ನವದೆಹಲಿ: ಪೂರ್ವ ಲಡಾಖ್ನಲ್ಲಿ ನಡೆಯುತ್ತಿರುವ ಮಿಲಿಟರಿ ನಿಲುವು ಪರಿಹರಿಸಲು ಭಾರತ ಮತ್ತು ಚೀನಾ ನಾಳೆ 9 ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಿಲಿಟರಿ ಮಾತುಕತೆ ನಡೆಸಲಿವೆ.
ಭಾರತ ಮತ್ತು ಚೀನಾ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ಭಾರತದ ಚುಶುಲ್ ಸೆಕ್ಟರ್ ಎದುರಿನ ಮೊಲ್ಡೊದಲ್ಲಿ ನಡೆಯಲಿದೆ. ಈ ವರ್ಷದ ಏಪ್ರಿಲ್ - ಮೇ ತಿಂಗಳಿನಿಂದ ಪೂರ್ವ ಲಡಾಖ್ ವಲಯದಲ್ಲಿ ನಡೆಯುತ್ತಿರುವ ಮಿಲಿಟರಿ ನಿಲುವು ಪರಿಹರಿಸುವ ವಿಧಾನಗಳನ್ನು ಎರಡೂ ಕಡೆಯವರು ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭಾರತ-ಚೀನಾ ನಡುವೆ ಈಗಾಗಲೇ ಎಂಟು ಬಾರಿ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ನಡೆದಿದೆ. ಇದಕ್ಕೂ ಮೊದಲು ಜೂನ್ 6, ಜೂನ್ 22, ಜೂನ್ 30, ಜುಲೈ 14, ಆಗಸ್ಟ್ 2, ಸೆಪ್ಟೆಂಬರ್ 21 ಹಾಗೂ ಅಕ್ಟೋಬರ್ 12, ನವೆಂಬರ್ 6 ರಂದು ಸಭೆಗಳು ನಡೆದಿದ್ದವು.
ಇದನ್ನೂ ಓದಿ: ರಾಮೇಶ್ವರಂ: ಸಮುದ್ರದಲ್ಲಿ ಹೊತ್ತಿ ಉರಿದ ಬೋಟ್ - ವಿಡಿಯೋ ನೋಡಿ·