ETV Bharat / bharat

ಭಾರತ ಮತ್ತು ಚೀನಾ ನಡುವಿನ ಸಂಬಂಧ ಸದ್ಯಕ್ಕೆ ಸಹಜವಾಗಿಲ್ಲ: ವಿದೇಶಾಂಗ ಸಚಿವ ಜೈಶಂಕರ್‌ - ದೇಶಾಂಗ ಸಚಿವ ಎಸ್‌.ಜೈಶಂಕರ್‌

ನವದೆಹಲಿಯ ಹೈದ್ರಾಬಾದ್​ ಭವನದಲ್ಲಿ ಶುಕ್ರವಾರ ವಿದೇಶಾಂಗ ಸಚಿವ ಡಾ.ಎಸ್‌.ಜೈಶಂಕರ್‌ ಮತ್ತು ಚೀನಾ ವಿದೇಶಾಂಗ ಸಚಿವ ವಾಂಗ್‌ ಯಿ ನಡುವೆ ಮಹತ್ವದ ಸಭೆ ನಡೆಯಿತು. ಉಭಯ ನಿಯೋಗಗಳ ಮಧ್ಯೆ ಸುಮಾರು ಮೂರು ಗಂಟೆಗಳಷ್ಟು ದೀರ್ಘ ಕಾಲದ ಮಾತುಕತೆ ಜರುಗಿತು..

EAM Jaishankar
EAM Jaishankar
author img

By

Published : Mar 25, 2022, 6:53 PM IST

ನವದೆಹಲಿ : ಭಾರತ ಮತ್ತು ಚೀನಾ ನಡುವಿನ ಸಂಬಂಧ ಸದ್ಯಕ್ಕೆ ಇನ್ನೂ ಸಹಜವಾಗಿಲ್ಲ. 1993-96ರ ಒಪ್ಪಂದಗಳಿಗೆ ವಿರುದ್ಧವಾಗಿ ಹೆಚ್ಚಿನ ಸಂಖ್ಯೆಯ ಸೈನಿಕರನ್ನು ನಿಯೋಜಿಸಲಾಗಿದೆ. ಕೆಲ ಸಂಘರ್ಷದ ಸ್ಥಳಗಳಲ್ಲಿ ಪರಿಹಾರ ಕಂಡುಕೊಳ್ಳುವ ಕಾರ್ಯ ನಡೆಯುತ್ತಿದೆ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ತಿಳಿಸಿದ್ದಾರೆ.

ನವದೆಹಲಿಯ ಹೈದ್ರಾಬಾದ್​ ಭವನದಲ್ಲಿ ಶುಕ್ರವಾರ ವಿದೇಶಾಂಗ ಸಚಿವ ಡಾ.ಎಸ್‌.ಜೈಶಂಕರ್‌ ಮತ್ತು ಚೀನಾ ವಿದೇಶಾಂಗ ಸಚಿವ ವಾಂಗ್‌ ಯಿ ನಡುವೆ ಮಹತ್ವದ ಸಭೆ ನಡೆಯಿತು. ಉಭಯ ನಿಯೋಗಗಳ ಮಧ್ಯೆ ಸುಮಾರು ಮೂರು ಗಂಟೆಗಳಷ್ಟು ದೀರ್ಘ ಕಾಲದ ಮಾತುಕತೆ ಜರುಗಿತು. ಬಳಿಕ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಸಚಿವ ಜೈಶಂಕರ್‌ ಮಾತನಾಡಿದರು.

ಎರಡು ರಾಷ್ಟ್ರಗಳ ನಡುವೆ ಮುಕ್ತ, ಪ್ರಾಮಾಣಿಕ ವಾತಾವರಣದಲ್ಲಿ ಚರ್ಚೆ ನಡೆದಿದೆ. ವಿಶಾಲ ಮತ್ತು ವಸ್ತುನಿಷ್ಠ ಕಾರ್ಯಸೂಚಿ ಮೇಲೆ ಸಮಾಲೋಚನೆ ನಡೆಸಿದ್ದೇವೆ. ಗಡಿಯಲ್ಲಿ ಸಹಜತೆ ಮರು ಸ್ಥಾಪಿಸಬೇಕಿದ್ದರೆ, ಶಾಂತಿ ಮತ್ತು ನೆಮ್ಮದಿಯ ವಾತಾವರಣದ ಮರು ಸ್ಥಾಪನೆ ಅಗತ್ಯವಿದೆ. ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಚೀನಾದೊಂದಿಗೆ ಈವರೆಗೆ 15 ಸುತ್ತಿನ ಮಾತುಕತೆಗಳು ನಡೆದಿವೆ ಎಂದರು.

ಗಡಿಯಲ್ಲಿ ಪ್ರಸ್ತುತ ದೊಡ್ಡ ಮಟ್ಟದಲ್ಲಿ ಸೇನೆ ನಿಯೋಜನೆಗೊಂಡಿದೆ. ಅಲ್ಲಿ ಗಡಿ ಪರಿಸ್ಥಿತಿ ಸಹಜವಾಗಿಲ್ಲ. ಇನ್ನೂ ಕೆಲ ಪ್ರದೇಶಗಳು ಸಂಘರ್ಷ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಇದರ ಹೊರತಾಗಿಯೂ ಪ್ಯಾಂಗಾಂಗ್ ತ್ಸೋ ಸೇರಿದಂತೆ ಇತರ ಸಂಘರ್ಷ ಪ್ರದೇಶಗಳಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳುವಲ್ಲಿ ಪ್ರಗತಿ ಸಾಧಿಸಿದ್ದೇವೆ ಎಂದರು.

ಅಲ್ಲದೇ, ಚೀನಾಕ್ಕೆ ಹಿಂದಿರುಗಿದ ನಂತರ ಈ ವಿಷಯವನ್ನು ಅಲ್ಲಿ ಕೂಡ ಚರ್ಚಿಸುವುದಾಗಿ ವಿದೇಶಾಂಗ ಸಚಿವ ವಾಂಗ್ ಯಿ ನಮಗೆ ಭರವಸೆ ನೀಡಿದ್ದಾರೆ. ವಾಂಗ್ ಯಿ ಅವರೊಂದಿಗಿನ ಮಾತುಕತೆಯ ವೇಳೆ ಗಡಿ ವಿಷಯದ ಕುರಿತ ನಮ್ಮ ಭಾವನೆಗಳನ್ನು ಪ್ರಾಮಾಣಿಕವಾಗಿ ವಿವರಿಸಿದ್ದೇವೆ. ಆಫ್ಘಾನಿಸ್ತಾನ ಮತ್ತು ಉಕ್ರೇನ್ ಸೇರಿದಂತೆ ಪ್ರಮುಖ ಅಂತಾರಾಷ್ಟ್ರೀಯ ವಿಷಯಗಳ ಬಗ್ಗೆಯೂ ಅಭಿಪ್ರಾಯಗಳ ವಿನಿಯಮ ಮಾಡಿಕೊಳ್ಳಲಾಯಿತು ಎಂದರು.

ಇದನ್ನೂ ಓದಿ: 37 ವರ್ಷದ ನಂತರ ಸತತ 2ನೇ ಅವಧಿಗೆ ಯುಪಿ ಸಿಎಂ ಆಗಿ ಯೋಗಿ ಆದಿತ್ಯನಾಥ್‌ ಐತಿಹಾಸಿಕ ಪದಗ್ರಹಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.