ETV Bharat / bharat

ಮರಣದಂಡನೆಗೆ ಒಳಗಾಗಲಿರುವ ಸ್ವತಂತ್ರ ಭಾರತದ ಮೊದಲ ಮಹಿಳೆ.. ರಾಷ್ಟ್ರಪತಿ ಬಳಿ ಮಗನ ಮನವಿ - President

ಶಬ್ನಮ್ ಸ್ವತಂತ್ರ ಭಾರತದ ಇತಿಹಾಸದಲ್ಲೇ ಗಲ್ಲಿಗೇರಿಸಲ್ಪಡುವ ಮೊದಲ ಮಹಿಳಾ ಕೈದಿಯಾಗಿದ್ದು, ಇದೀಗ ಆಕೆಯ 12 ವರ್ಷದ ಪುತ್ರ, ರಾಷ್ಟ್ರಪತಿ ರಾಮ್​ ನಾಥ್​ ಕೋವಿಂದ್​ ಬಳಿ ನನ್ನ ಅಮ್ಮನನ್ನು ಕ್ಷಮಿಸಿ ಎಂದು ಮನವಿ ಮಾಡಿದ್ದಾನೆ..

Independent India's first woman to face execution
ಮರಣದಂಡನೆಗೆ ಒಳಗಾಗಲಿರುವ ಸ್ವತಂತ್ರ ಭಾರತದ ಮೊದಲ ಮಹಿಳೆ
author img

By

Published : Feb 19, 2021, 11:00 AM IST

Updated : Feb 19, 2021, 12:52 PM IST

ರಾಂಪುರ (ಉತ್ತರಪ್ರದೇಶ): ತನ್ನ ಕುಟುಂಬದ ಏಳು ಸದಸ್ಯರನ್ನು ಕೊಂದಿದ್ದ ಉತ್ತರಪ್ರದೇಶದ ಶಬ್ನಮ್‌ಳನ್ನ ಶೀಘ್ರ ಗಲ್ಲಿಗೇರಿಸಲಾಗುತ್ತಿದೆ. ಸ್ವತಂತ್ರ ಭಾರತದಲ್ಲಿ ಮರಣ ದಂಡನೆಗೆ ಒಳಗಾಗಲಿರುವ ಮೊದಲ ಮಹಿಳೆ ಇವರಾಗಿದ್ದಾರೆ. ಪ್ರಸ್ತುತ ರಾಂಪುರ ಜಿಲ್ಲಾ ಕಾರಾಗೃಹದಲ್ಲಿ ಸೆರೆವಾಸ ಅನುಭವಿಸುತ್ತಿರುವ ಶಬ್ನಮ್​ಗೆ ಮಥುರಾ ಜೈಲಿನಲ್ಲಿ ಗಲ್ಲಿಗೇರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಪ್ರಕರಣದ ಹಿನ್ನೆಲೆ: ಶಬ್ನಮ್ ಹಾಗೂ ಸಲೀಂ ಎಂಬ ವ್ಯಕ್ತಿ ಪರಸ್ಪರ ಪ್ರೀತಿಸುತ್ತಿದ್ದರು. ಇದಕ್ಕೆ ಶಬ್ನಮ್ ಕುಟುಂಬಸ್ಥರ ವಿರೋಧವಿತ್ತು. ಪ್ರೇಮಕ್ಕೆ ಅಡ್ಡಿಯಾದ ಜೀವ ತೆಗೆಯಲು ನಿರ್ಧರಿಸಿದ ಆಕೆ, ಸಲೀಂ ಜೊತೆ ಸೇರಿಕೊಂಡು 2008ರ ಏಪ್ರಿಲ್ 14ರಂದು ತನ್ನ ತಂದೆ, ತಾಯಿ, ಇಬ್ಬರು ಸಹೋದರರು, ಸಹೋದರಿ, ಸೋದರ ಮಾವ ಹಾಗೂ 10 ವರ್ಷದ ಸೋದರಳಿಯನನ್ನು ಕೊಲೆ ಮಾಡಿದ್ದರು. ಊಟದಲ್ಲಿ ಮಾತ್ರೆ ಹಾಕಿ, ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದಿದ್ದರು. ಘಟನೆ ನಡೆದ ವೇಳೆ ಶಬ್ನಮ್ ಗರ್ಭಿಣಿ ಕೂಡ ಆಗಿದ್ದರು.

Independent India's first woman to face execution
ಅಪರಾಧಿ ಶಬ್ನಮ್​

ವಿಷಯ ಬೆಳಕಿಗೆ ಬರುತ್ತಿದ್ದಂತೆಯೇ ಶಬ್ನಮ್ ಮತ್ತು ಸಲೀಂ ಇಬ್ಬರನ್ನೂ ಜಿಲ್ಲಾ ಪೊಲೀಸರು ಬಂಧಿಸಿದ್ದರು. ಪ್ರಕರಣ ಸಂಬಂಧ ಎರಡು ವರ್ಷಗಳ ಕಾಲಾವಧಿಯಲ್ಲಿ 100 ಬಾರಿ ಕೋರ್ಟ್‌​ನಲ್ಲಿ ವಿಚಾರಣೆ ನಡೆದಿದ್ದು, 649 ಪ್ರಶ್ನೆಗಳನ್ನು ಕೇಳಿ, ಕೊನೆಯದಾಗಿ 160 ಪುಟಗಳ ತೀರ್ಪನ್ನು ನ್ಯಾಯಾಲಯ ಪ್ರಕಟಿಸಿತ್ತು.

ಸಲೀಂ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, 2010ರ ಜುಲೈ 14ರಂದು ಇಬ್ಬರಿಗೂ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು. ಆದರೆ ಇದನ್ನು ಪ್ರಶ್ನಿಸಿ ಅಪರಾಧಿಗಳಿಬ್ಬರೂ ಅಲಹಾಬಾದ್ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪನ್ನು ಅಲಹಾಬಾದ್ ಹೈಕೋರ್ಟ್ ಎತ್ತಿಹಿಡಿದಿತ್ತು. ಬಳಿಕ ಶಬ್ನಮ್ ಮತ್ತು ಸಲೀಂ ಸುಪ್ರೀಂಕೋರ್ಟ್ ಮೆಟ್ಟಿಲೇರಿದರೂ ಸಫಲರಾಗಲಿಲ್ಲ. ಎಲ್ಲಾ ಕಾನೂನು ಆಯ್ಕೆಗಳು ಖಾಲಿಯಾದಾಗ ಅಂದಿನ ರಾಷ್ಟ್ರಪತಿಯಾಗಿದ್ದ ಪ್ರಣಬ್ ಮುಖರ್ಜಿ ಅವರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದರು. ಆದರೆ ಇದನ್ನು ಪ್ರಣಬ್ ಮುಖರ್ಜಿ ತಿರಸ್ಕರಿಸಿದ್ದರು.

ಮಥುರಾ ಜೈಲು ಹಾಗೂ ಮಹಿಳೆಗೆ ಮರಣದಂಡನೆ

ಮಹಿಳಾ ಕೈದಿಗೆ ಮರಣದಂಡನೆ ನೀಡುವ ಕೊಠಡಿ ಹೊಂದಿರುವ ದೇಶದ ಏಕೈಕ ಜೈಲೆಂದರೆ ಅದು ಮಥುರಾ ಜೈಲಾಗಿದ್ದು, ಶಬ್ನಮ್​ಗೆ ಗಲ್ಲಿಗೇರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. 1870ರಲ್ಲಿ ಬ್ರಿಟಿಷ್ ಆಳ್ವಿಕೆಯ ವೇಳೆ ಅಂದರೆ ಸುಮಾರು 150 ವರ್ಷಗಳ ಹಿಂದೆ ಮಥುರಾ ಜೈಲಿನಲ್ಲಿ ಈ ಕೊಠಡಿಯನ್ನು ನಿರ್ಮಿಸಲಾಯಿತು.

ಸ್ವಾತಂತ್ರ್ಯದ ನಂತರ ಭಾರತದಲ್ಲಿ ಯಾವುದೇ ಮಹಿಳಾ ಅಪರಾಧಿಗಳನ್ನು ಗಲ್ಲಿಗೇರಿಸಲಾಗಿಲ್ಲ. ಹೀಗಾಗಿ, ಶಬ್ನಮ್ ಸ್ವತಂತ್ರ ಭಾರತದ ಇತಿಹಾಸದಲ್ಲೇ ಗಲ್ಲಿಗೇರಿಸಲ್ಪಡುವ ಮೊದಲ ಮಹಿಳಾ ಕೈದಿಯಾಗಿದ್ದಾರೆ.

ರಾಷ್ಟ್ರಪತಿ ಬಳಿ ಮಗನ ಮನವಿ

ರಾಷ್ಟ್ರಪತಿ ಅಂಕಲ್​.. ನನ್ನ ಅಮ್ಮನನ್ನ ಕ್ಷಮಿಸಿ : ಶಬ್ನಮ್ ಕೃತ್ಯ ಎಸಗುವ ವೇಳೆಗೆ ಸಲೀಂನ ಮಗು ಈಕೆ ಹೊಟ್ಟೆಯಲ್ಲಿ ಬೆಳೆಯುತ್ತಿತ್ತು. ಜೈಲಿನಲ್ಲಿ ಜನಿಸಿದ್ದ ಆ ಗಂಡು ಮಗುವಿಗೆ ಈಗ 12 ವರ್ಷ ವಯಸ್ಸಾಗಿದೆ. ಕಾನೂನು ನಿಯಮದಂತೆ ಆರು ವರ್ಷದ ಬಳಿಕ ಬಾಲಕನನ್ನು ಜೈಲಿನಿಂದ ಹೊರ ಕಳುಹಿಸಲಾಗಿತ್ತು. ಶಬ್ನಮ್​ನ ಸ್ನೇಹಿತ ಉಸ್ಮಾನ್ ಸೈಫಿ ಎಂಬುವರು ಈ ಬಾಲಕನನ್ನು ಸಾಕುವ ಜವಾಬ್ದಾರಿ ವಹಿಸಿಕೊಂಡು, ಶಿಕ್ಷಣ ಕೊಡಿಸುತ್ತಿದ್ದಾರೆ.

ಡೆತ್​ ವಾರೆಂಟ್​ಗೆ ರಾಷ್ಟ್ರಪತಿ ಯಾವ ಕ್ಷಣದಲ್ಲಾದರೂ ಸಹಿ ಹಾಕಲಿದ್ದು, ಮರಣದಂಡನೆಯ ದಿನಾಂಕ ಶೀಘ್ರದಲ್ಲೇ ಪ್ರಕಟವಾಗಲಿದೆ. ಈ ಮಧ್ಯೆ ಈ ಬಾಲಕ ರಾಷ್ಟ್ರಪತಿ ರಾಮ್​ ನಾಥ್​ ಕೋವಿಂದ್​ ಬಳಿ ನನ್ನ ಅಮ್ಮನನ್ನು ಕ್ಷಮಿಸಿ ಎಂದು ಮನವಿ ಮಾಡಿದ್ದಾನೆ.

ಶಬ್ನಮ್ ಕುಟುಂಬಸ್ಥರಿಗೆ ತೃಪ್ತಿ : ಹತ್ಯಾಕಾಂಡ ನಡೆದಾಗ ನಾವು ಮನೆಯಲ್ಲಿ ಇರಲಿಲ್ಲ. ನಾವು ಮನೆಗೆ ಹೋಗುವಷ್ಟರಲ್ಲಿ ಕತ್ತರಿಸಿದ ರಕ್ತಸಿಕ್ತ ದೇಹಗಳನ್ನು ಕಂಡೆವು. ಆಕೆಯ ಅಪರಾಧವನ್ನ ಎಂದಿಗೂ ಕ್ಷಮಿಸಲಾಗುವುದಿಲ್ಲ. ಅವಳನ್ನು ಗಲ್ಲಿಗೇರಿಸುತ್ತಿರುವುದು ತೃಪ್ತಿ ತಂದಿದೆ ಎಂದು ಶಬ್ನಮ್ ಚಿಕ್ಕಪ್ಪ ಸತ್ತಾರ್ ಅಲಿ ಹೇಳುತ್ತಾರೆ.

ನೇಣುಗಾರ​ ಪವನ್​ ಜಲ್ಲಾಡ್ : ನಿರ್ಭಯಾ ಪ್ರಕರಣದಲ್ಲಿ ಅಪರಾಧಿಗಳ ಮರಣದಂಡನೆ ಕಾರ್ಯ ನಿರ್ವಹಿಸಿದ ನೇಣುಗಾರ​ ಪವನ್ ಜಲ್ಲಾಡ್​, ಈ ಕೇಸ್​ನಲ್ಲೂ ಶಬ್ನಮ್​ಳನ್ನು ಗಲ್ಲಿಗೇರಿಸಲಿದ್ದಾರೆ. ಹಗ್ಗ, ಸ್ಥಳದ ಪರಿಶೀಲನೆ ಸೇರಿದಂತೆ ಇದಕ್ಕೆ ಬೇಕಾದ ಪೂರ್ವ ತಯಾರಿಯನ್ನು ಮಥುರಾ ಜೈಲಿನಲ್ಲಿ ಮಾಡಲಾಗಿದೆ.

Last Updated : Feb 19, 2021, 12:52 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.