ನವದೆಹಲಿ: ದೇಶಿಯ ದರ ಮತ್ತು ದೇಶಿಯ ಆಹಾರ ಭದ್ರತೆ ದೃಷ್ಟಿಯಿಂದಾಗಿ ಕೇಂದ್ರ ಸರ್ಕಾರ ಬಾಸ್ಮತಿಯೇತರ ಬಿಳಿ ಅಕ್ಕಿಯ ರಫ್ತನ್ನು ನಿರ್ಬಂಧಿಸಿತ್ತು. ಜುಲೈ 20ರಂದು ಈ ನಿರ್ಧಾರ ಪ್ರಕಟಿಸಿದ್ದ ಕೇಂದ್ರ ಇದೀಗ 7 ದೇಶಗಳಿಗೆ ಬಾಸ್ಮತೀಯೇತರ ಬಿಳಿ ಅಕ್ಕಿ ರಫ್ತಿಗೆ ಅವಕಾಶ ನೀಡಿದೆ. ಅವುಗಳೆಂದರೆ ನೇಪಾಳ, ಕ್ಯಾಮೆರೊನ್, ಕೋಟಾ ಡಿ ಐವೊರ್, ರಿಪಬ್ಲಿಕ್ ಆಫ್ ಗಿನಿಯಾ, ಮಲೇಷ್ಯಾ, ಫಿಲಿಪೈನ್ಸ್ ಮತ್ತು ಸೀಶೆಲ್ಸ್ ರಾಷ್ಟಗಳಾಗಿವೆ.
ಏಳು ದೇಶಗಳಿಗೆ ಮಿಲಿಯನ್ ಟನ್ನಲ್ಲಿ ರಫ್ತಾಗುತ್ತಿರುವ ವಿವರ
- ನೇಪಾಳ - 95,000
- ಕ್ಯಾಮೆರೊನ್- 1,90,000
- ಕೋಟಾ ಡಿ ಐವೊರ್- 1,42,000
- ರಿಪಬ್ಲಿಕ್ ಆಫ್ ಗಿನಿಯಾ- 1,42,000
- ಮಲೇಷ್ಯಾ- 1,70,000
- ಫಿಲಿಪೈನ್ಸ್ -2,95,000
- ಸೀಶೆಲ್ಸ್- 800
ಮೇಲೆ ತಿಳಿಸಿದ ಏಳು ದೇಶಗಳಿಗೆ ರಫ್ತಿಗೆ ರಾಷ್ಟ್ರೀಯ ಸಹಕಾರ ರಫ್ತು ಲಿಮಿಟೆಡ್, ವಿದೇಶಿ ವ್ಯಾಪಾರ ನಿರ್ದೇಶನಾಲಯವು ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ. ಈ ಮೊದಲು ಯುಎಇ ಮತ್ತು ಸಿಂಗಾಪೂರ್ಗೆ ಮಾತ್ರ ಬಾಸ್ಮತಿಯೇತರ ಬಿಳಿ ಅಕ್ಕಿ ರಫ್ತಿಗೆ ಮಾತ್ರ ಅನುಮತಿ ನೀಡಿತು.
ಇತರ ದೇಶದ ಆಹಾರ ಭದ್ರತೆ ಅಗತ್ಯತೆಯ ಪೂರೈಸಲು ಸರ್ಕಾರದ ಮನವಿ ಮೇರೆಗೆ ಸರ್ಕಾರವು ನೀಡುವ ಅನುಮತಿಯ ಆಧಾರದ ಮೇಲೆ ರಫ್ತು ಮಾಡಲು ಅನುಮತಿಸಲಾಗುವುದು ಎಂದು ಡಿಜಿಎಫ್ಟಿ ಸಮರ್ಥಿಸಿಕೊಂಡಿದೆ.
ಭಾರತದಿಂದ ಬಾಸ್ಮಿತಿಯೇತರ ಅಕ್ಕಿ ಆಮದು ಮಾಡಿಕೊಳ್ಳುವ ಪ್ರಮುಖ ದೇಶ ಎಂದರೆ ಪಶ್ವಿಮ ಆಫ್ರಿಕಾ ದೇಶದ ಬೆನಿನ್ ಆಗಿದೆ. ಇತರ ರಾಷ್ಟ್ರಗಳು ಎಂದರೆ ಯುಎಇ, ನೇಪಾಳ್, ಬಾಂಗ್ಲಾದೇಶ್, ಚೀನಾ, ಕೋಟಾ ಡಿ ಐವೊರ್, ಟೊಗೊ, ಸೆಂಗಲ್, ಗುನೀ, ವಿಯೆಟ್ನಾ, ಜಿಬೌಟಿ, ಮಡಗಾಸ್ಕರ್, ಕ್ಯಾಮರೂನ್ ಸೊಮಾಲಿಯಾ, ಮಲೇಷಿಯಾ ಮತ್ತು ಲೈಬೀರಿಯಾ.
ಆಗಸ್ಟ್ ನಂತರದಲ್ಲಿ ಭಾರತ ಬಾಸ್ಮತಿಯೇತರ ಅಕ್ಕಿನ್ನು ರಫ್ತನ್ನು ತಡೆಯಲು ಬಾಸ್ಮತಿ ಅಕ್ಕಿ ರಫ್ತಿನ ಮೇಲೆ ಕನಿಷ್ಠ ಬೆಲೆಯನ್ನು ನಿಗದಿಪಡಿಸುವ ಮೂಲಕ ಹೆಚ್ಚುವರಿ ಸುರಕ್ಷತೆಯನ್ನು ಕೈಗೊಂಡಿತ್ತು. ಇದರಿಂದಾಗಿ ಜುಲೈನಿಂದ ಈಗಾಗಲೇ ನಿಷೇಧಿತ ವರ್ಗದ ಅಡಿಯಲ್ಲಿದ್ದ ಬಾಸ್ಮತಿ ಅಲ್ಲದ ಬಿಳಿ ಅಕ್ಕಿಯ ರಫ್ತುಗಳಿಗೆ ನಿರ್ಬಂಧ ಹೇರಿತ್ತು.
ಕಳೆದವಾರ, ಕೇಂದ್ರ ಸರ್ಕಾರ ಮಾರ್ಚ್ 31, 2024ರವರೆಗೆ ಬೇಯಿಸಿದ ಅಕ್ಕಿ ಮೇಲೇ ಶೆ 20ರಷ್ಟು ರಫ್ತು ಡ್ಯೂಟಿಯನ್ನು ವಿಸ್ತರಿಸಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆರಂಭದಲ್ಲಿ ಈ ಡ್ಯೂಟಿಯನ್ನು ಆಗಸ್ಟ್ 25, 2023ರಲ್ಲಿ ಪರಿಚಯಿಸಲಾಗಿತ್ತು. 2023 ಅಕ್ಟೋಬರ್ 16ರವರೆಗೆ ಈ ನಿಯಮ ಜಾರಿಯಲ್ಲಿದ್ದು, ದೇಶಿಯವಾಗಿ ಅಕ್ಕಿಯ ಲಭ್ಯತೆ ಮತ್ತು ದರವನ್ನು ಪರಿಶೀಲನೆ ನಡೆಸಲಾಗುತ್ತಿದೆ.
ಭಾರತದಲ್ಲಿ ಸೆಪ್ಟೆಂಬರ್ 2022ರಿಂದ ಮುರಿದ ಅಕ್ಕಿಯ ರಫ್ತುವರೆಗೆ ರಫ್ತು ನಿಷೇಧವಿದ್ದು, ಬಾಸ್ಮತಿಯೇತರ ಅಕ್ಕಿಯ ಮೇಲೆ ಶೇ 20ರಷ್ಟು ರಫ್ತು ಡ್ಯೂಟಿಯನ್ನು ವಿಧಿಸಲಾಗಿತ್ತು. ಭತ್ತದ ಬೆಳೆಯು ಪ್ರದೇಶದಲ್ಲಿ ಉತ್ಪಾದನೆ ಕುಸಿತದ ಆತಂಕದ ನಡುವೆ ಬೇಯಿಸಿದ ಅಕ್ಕಿಯನ್ನು ಹೊರತುಪಡಿಸಿ ನಿಷೇಧ ಹೇರಲಾಗಿತ್ತು.
ಇದನ್ನೂ ಓದಿ: ರೈಲ್ವೆ ನೌಕರರಿಗೆ ಖುಷಿ ಸುದ್ದಿ ನೀಡಿದ ಕೇಂದ್ರ: 78 ದಿನಗಳ ಬೋನಸ್ ಘೋಷಣೆ