ನವದೆಹಲಿ: ಭಾರತ ತನ್ನ ‘ಸ್ವದೇಶಿ 5G ಟೆಸ್ಟ್ ಬೆಡ್’ ಯೋಜನೆಯನ್ನು ಡಿಸೆಂಬರ್ 31, 2021 ರಂದು ಪೂರ್ಣಗೊಳಿಸಿದೆ ಎಂದು ಸಂಪರ್ಕ ಖಾತೆ ರಾಜ್ಯ ಸಚಿವ ದೇವುಸಿನ್ಹ್ ಚೌಹಾಣ್ ರಾಜ್ಯಸಭೆಯಲ್ಲಿ ಶುಕ್ರವಾರ ತಿಳಿಸಿದ್ದಾರೆ.
ದೂರಸಂಪರ್ಕ ಇಲಾಖೆಯಿಂದ ಧನ ಸಹಾಯ ಪಡೆದ 'ಸ್ಥಳೀಯ 5G ಟೆಸ್ಟ್ ಬೆಡ್' ಯೋಜನೆ 2021ರ ಡಿ.31 ರಂದು ಪೂರ್ಣಗೊಂಡಿದೆ ಎಂದು ಅವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಇದು ವಾಯು ಸಂಚಾರಕ್ಕೆ ಬಳಸುವ ವೈರ್‌ಲೆಸ್ ಸಂವಹನಕ್ಕೆ ತೊಂದರೆಯಾಗುತ್ತದೆಯೇ ಎಂಬ ಬಗ್ಗೆ ಉತ್ತರಿಸಿದ ಅವರು, "ಭಾರತದಲ್ಲಿ 5G ತಂತ್ರಜ್ಞಾನ ಸೇರಿದಂತೆ ಇಂಟರ್ನ್ಯಾಷನಲ್ ಮೊಬೈಲ್ ಟೆಲಿಕಮ್ಯುನಿಕೇಷನ್ಸ್ (IMT) ಗಾಗಿ ತೆರೆಯಲಾದ ಆವರ್ತನ ಬ್ಯಾಂಡ್‌ಗಳು ಸಾಕಷ್ಟು ಗಾರ್ಡ್ ಬ್ಯಾಂಡ್ ಹೊಂದಿವೆ" ಎಂದು ಸ್ಪಷ್ಟಪಡಿಸಿದ್ದಾರೆ.
ದೂರಸಂಪರ್ಕ ಇಲಾಖೆಯು 6G ಯಲ್ಲಿ ಟೆಕ್ನಾಲಜಿ ಇನ್ನೋವೇಶನ್ ಗ್ರೂಪ್ ಸ್ಥಾಪಿಸಿದೆ. "ಟೆಲಿಕಮ್ಯುನಿಕೇಶನ್ಸ್ ಇಲಾಖೆಯು 6G ಮತ್ತು ಶೈಕ್ಷಣಿಕ ಮತ್ತು ಉದ್ಯಮದ ಸದಸ್ಯರನ್ನು ಒಳಗೊಂಡಿರುವ ವಿವಿಧ ಕಾರ್ಯಪಡೆಗಳ ಮೇಲೆ ತಂತ್ರಜ್ಞಾನ ನಾವೀನ್ಯತೆ ಗುಂಪು ರಚಿಸಿದೆ" ಎಂದು ಅವರು ಇದೇ ವೇಳೆ ಮಾಹಿತಿ ನೀಡಿದರು.
ಇದನ್ನೂ ಓದಿ: ದೇಶದ ವಿವಿಧ ಭಾಗಗಳಲ್ಲಿ ಏರ್‌ಟೆಲ್ ಇಂಟರ್ನೆಟ್ ಸೇವೆ ಸ್ಥಗಿತ: ಬಳಕೆದಾರರು ಹೈರಾಣು