ನವದೆಹಲಿ : ಸ್ಯಾಮ್‌ಸಂಗ್ ಮಂಗಳವಾರ ತನ್ನ ಇತ್ತೀಚಿನ 200 - ಮೆಗಾಪಿಕ್ಸೆಲ್ ಇಮೇಜ್ ಸೆನ್ಸಾರ್ - ISOCELL HP2 ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದು ಸುಧಾರಿತ ಪಿಕ್ಸೆಲ್ ತಂತ್ರಜ್ಞಾನ ಮತ್ತು ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಲ್ಲಿ ಹೆಚ್ಚಿನ ರೆಸಲ್ಯೂಶನ್ ಇಮೇಜ್ ಸಾಮರ್ಥ್ಯ ಹೊಂದಿದೆ. ಹೊಸ ಇಮೇಜ್ ಸಂವೇದಕವು ಸಾಮೂಹಿಕ ಉತ್ಪಾದನೆಗೆ ಪ್ರವೇಶಿಸಿದೆ ಎಂದು ಕಂಪನಿ ಹೇಳಿದೆ.
"Samsung ISOCELL HP2 ಸ್ಯಾಮ್‌ಸಂಗ್‌ನ ಹೈ-ರೆಸಲ್ಯೂಶನ್ ಇಮೇಜ್ ಸೆನ್ಸಾರ್ ತಂತ್ರಜ್ಞಾನಗಳನ್ನು ಬಳಸಿಕೊಳ್ಳುತ್ತದೆ ಎಂದು ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್‌ನ ಸೆನ್ಸಾರ್ ಬ್ಯುಸಿನೆಸ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಜೂನ್‌ಸಿಯೋ ಯಿಮ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. 'ನಮ್ಮ ನಾಯಕತ್ವವು ನವೀನ ಪಿಕ್ಸೆಲ್ ತಂತ್ರಜ್ಞಾನಗಳಿಂದ ಕೂಡಿದೆ. ಅದು ನಮ್ಮ ಸಂವೇದಕಗಳು ಪಿಕ್ಸೆಲ್‌ಗಳ ಸಂಖ್ಯೆ ಮತ್ತು ಗಾತ್ರವನ್ನು ಮೀರಿ ಹೋಗಲು ಅನುವು ಮಾಡಿಕೊಡುತ್ತದೆ' ಎಂದು ಅವರು ಹೇಳಿದರು.
ಹೊಸ ಸ್ಯಾಮ್‌ಸಂಗ್ 200-ಮೆಗಾಪಿಕ್ಸೆಲ್ ಇಮೇಜ್ ಸೆನ್ಸಾರ್ ಗರಿಷ್ಠ ಪಿಕ್ಸೆಲ್ ಕಾರ್ಯಕ್ಷಮತೆ ಸಾಮರ್ಥ್ಯವನ್ನು ಹೊಂದಿದೆ. ಯಾವುದೇ ಬೆಳಕಿನ ಸ್ಥಿತಿಯಲ್ಲಿ ವಿವರವಾದ ಮತ್ತು ತಡೆರಹಿತ ಫೋಟೋಗಳನ್ನು ಅನುಮತಿಸುತ್ತದೆ ಎಂದು ಕಂಪನಿ ಹೇಳಿದೆ. 200-ಮೆಗಾಪಿಕ್ಸೆಲ್ ಇಮೇಜ್ ಸಂವೇದಕವು 200 ಮಿಲಿಯನ್ 0.6-ಮೈಕ್ರೊಮೀಟರ್ ಪಿಕ್ಸೆಲ್‌ಗಳನ್ನು ಕವರ್ ಮಾಡುತ್ತದೆ. ಇದು 108MP ಮುಖ್ಯ ಸ್ಮಾರ್ಟ್‌ಫೋನ್ ಕ್ಯಾಮೆರಾಗಳಲ್ಲಿ ವ್ಯಾಪಕವಾಗಿ ಬಳಸಲಾಗುವ ಸಂವೇದಕ ಗಾತ್ರವಾಗಿದೆ. ಇದು ಗ್ರಾಹಕರಿಗೆ ಹೆಚ್ಚಿನ ರೆಸಲ್ಯೂಶನ್‌ಗಳನ್ನು ಆನಂದಿಸಲು ಅನುವು ಮಾಡಿಕೊಡುತ್ತದೆ.
ಸ್ಯಾಮ್‌ಸಂಗ್‌ನ ಹೊಸ ಡ್ಯುಯಲ್ ವರ್ಟಿಕಲ್ ಟ್ರಾನ್ಸ್‌ಫರ್ ಗೇಟ್ ತಂತ್ರಜ್ಞಾನದೊಂದಿಗೆ ಹೆಚ್ಚಿನ ಬ್ರೈಟ್ನೆಸ್ ಇರುವ ಚಿತ್ರಗಳನ್ನು ಹೊಸ ಇಮೇಜ್ ಸೆನ್ಸಾರ್‌ನೊಂದಿಗೆ ಗಮನಾರ್ಹವಾಗಿ ಕಡಿಮೆ ಮಾಡಬಹುದು ಎಂದು ಕಂಪನಿ ತಿಳಿಸಿದೆ. ಇದಲ್ಲದೇ, ಅತ್ಯುತ್ತಮ HDR ಕಾರ್ಯಕ್ಷಮತೆಗಾಗಿ, ಕಂಪನಿಯು 50MP ಮೋಡ್‌ನಲ್ಲಿ ಮೊದಲ ಬಾರಿಗೆ DSG ವೈಶಿಷ್ಟ್ಯವನ್ನು ಪರಿಚಯಿಸುತ್ತಿದೆ. ಇದು ಪಿಕ್ಸೆಲ್ ಮಟ್ಟದಲ್ಲಿ ಸ್ವೀಕರಿಸಿದ ಅನಲಾಗ್ ಸಿಗ್ನಲ್‌ಗೆ ಎರಡು ಪ್ರತ್ಯೇಕ ಪರಿವರ್ತನೆ ಮೌಲ್ಯಗಳನ್ನು ಅನ್ವಯಿಸುತ್ತದೆ.
5G ಸ್ಮಾರ್ಟ್‌ಫೋನ್ ಮಾರುಕಟ್ಟೆಯು ಶೇಕಡಾ 70 ಪ್ರತಿಶತದಷ್ಟು ವಿಸ್ತರಿಸುವ ಸಾಧ್ಯತೆ: 2023 ರ ಅಂತ್ಯದ ವೇಳೆಗೆ ಭಾರತದ 5G ಸ್ಮಾರ್ಟ್‌ಫೋನ್ ಮಾರುಕಟ್ಟೆಯು ಶೇಕಡಾ 70 ಕ್ಕಿಂತ ಹೆಚ್ಚಿನ (ವರ್ಷದ ಮೇಲೆ) ಪ್ರಮಾಣದಲ್ಲಿ ವಿಸ್ತರಿಸುವ ನಿರೀಕ್ಷೆಯಿದೆ ಎಂದು ವರದಿಯೊಂದು ಮಂಗಳವಾರ ತಿಳಿಸಿದೆ. ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯು 2020 ರಲ್ಲಿ ತನ್ನ ಆರಂಭಿಕ ಪರಿಚಯದ ವರ್ಷದಿಂದ ಅದರ 5G ಸಾಗಣೆಯಲ್ಲಿ 13 ಪಟ್ಟು ಹೆಚ್ಚು ಬೆಳವಣಿಗೆಯನ್ನು ದಾಖಲಿಸಿದೆ.
'2020ರಲ್ಲಿ ಕೇವಲ 4 ಪ್ರತಿಶತದಿಂದ 2023 ರಲ್ಲಿ 45 ಶೇಕಡಾಕ್ಕಿಂತ ಹೆಚ್ಚಿನ ಮಾರುಕಟ್ಟೆ ಪಾಲನ್ನು ಗಳಿಸುವವರೆಗೆ 5G ಸ್ಮಾರ್ಟ್‌ಫೋನ್‌ಗಳು ಬೆಳೆದಿವೆ ಎಂದು ಸೈಬರ್ ಮೀಡಿಯಾ ರಿಸರ್ಚ್ (CMR) ವಿಶ್ಲೇಷಕ ಮೆಂಕಾ ಕುಮಾರಿ ಹೇಳಿದ್ದಾರೆ. 2022 ರಲ್ಲಿ ಭಾರತದ ಮಾರುಕಟ್ಟೆಯಲ್ಲಿ ಸುಮಾರು 100 5G ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲಾಯಿತು.
2023 ರಲ್ಲಿ ಭಾರತದ ಮಾರುಕಟ್ಟೆಯಲ್ಲಿ ಪರಿಚಯಿಸಲಾದ ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ 75 ಪ್ರತಿಶತದಷ್ಟು 5G ಸಾಮರ್ಥ್ಯ ಹೊಂದಲು ನಾವು ನಿರೀಕ್ಷಿಸುತ್ತೇವೆ ಎಂದು ಮೆಂಕಾ ಕುಮಾರಿ ಹೇಳಿದರು.
ಓದಿ: ಹೋಮ್ ಅಪ್ಲಿಕೇಶನ್‌ನಲ್ಲಿ ಗೂಗಲ್ ಟಿವಿಯೊಂದಿಗೆ ಕ್ರೋಮ್ಕಾಸ್ಟ್ ಬಿಡುಗಡೆ.. ಏನೆಲ್ಲಾ ವಿಶೇಷತೆ?