ನವ ದೆಹಲಿ: ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ಸಂಘರ್ಷ ನಡೆದಿದೆ. ಈ ಸಂದರ್ಭದಲ್ಲಿ ಎರಡೂ ಕಡೆಯ ಸೈನಿಕರಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ. ಈ ಘಟನೆಯ ಬಳಿಕ ಉಭಯ ದೇಶಗಳ ಸೈನಿಕರು ಸಂಘರ್ಷ ನಡೆದ ಪ್ರದೇಶದಿಂದ ಹೊರ ನಡೆದಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಮೂಲಗಳು ನೀಡಿದ ಮಾಹಿತಿಯಂತೆ, ಡಿಸೆಂಬರ್ 9 ರಂದು ಅರುಣಾಚಲ ಪ್ರದೇಶದ ವಾಸ್ತವ ಗಡಿರೇಖೆಯೊಳಗೆ(LAC) ನುಗ್ಗುವ ಪ್ರಯತ್ನವನ್ನು ಚೀನಾ ಸೈನಿಕರು ಮಾಡಿದ್ದಾರೆ. ಇದನ್ನು ಭಾರತೀಯ ಸೇನೆ ಬಲವಾಗಿ ವಿರೋಧಿಸಿದೆ. ಈ ಸಂದರ್ಭದಲ್ಲಿ ಸೈನಿಕರ ನಡುವೆ ಹೊಡೆದಾಟ ನಡೆದು ಎರಡೂ ಕಡೆಯ ಕೆಲವು ಸೈನಿಕರಿಗೆ ಸಣ್ಣ ಪ್ರಮಾಣದ ಗಾಯಗಳಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಭಾರತೀಯ ವಾಯುಸೇನೆ ಮೆಸ್ ಸೇರಬೇಕಿದ್ದ 4 ಸಾವಿರ ಮೊಟ್ಟೆಗಳೊಂದಿಗೆ ರಿಕ್ಷಾ ಚಾಲಕ ಪರಾರಿ!