೋವಿಡ್‌ನಿಂದಾಗಿ 4.7(47 ಲಕ್ಷ) ಮಿಲಿಯನ್ ಜನರು ಮೃತಪಟ್ಟಿದ್ದಾರೆ ಎಂದು ಡಬ್ಲ್ಯೂಹೆಚ್​​ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದು, ಸರ್ಕಾರ ಅಧಿಕೃತವಾಗಿ ಘೋಷಿಸಿದ್ದಕ್ಕಿಂತಲೂ ಬಹುತೇಕ 10 ಪಟ್ಟು ಹೆಚ್ಚಾಗಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
author img

By

Published : May 6, 2022, 8:24 AM IST

ನವದೆಹಲಿ: ದೇಶದಲ್ಲಿ ಕೋವಿಡ್​​ ಸಾವಿನ ಪ್ರಕರಣಗಳ ಸಂಖ್ಯೆಯನ್ನು ಲೆಕ್ಕಾಚಾರ ಮಾಡಲು ವಿಶ್ವ ಆರೋಗ್ಯ ಸಂಸ್ಥೆಯ ಗಣಿತದ ಮಾದರಿ ಬಳಕೆಯನ್ನು ಭಾರತ ತಿರಸ್ಕರಿಸಿದೆ. ಈ ಅಂಕಿ-ಸಂಖ್ಯೆಗಳು ವಾಸ್ತವ ಚಿತ್ರಣದಿಂದ ಸಂಪೂರ್ಣ ಭಿನ್ನವಾಗಿದೆ ಎಂದು ಹೇಳಿದೆ. ದೇಶವು ಜನನ-ಮರಣ ನೋಂದಣಿಗೆ ಅತ್ಯಂತ ದೃಢವಾದ ವ್ಯವಸ್ಥೆಯನ್ನು ಹೊಂದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಪ್ರತಿಪಾದಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯ ದತ್ತಾಂಶ ಸಂಗ್ರಹದ ವ್ಯವಸ್ಥೆಯು ಸಂಖ್ಯಾಶಾಸ್ತ್ರೀಯವಾಗಿ ಮತ್ತು ವೈಜ್ಞಾನಿಕವಾಗಿ ಅಸ್ಪಷ್ಟ ಹಾಗೂ ಪ್ರಶ್ನಾರ್ಹವಾಗಿದೆ. WHO ಗುರುವಾರ ಬಿಡುಗಡೆಯಾದ ವರದಿಯಲ್ಲಿ 2020ರ ಜನವರಿ ಮತ್ತು 2021ರ ಡಿಸೆಂಬರ್ ಅವಧಿಯಲ್ಲಿ ಭಾರತದಲ್ಲಿ ಕೋವಿಡ್-19 ಸೋಂಕಿನಿಂದ 4.7 ಮಿಲಿಯನ್​ಗೂ ಹೆಚ್ಚು ಮಂದಿ ಪ್ರಾಣ ಬಿಟ್ಟಿದ್ದಾರೆ ಎಂದು ಹೇಳಿತ್ತು. ಇದು ವಾಸ್ತವ ಅಂಕಿ-ಅಂಶಗಳಿಗೆ ಹೋಲಿಸಿದರೆ 10 ಪಟ್ಟು ಹೆಚ್ಚಾಗಿದ್ದು, ಜಾಗತಿಕ ಮಟ್ಟದಲ್ಲಿ ಸಾವಿನ ಪ್ರಮಾಣದ ಮೂರನೇ ಒಂದು ಭಾಗದಷ್ಟಿದೆ.

ಭಾರತದ ಆಕ್ಷೇಪ: ಭಾರತದ 17 ರಾಜ್ಯಗಳಿಗೆ ಸಂಬಂಧಿಸಿದಂತೆ ಅಂಕಿ-ಅಂಶಗಳನ್ನು ಕೆಲವು ವೆಬ್‌ಸೈಟ್‌ಗಳು ಮತ್ತು ಮಾಧ್ಯಮ ವರದಿಗಳಿಂದ ಪಡೆಯಲಾಗಿದೆ. ಅವುಗಳನ್ನು ಗಣಿತದ ಮಾದರಿಯಲ್ಲಿ ಬಳಸಲಾಗಿದೆ ಎಂಬ ವಿಶ್ವ ಆರೋಗ್ಯ ಸಂಸ್ಥೆಯ ವಾದವನ್ನು ಭಾರತ ಪ್ರಶ್ನಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ. ಈ ಮಾದರಿಯು ಹೆಚ್ಚಿನ ಸಾವಿನ ಪ್ರಕರಣಗಳು ವರದಿಯಾಗಿವೆ ಎಂದು ಹೇಳುತ್ತವೆ. ಆದರೆ ಸಂಖ್ಯಾಶಾಸ್ತ್ರೀಯವಾಗಿ ಮತ್ತು ವೈಜ್ಞಾನಿಕವಾಗಿ ಅಸ್ಪಷ್ಟ ಹಾಗೂ ಪ್ರಶ್ನಾರ್ಹವಾಗಿದೆ ಎಂಬುದನ್ನು ದತ್ತಾಂಶ ಸಂಗ್ರಹಣೆಯ ವಿಧಾನ ಪ್ರತಿಬಿಂಬಿಸುತ್ತದೆ ಎಂದು ಭಾರತ ಸರ್ಕಾರ ಹೇಳಿದೆ.

ಇದನ್ನೂ ಓದಿ: ದೇಶದಲ್ಲಿ 3,275 ಕೋವಿಡ್​ ಕೇಸ್ ಪತ್ತೆ​; ಹೊಸ ತಳಿಗಳಿಗೂ ವ್ಯಾಕ್ಸಿನ್‌ ರಾಮಬಾಣ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.