ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 2,288 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 4,31,07,689ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಸದ್ಯ ದೇಶದಲ್ಲಿ 19,637 ಸಕ್ರಿಯ ಪ್ರಕರಣಗಳಿವೆ.
-
#COVID19 | India reports 2,288 fresh cases, 3,044 recoveries, and 10 deaths in the last 24 hours. Total active cases 19,637. Daily positivity rate at 0.47% pic.twitter.com/8p0CdsLAgL
— ANI (@ANI) May 10, 2022 " class="align-text-top noRightClick twitterSection" data="
">#COVID19 | India reports 2,288 fresh cases, 3,044 recoveries, and 10 deaths in the last 24 hours. Total active cases 19,637. Daily positivity rate at 0.47% pic.twitter.com/8p0CdsLAgL
— ANI (@ANI) May 10, 2022#COVID19 | India reports 2,288 fresh cases, 3,044 recoveries, and 10 deaths in the last 24 hours. Total active cases 19,637. Daily positivity rate at 0.47% pic.twitter.com/8p0CdsLAgL
— ANI (@ANI) May 10, 2022
ನಿನ್ನೆ(ಸೋಮವಾರ) ದೇಶಾದ್ಯಂತ ಒಟ್ಟು 10 ಮಂದಿ ಸೋಂಕಿಗೆ ಬಲಿಯಾಗಿದ್ದು, ಮೃತರ ಸಂಖ್ಯೆ 5,24,103ಕ್ಕೆ ಏರಿದೆ. ರಾಷ್ಟ್ರೀಯ ಕೋವಿಡ್-19 ಚೇತರಿಕೆ ದರ ಶೇ. 98.74 ರಷ್ಟಿದೆ. ಸಾವಿನ ಪ್ರಮಾಣ ಶೇ. 1.22 ರಷ್ಟಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 3,044 ಮಂದಿ ಗುಣಮುಖರಾಗಿದ್ದು, ಈವರೆಗೆ 4,25,63,949 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.
ದೈನಂದಿನ ಪಾಸಿಟಿವಿಟಿ ದರ ಶೇ 0.95 ರಷ್ಟಿದ್ದರೆ, ಸಾಪ್ತಾಹಿಕ ಪಾಸಿಟಿವಿಟಿ ದರ ಶೇ.0.82 ರಷ್ಟಿದೆ. ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಡ್ರೈವ್ ಅಡಿ ನಿರ್ವಹಿಸಲಾದ ಒಟ್ಟು ಲಸಿಕೆಯ ಡೋಸ್ಗಳ ಸಂಖ್ಯೆ 190.50ಕೋಟಿ ಆಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಎರಡಂಕಿಗಿಳಿದ ಕೋವಿಡ್ ಪ್ರಕರಣ.. ಓರ್ವ ಸೋಂಕಿತ ಸಾವು