ನವದೆಹಲಿ : ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 2,183 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಪ್ರಕರಣಗಳ ಸಂಖ್ಯೆಯಲ್ಲಿ ಸುಮಾರು ಶೇ. 90ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಇನ್ನು ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 4,30,44,280ಕ್ಕೆ ಏರಿಕೆಯಾಗಿದೆ.
-
India reports 2,183 fresh #COVID19 cases, 1,985 recoveries and 214 deaths in the last 24 hours.
— ANI (@ANI) April 18, 2022 " class="align-text-top noRightClick twitterSection" data="
Active cases 11,542 pic.twitter.com/UfFx8H3ao4
">India reports 2,183 fresh #COVID19 cases, 1,985 recoveries and 214 deaths in the last 24 hours.
— ANI (@ANI) April 18, 2022
Active cases 11,542 pic.twitter.com/UfFx8H3ao4India reports 2,183 fresh #COVID19 cases, 1,985 recoveries and 214 deaths in the last 24 hours.
— ANI (@ANI) April 18, 2022
Active cases 11,542 pic.twitter.com/UfFx8H3ao4
ಭಾನುವಾರ 1,150 ಕೋವಿಡ್ ಪ್ರಕರಣಗಳು ದಾಖಲಾಗಿದ್ದವು. ನಿನ್ನೆ ಒಂದೇ ದಿನ 214 ಮಂದಿ ಸೋಂಕಿಗೆ ಬಲಿಯಾಗಿದ್ದು, ಒಟ್ಟು ಮೃತರ ಸಂಖ್ಯೆ 5,21,965ಕ್ಕೆ ಏರಿದೆ. ದೈನಂದಿನ ಪಾಸಿಟಿವಿ ದರ ಶೇ. 0.83 ಮತ್ತು ಸಾಪ್ತಾಹಿಕ ಪಾಸಿಟಿವಿ ದರ ಶೇ.32ರಷ್ಟಿದೆ. ರಾಷ್ಟ್ರೀಯ ಕೋವಿಡ್ ಚೇತರಿಕೆ ದರ ಶೇ.98.76 ರಷ್ಟಿದೆ.
ದೇಶದಲ್ಲಿ 11,542 ಸಕ್ರಿಯ ಪ್ರಕರಣಗಳಿವೆ. ಕಳೆದ 24 ಗಂಟೆಗಳಲ್ಲಿ 1,985 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ಈವರೆಗೆ 4,25,10,773 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಮತ್ತೊಂದೆಡೆ ದೇಶದಲ್ಲಿ ಲಸಿಕೆ ನೀಡುವ ಕಾರ್ಯ ಮುಂದುವರೆದಿದೆ. ರಾಷ್ಟ್ರವ್ಯಾಪಿ ಇದುವರೆಗೆ ಒಟ್ಟು 186.52 ಕೋಟಿ ಲಸಿಕಾ ಡೋಸ್ ನೀಡಲಾಗಿದೆ.
ಇದನ್ನೂ ಓದಿ: ಚೀನಾದಲ್ಲಿ ಪತ್ತೆಯಾಗಿರುವ XE ರೂಪಾಂತರಿ ವೇಗವಾಗಿ ಹರಡುತ್ತದೆ : ದಕ್ಷಿಣ ಕನ್ನಡ ಡಿಹೆಚ್ಒ