ನವದೆಹಲಿ: ಭಾರತದ ಆರ್ಥಿಕತೆ ಹಿಂದೂ ಬೆಳವಣಿಗೆ ದರದ ಅಪಾಯದಲ್ಲಿದೆ ಎಂಬ ಆತಂಕವನ್ನು ಆರ್ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ವ್ಯಕ್ತಪಡಿಸಿದ್ದು, ಇದೊಂದು ಎಚ್ಚರಿಕೆಯ ಗಂಟೆ. ಈ ಬಗ್ಗೆ ಕ್ರಮಕ್ಕೆ ಮುಂದಾಗಬೇಕು ಎಂದಿದ್ದಾರೆ. ಖಾಸಗಿ ವಲಯದಲ್ಲಿನ ಹೂಡಿಕೆ, ಹೆಚ್ಚಿನ ಬಡ್ಡಿ ದರ ಮತ್ತು ನಿಧಾನ ಜಾಗತಿಕ ಬೆಳವಣಿಗೆಯಿಂದಾಗ ತ್ರೈಮಾಸಿಕ ಬೆಳವಣಿಗೆ ನಿಧಾನವಾಗಿದೆ. ಈ ಸಂಬಂಧ ಇತ್ತೀಚೆಗೆ ರಾಷ್ಟ್ರೀಯ ಅಂಕಿಅಂಶಗಳ ಕಚೇರಿ ರಾಷ್ಟ್ರೀಯ ಆದಾಯದ ಅಂಕಿಅಂಶವನ್ನು ಬಿಡುಗಡೆ ಮಾಡಿದ್ದು, ಕಳವಳಕಾರಿಯಾಗಿದೆ ಎಂದು ಹೇಳಿದ್ದಾರೆ.
ಏನಿದು ಹಿಂದೂ ಬೆಳವಣಿಗೆ ದರ?: 1950 ಮತ್ತು 1980ರಲ್ಲಿ ಭಾರತದ ಆರ್ಥಿಕತೆ ದರ ನಿಧಾನವಾಗಿದ್ದು, ಸರಾಸರಿ ಶೇ 4ರಷ್ಟಿತು. ಈ ನಿಧಾನಗತಿಯ ಆರ್ಥಿಕತೆಯನ್ನು ಅರ್ಥಶಾಸ್ತ್ರಜ್ಞ ರಾಜ್ ಕೃಷ್ಣ ಹಿಂದೂ ಬೆಳವಣಿಗೆ ದರ ಎಂದು ಕರೆದಿದ್ದರು.
ಅಕ್ಟೋಬರ್- ಡಿಸೆಂಬರ್ನಲ್ಲಿ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ 4.4ರಷ್ಟಿತ್ತು. ಪ್ರಸ್ತುತ ಆರ್ಥಿಕ ವರ್ಷದಲ್ಲಿ 4.4ಕ್ಕೆ ಇಳಿದಿದೆ. ಎರಡನೇ ತ್ರೈಮಾಸಿಕದಲ್ಲಿ ಈ ದರ ಶೇ 6.3ರಷ್ಟಿತ್ತು. ಈ ಆರ್ಥಿಕತೆ ಕುಸಿತದ ಬಗ್ಗೆ ಕಳವಳ ವ್ಯಕ್ತಪಡಿಸಿ ಮಾತನಾಡಿದ ರಾಜನ್, ಆಶಾವಾದಿಗಳು ಜಿಡಿಪಿ ದರವನ್ನು ಹಿಂದಿನ ಸಂಖ್ಯೆಗಳಿಗೆ ಹೋಲಿಸಿದರೆ, ಅದರ ಪರಿಷ್ಕರಣೆಯನ್ನು ಸೂಚಿಸುತ್ತಾರೆ. ನಾನು ಇದರ ಜೊತೆಗೆ ನಿಧಾನವಾಗುತ್ತಿರುವುದನ್ನು ಕಾಣುತ್ತಿದ್ದೇನೆ. ಖಾಸಗಿ ವಲಯದಲ್ಲಿ ಹೂಡಿಕೆ ಕಾಣುತ್ತಿಲ್ಲ. ಆರ್ಬಿಐ ಈಗಲೂ ದರ ಹೆಚ್ಚಿಸುತ್ತಿದೆ. ಜಾಗತಿಕ ಬೆಳವಣಿಗೆ ಮುಂದಿನ ವರ್ಷದಲ್ಲಿ ಮತ್ತಷ್ಟು ನಿಧಾನವಾಗುವ ಸಾಧ್ಯತೆ ಇದೆ. ಇದು ಹೆಚ್ಚಿನ ವೇಗ ಪಡೆಯಲಿದೆ ಎಂಬ ಬಗ್ಗೆ ನನಗೆ ಯಾವುದೇ ಖಚಿತತೆ ಕಾಣುತ್ತಿಲ್ಲ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಜಿಡಿಪಿ ಮಂದಗತಿ: ಇತ್ತೀಚೆಗೆ ಮುಖ್ಯ ಆರ್ಥಿಕ ಸಲಹೆಗಾರರಾಗಿರುವ ವಿ.ಅನಂತನ್ ನಾಗೇಶ್ವರ್ ಅವರು, ಕಳೆದ ವರ್ಷಕ್ಕೆ ರಾಷ್ಟ್ರೀಯ ಆದಾಯವನ್ನು ಅಂದಾಜನ್ನು ಮೇಲ್ಮುಖ ಪರಿಷ್ಕರಣೆಯಿಂದ ಕಡಿಮೆ ತ್ರೈಮಾಸಿಕ ಬೆಳವಣಿಗೆ ಕಾರಣವಾಗಿದೆ ಎಂದಿದ್ದರು. 2023-24ರ ಆರ್ಥಿಕ ದರ ಬೆಳವಣಿಗೆ ದೊಡ್ಡ ಪ್ರಶ್ನೆಯಾಗಿದೆ. ಅಕ್ಟೋಬರ್- ಡಿಸೆಂಬರ್ ಜಿಡಿಪಿ ನಿಧಾನಗತಿ ಕಾಣಬಹುದಾಗಿದೆ.
ಈ ಆರ್ಥಿಕ ವರ್ಷದ ತ್ರೈಮಾಸಿಕ ಆರ್ಬಿಐ ಕಡಿಮೆ ಶೇ 4.2 ಯೋಜಿಸಿದೆ. ಕಳೆದ ಮೂರು ವರ್ಷಗಳಿಂದ ಕೋವಿಡ್ ಹಿಂದಿನ ತ್ರೈಮಾಸಿಕ ಸರಾಸರಿ ವಾರ್ಷಿಕ ಬೆಳವಣಿಗೆ ದರ ಶೇ 3.7ರಷ್ಟಿದೆ. ಇದು ಹಳೆಯ ಹಿಂದೂ ಬೆಳವಣಿಗೆಯ ದರವಾಗಿದ್ದು, ಅಪಾಯದ ಹತ್ತಿರದಲ್ಲಿ ನಾವಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ: 'ಬಿಜೆಪಿಯ ಟೀಕೆಗೆ ಹೆದರುವುದಿಲ್ಲ, ಏಕೆಂದರೆ ಇದು ಧೈರ್ಯ ಮತ್ತು ಹೇಡಿತನದ ನಡುವಿನ ಹೋರಾಟ'