ETV Bharat / bharat

ಒಬ್ಬ ನಾಯಕನಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ: ಮೋಹನ್ ಭಾಗವತ್ - ಈಟಿವಿ ಭಾರತ ಕನ್ನಡ

ಹಿಂದೂಗಳು ಬಲಿಷ್ಠರಾಗಿರಬೇಕು. ಅದಕ್ಕಾಗಿ ಸಂಘವು ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ತನ್ನ ಕಾರ್ಯವನ್ನು ಮುಂದುವರೆಸುತ್ತದೆ. ಹಿಂದೂ ಸಮುದಾಯವು ತನ್ನ ಸಮಸ್ಯೆಗಳನ್ನು ಪರಿಹರಿಸಲು ಸಾಕಷ್ಟು ಬಲಗೊಳ್ಳಬೇಕೆಂದೇ ಸಂಘವು ಬಯಸುತ್ತದೆ ಎಂದು ಮೋಹನ್ ಭಾಗವತ್ ಹೇಳಿದರು.

india-became-independent-when-people-took-to-streets-rss-chief
ಸಾಮಾನ್ಯ ಜನರು ಬೀದಿಗಿಳಿದಾಗಲೇ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು: ಆರ್​ಎಸ್​​ಎಸ್ ಮುಖ್ಯಸ್ಥ ಭಾಗವತ್
author img

By

Published : Aug 10, 2022, 9:40 PM IST

ನಾಗಪುರ (ಮಹಾರಾಷ್ಟ್ರ): ಒಂದೇ ರಾಜಕೀಯ ಪಕ್ಷ ಅಥವಾ ಒಂದು ಸಂಘಟನೆ ಮತ್ತು ಒಬ್ಬ ನಾಯಕನಿಂದಲೇ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್​ಎಸ್​​ಎಸ್​)ದ ಮುಖ್ಯಸ್ಥ ಮೋಹನ್ ಭಾಗವತ್ ಅಭಿಪ್ರಾಯಪಟ್ಟಿದ್ದಾರೆ.

ಆರ್‌ಎಸ್‌ಎಸ್‌ನ ಕಾರ್ಯಾಧ್ಯಕ್ಷ ಸುನೀಲ್‌ ಕಿತ್​ಕಾರು ಬರೆದಿರುವ 'ವಾರ್ತಾ ಈಶಾನ್ಯ ಭಾರತಚಿ' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಭಾಗವತ್, ಸಾಮಾನ್ಯ ಜನರು ಬೀದಿಗಿಳಿದಾಗಲೇ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಜನರು ದೊಡ್ಡ ಸಂಖ್ಯೆಯಲ್ಲಿ ಚಳವಳಿಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಬದಲಾವಣೆಗಳು ಸಂಭವಿಸುತ್ತವೆ ಎಂದು ಹೇಳಿದ್ದಾರೆ.

ಸಮಾಜದಲ್ಲಿ ವಾಸಿಸುವ ಜನರು ದುರ್ಬಲರಾಗಬಾರದು. ಹಿಂದೂ ಸಮುದಾಯವನ್ನು ಜಾಗೃತಗೊಳಿಸಿ ತನ್ನದೇ ಆದ ಜವಾಬ್ದಾರಿಯನ್ನು ಗುರುತಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಸ್ವಾಭಿಮಾನ, ಉನ್ನತ ನೈತಿಕ ಮೌಲ್ಯಗಳು, ಸಮಗ್ರತೆ, ದೇಶಭಕ್ತಿ ಮತ್ತು ಶಿಸ್ತುಗಳನ್ನು ಹೊಂದಿದ್ದು ಪ್ರಾಮಾಣಿಕ ಮತ್ತು ನಿಜವಾದ ಸಮಾಜವನ್ನು ನಿರ್ಮಿಸುವಲ್ಲಿ ತಮ್ಮ ಪಾತ್ರವನ್ನು ಪೂರೈಸಬೇಕೆಂದು ತಿಳಿಸಿದರು.

ಹಿಂದೂಗಳು ಬಲಿಷ್ಠರಾಗಿರಬೇಕು. ಅದಕ್ಕಾಗಿ ಸಂಘವು ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ತನ್ನ ಕಾರ್ಯವನ್ನು ಮುಂದುವರೆಸುತ್ತದೆ. ಹಿಂದೂ ಸಮುದಾಯವು ತನ್ನ ಸಮಸ್ಯೆಗಳನ್ನು ಪರಿಹರಿಸಲು ಸಾಕಷ್ಟು ಬಲಗೊಳ್ಳಬೇಕೆಂದೇ ಸಂಘವು ಬಯಸುತ್ತದೆ. ಇದನ್ನು ಯಾವುದೇ ಒಬ್ಬ ನಾಯಕನಿಂದ ಸಾಧಿಸಲು ಸಾಧ್ಯವಿಲ್ಲ. ಬದಲಿಗೆ, ಈ ಗುರಿಯನ್ನು ಸಾಧಿಸಲು ಸಂಘಟನೆ ಬೇಕಾಗುತ್ತದೆ. ಜಾಗೃತ ಸಮಾಜವು ಮಾತ್ರ ರಾಷ್ಟ್ರವನ್ನು ಜಾಗರೂಕವಾಗಿರಿಸುತ್ತದೆ ಮತ್ತು ಎಲ್ಲ ಸವಾಲುಗಳನ್ನು ಎದುರಿಸಲು ಸಿದ್ಧವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಸುಭಾಷ್ ಚಂದ್ರ ಬೋಸ್ ಅವರಂತಹ ಕ್ರಾಂತಿಕಾರಿ ನಾಯಕರು ಸಹ ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ನೀಡಿದ್ದಾರೆ. ಆದರೆ, ಎಲ್ಲರೂ ಜೈಲಿಗೆ ಹೋಗಲಿಲ್ಲ, ಕೆಲವರು ದೂರ ಜೈಲಿನಿಂದ ಉಳಿದಿದ್ದರು ಎಂದೂ ಭಾಗವತ್​ ಹೇಳಿದರು

ಇದನ್ನೂ ಓದಿ: ಆರ್​ಎಸ್​ಎಸ್ ಕಚೇರಿಗೆ ತ್ರಿವರ್ಣ ಧ್ವಜ ನೀಡಿದ ಕಾಂಗ್ರೆಸ್‌ ಕಾರ್ಯಕರ್ತರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.