ನವದೆಹಲಿ: ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ ಎಂದು ಮೋದಿ ಹೇಳಿದ್ದಾರೆ. ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಭಾರತವು ತನ್ನ ವಿಜ್ಞಾನಿಗಳು, ವೈದ್ಯರು, ಯುವಕರನ್ನು ನಂಬಿತ್ತು. ಹಾಗಾಗಿ ಕೊರೊನಾ ಸಮಸ್ಯೆಯಾಗಲಿಲ್ಲ. ಅವರೆಲ್ಲಾ ಜಗತ್ತಿಗೆ ಪರಿಹಾರ ನೀಡುವವರಾಗಿದ್ದರು ಎಂದು ಹೊಗಳಿದ್ದಾರೆ.
ಮಕ್ಕಳಿಗಾಗಿ ಪಿಎಂ-ಕೇರ್ಸ್ ಯೋಜನೆಯಡಿ ಪ್ರಯೋಜನಗಳನ್ನು ಬಿಡುಗಡೆ ಮಾಡುವ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಮಾತನಾಡಿದವರು. ಈ ವೇಳೆ ಶಾಲೆಗೆ ಹೋಗುವ ಮಕ್ಕಳಿಗೆ ವಿದ್ಯಾರ್ಥಿವೇತನ ವರ್ಗಾಯಿಸಿದರು. ಅಲ್ಲದೆ, ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯಡಿ ಮಕ್ಕಳಿಗಾಗಿ ಪಿಎಂ ಕೇರ್ಸ್ ಮತ್ತು ಆರೋಗ್ಯ ಕಾರ್ಡ್‌ನ ಪಾಸ್‌ಬುಕ್ ಅನ್ನು ಹಸ್ತಾಂತರಿಸಿದರು.
ಈ ಯೋಜನೆಯಡಿ ಯಾರಿಗಾದರೂ ವೃತ್ತಿಪರ ಕೋರ್ಸ್‌ಗಳಿಗೆ, ಉನ್ನತ ಶಿಕ್ಷಣಕ್ಕಾಗಿ ಶಿಕ್ಷಣ ಸಾಲದ ಅಗತ್ಯವಿದ್ದರೆ ಅದಕ್ಕೆ PM-CARES ಸಹಾಯ ಮಾಡುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಮಕ್ಕಳಿಗೆ ಪ್ರತಿ ತಿಂಗಳು 4,000 ರೂ.ಗಳನ್ನು ನೀಡಲಾಗುವುದು. ಇದು ಅವರ ದೈನಂದಿನ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತದೆ. 23 ವರ್ಷ ತುಂಬಿದ ನಂತರ 10 ಲಕ್ಷ ರೂಪಾಯಿಗಳ ಜೊತೆಗೆ, ಮಕ್ಕಳಿಗೆ ಆಯುಷ್ಮಾನ್ ಕಾರ್ಡ್ ಮೂಲಕ ಆರೋಗ್ಯ ರಕ್ಷಣೆ ಮತ್ತು ಮಾನಸಿಕ ಮತ್ತು ಭಾವನಾತ್ಮಕ ಸಹಾಯಕ್ಕಾಗಿ 'ಸಂವಾದ್ ಸಹಾಯವಾಣಿ' ಮೂಲಕ ಭಾವನಾತ್ಮಕ ಸಲಹೆಯನ್ನು ನೀಡಲಾಗುತ್ತದೆ ಎಂದು ವಿವರಿಸಿದರು.
ಸಾಂಕ್ರಾಮಿಕ ಸಮಯದಲ್ಲಿ ನೆಗೆಟಿವ್ ವಾತಾವರಣದಲ್ಲಿ, ಭಾರತವು ತನ್ನ ಶಕ್ತಿಯನ್ನು ಅವಲಂಬಿಸಿತ್ತು. ಆಗ ನಾವು ನಮ್ಮ ವಿಜ್ಞಾನಿಗಳು, ವೈದ್ಯರು, ನಮ್ಮ ಯುವಕರನ್ನು ನಂಬಿದ್ದೆವು. ಪರಿಣಾಮ ನಾವು ಭರವಸೆಯ ಕಿರಣವಾಗಿ ಹೊರಬಂದಿದ್ದೇವೆ. ನಾವು ಜಗತ್ತಿಗೆ ಸಮಸ್ಯೆಯಾಗಲಿಲ್ಲ ಬದಲಾಗಿ ಪರಿಹಾರ ನೀಡುವವರಾಗಿದ್ದೇವೆ ಎಂದು ಕೊರೊನಾ ವಾರಿಯರ್ಸ್ಅನ್ನು ಕೊಂಡಾಡಿದರು.
ತಮ್ಮ ಸರ್ಕಾರ ಎಂಟು ವರ್ಷಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ದೇಶವಾಸಿಗಳಿಗೆ ತಮ್ಮ ಮೇಲಿನ ವಿಶ್ವಾಸ ಅಭೂತಪೂರ್ವವಾಗಿದೆ. 2014ಕ್ಕೂ ಮೊದಲು ಇದ್ದ ಭ್ರಷ್ಟಾಚಾರ, ಸಾವಿರಾರು ಕೋಟಿ ಹಗರಣಗಳು, ಸ್ವಜನಪಕ್ಷಪಾತ, ದೇಶಾದ್ಯಂತ ಹರಡಿರುವ ಭಯೋತ್ಪಾದಕ ಸಂಘಟನೆಗಳು, ಪ್ರಾದೇಶಿಕ ತಾರತಮ್ಯದ ವಿಷವರ್ತುಲದಿಂದ ದೇಶ ಹೊರಬರುತ್ತಿದೆ ಎಂದು ಇದೇ ವೇಳೆ ಮೋದಿ ಮೋದಿ ಹೇಳಿದರು.
PM-CARES ನಿಧಿಯ ಕುರಿತು ಮಾತನಾಡಿದ ಅವರು, ಕೊರೊನಾ ಅವಧಿಯಲ್ಲಿ ಆಸ್ಪತ್ರೆಗಳನ್ನು ಸಿದ್ಧಪಡಿಸಲು, ವೆಂಟಿಲೇಟರ್‌ಗಳನ್ನು ಖರೀದಿಸಲು ಮತ್ತು ಆಮ್ಲಜನಕ ಘಟಕಗಳನ್ನು ಸ್ಥಾಪಿಸಲು ಈ ನಿಧಿಯು ಸಾಕಷ್ಟು ಸಹಾಯ ಮಾಡಿದೆ. ಇದರಿಂದಾಗಿ ಅನೇಕ ಜೀವಗಳನ್ನು ಉಳಿಸಲಾಯಿತು ಮತ್ತು ಅನೇಕ ಕುಟುಂಬಗಳ ಭವಿಷ್ಯವನ್ನು ಉಳಿಸಲಾಯಿತು ಎಂದರು.
ಸ್ವಚ್ಛ ಭಾರತ್ ಮಿಷನ್, ಜನ್ ಧನ್ ಯೋಜನಾ ಹಾಗೂ ಹರ್ ಘರ್ ಜಲ ಅಭಿಯಾನದಂತಹ ಕಲ್ಯಾಣ ನೀತಿಗಳನ್ನು ಉಲ್ಲೇಖಿಸಿದ ಪ್ರಧಾನಿ, ಸರ್ಕಾರವು 'ಸಬ್ಕಾ ಸಾಥ್ ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಯಾಸ್' ಎಂಬ ಮನೋಭಾವದೊಂದಿಗೆ ನಡೆಯುತ್ತಿದೆ. ಕಳೆದ ಎಂಟು ವರ್ಷಗಳನ್ನು ಬಡವರ ಕಲ್ಯಾಣ ಮತ್ತು ಸೇವೆಗೆ ಮೀಸಲಿಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ನನ್ನ ಪ್ರಶ್ನೆಗೆ ಉತ್ತರಿಸಲಾಗದ ಆರ್ಎಸ್ಎಸ್ ಬಿಜೆಪಿಗರನ್ನು ಛೂ ಬಿಟ್ಟಿದೆ: ಸಿದ್ದರಾಮಯ್ಯ