ETV Bharat / bharat

ಸರ್ಕಾರಿ ಅಧಿಕಾರಿ ಚುನಾವಣಾ ಆಯುಕ್ತರಾಗಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್​!

author img

By

Published : Mar 12, 2021, 3:09 PM IST

ಗೋವಾ ಸರ್ಕಾರದ ಕ್ರಮ ಖಂಡಿಸಿರುವ ಸುಪ್ರೀಂಕೋರ್ಟ್​, ಸರ್ಕಾರಿ ಅಧಿಕಾರಿ ಚುನಾವಣಾ ಆಯುಕ್ತರಾಗಲು ಸಾಧ್ಯವಿಲ್ಲ ಎಂದು ತಿಳಿಸಿದೆ.

Supreme Court
Supreme Court

ನವದೆಹಲಿ: ಚುನಾವಣಾ ಆಯೋಗದ ಸ್ವಾತಂತ್ರ್ಯವನ್ನು ಪ್ರಜಾಪ್ರಭುತ್ವದಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದಿರುವ ಸುಪ್ರೀಂಕೋರ್ಟ್​​, ಯಾವುದೇ ರಾಜ್ಯದ ಚುನಾವಣಾ ಆಯುಕ್ತರು ಸ್ವತಂತ್ರ ವ್ಯಕ್ತಿಗಳಾಗಿರಬೇಕು ಹಾಗೂ ರಾಜ್ಯ ಸರ್ಕಾರದಿಂದ ನೇಮಕಗೊಂಡಿರಬಾರದು ಎಂದು ಸುಪ್ರೀಂಕೋರ್ಟ್​​​​ ಮಹತ್ವದ ಆದೇಶ ನೀಡಿದೆ.

ಚುನಾವಣಾ ಆಯುಕ್ತರು ರಾಜ್ಯ ಸರ್ಕಾರದಿಂದ ನೇಮಕಗೊಂಡಿರಬಾರದು ಎಂದು ಗೋವಾದ ಸ್ಥಳೀಯ ಸಂಸ್ಥೆ ಚುನಾವಣೆಗೆ ಸಂಬಂಧಿಸಿದಂತೆ ಈ ಆದೇಶ ನೀಡಲಾಗಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ನಡೆಯಬೇಕಿದ್ದ ಪುರಸಭೆ ಚುನಾವಣೆಯ ಮೇಲ್ವಿಚಾರಣೆಗೆ ಗೋವಾ ಸರ್ಕಾರ ಅಲ್ಲಿನ ಕಾನೂನು ಕಾರ್ಯದರ್ಶಿಯನ್ನ ರಾಜ್ಯ ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಿತ್ತು. ಇದಕ್ಕೆ ಸುಪ್ರೀಂಕೋರ್ಟ್​ ಆಕ್ಷೇಪ ವ್ಯಕ್ತಪಡಿಸಿದೆ.

ಚುನಾವಣಾ ಆಯೋಗದ ಸ್ವಾತಂತ್ರ್ಯವನ್ನು ಪ್ರಜಾಪ್ರಭುತ್ವದಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ರಾಜ್ಯ ಚುನಾವಣಾ ಆಯುಕ್ತರ ಅಧಿಕಾರವನ್ನ ಕರ್ತವ್ಯದಲ್ಲಿರುವ ಸರ್ಕಾರಿ ಅಧಿಕಾರಿಗಳಿಗೆ ವಹಿಸುವುದು ಸಂವಿಧಾನದ ಅಪಹಾಸ್ಯ ಎಂದು ನ್ಯಾಯಮೂರ್ತಿ ರೋಹಿಂಗ್ಟನ್​ ಫಾಲಿ ನಾರಿಮನ್​ ತಿಳಿಸಿದ್ದಾರೆ.

ಇದನ್ನೂ ಓದಿ: ಕೆಲಸ ಕೊಡಿಸುವುದಾಗಿ ವಂಚನೆ: ಕಾಸಿಲ್ಲದೆ 1200 ಕಿ.ಮೀ. ನಡೆದುಕೊಂಡೇ ಮನೆ ತಲುಪಿದ ಕಾರ್ಮಿಕ!

ಚುನಾವಣಾ ಆಯೋಗದ ಸ್ವಾತಂತ್ರ್ಯದ ಬಗ್ಗೆ ರಾಜಿ ಮಾಡಿಕೊಳ್ಳುವುದು ಸ್ವೀಕಾರ್ಹವಲ್ಲ ಮತ್ತು ಸ್ವತಂತ್ರ ವ್ಯಕ್ತಿಗಳು ಮಾತ್ರ ಚುನಾವಣಾ ಆಯುಕ್ತರಾಗಿರಬೇಕು ಎಂದು ನ್ಯಾಯಪೀಠ ಒತ್ತಿ ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.