ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 13,154 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 34,822,040ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ದೇಶದಲ್ಲಿ ಇಂದು ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 961 ತಲುಪಿದೆ. ದೆಹಲಿಯಲ್ಲಿ 263 ಮತ್ತು ಮಹಾರಾಷ್ಟ್ರದಲ್ಲಿ 252 ಪ್ರಕರಣಗಳಿವೆ. 961 ಪ್ರಕರಣಗಳಲ್ಲಿ, 320 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ.
ಪ್ರಸ್ತುತ ದೇಶದಲ್ಲಿ ಚೇತರಿಕೆಯ ಪ್ರಮಾಣ ಶೇ.98.38 ರಷ್ಟಿದೆ. ಕಳೆದ 24 ಗಂಟೆಗಳಲ್ಲಿ 7,486 ಸೋಂಕಿತರು ಚೇತರಿಸಿಕೊಂಡಿದ್ದು, ಒಟ್ಟು ಚೇತರಿಸಿಕೊಂಡವರ ಸಂಖ್ಯೆ 3,42,58,778 ಇದೆ.
ಬುಧವಾರ 268 ಮಂದಿ ಸಾವನಪ್ಪಿದ್ದು, ಮೃತರ ಸಂಖ್ಯೆ 4,80,860ಕ್ಕೆ ಏರಿಕೆಯಾಗಿದೆ. ದೈನಂದಿನ ಪಾಸಿಟಿವಿಟಿ ದರ ಶೇ 1.10 ರಷ್ಟಿದ್ದು, ಒಟ್ಟು 82,402 ಸಕ್ರಿಯ ಪ್ರಕರಣಗಳಿವೆ.
ಮುಂಬೈನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಭಾರಿ ಏರಿಕೆಯಾಗಿದ್ದು, 2,510 ಹೊಸ ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರಿನಲ್ಲಿ 400, ಕೋಲ್ಕತ್ತಾದಲ್ಲಿ 540 ಮತ್ತು ಚೆನ್ನೈನಲ್ಲಿ 294 ಪ್ರಕರಣಗಳು ವರದಿಯಾಗಿವೆ.
ರಾಜ್ಯವಾರು ಒಮಿಕ್ರಾನ್ ಪ್ರಕರಣಗಳ ಮಾಹಿತಿ ಹೀಗಿದೆ..
ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ ಒಟ್ಟು 11,99,252 ಪರೀಕ್ಷೆಗಳನ್ನು ನಡೆಸಲಾಗಿದ್ದು, ಈವರೆಗೆ 67.64 ಕೋಟಿ (67,64,45,395) ಪರೀಕ್ಷೆಗಳನ್ನು ನಡೆಸಲಾಗಿದೆ.
149.70 ಕೋಟಿ ವ್ಯಾಕ್ಸಿನೇಷನ್:
ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶ ಸೇರಿದಂತೆ ದೇಶದಲ್ಲಿ ಈವರೆಗೆ 149.70 ಕೋಟಿಗೂ ಹೆಚ್ಚು (1,49,70,76,985) ಡೋಸ್‌ಗಳನ್ನು ನೀಡಲಾಗಿದೆ.
ಇದನ್ನೂ ಓದಿ: ಕೋವಿಡ್‌ಗೆ ಅಮೆರಿಕ ತತ್ತರ: 24 ಗಂಟೆಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಸೋಂಕಿತರು ಪತ್ತೆ