ETV Bharat / bharat

ತಮಿಳುನಾಡು ಲೋಕೋಪಯೋಗಿ ಸಚಿವರ ಮೇಲೆ ಐಟಿ ದಾಳಿ; 80ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ

Income Tax Raid on Tamil Nadu PWD Minister: ತಮಿಳುನಾಡು ಲೋಕೋಪಯೋಗಿ ಸಚಿವ ಇ.ವಿ.ವೇಲು ಅವರಿಗೆ ಸಂಬಂಧಪಟ್ಟ 80ಕ್ಕೂ ಹೆಚ್ಚು ಸ್ಥಳಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ, ಕಡತಗಳನ್ನು ಪರಿಶೀಲಿಸುತ್ತಿದ್ದಾರೆ.

Income Tax Raid
ತಮಿಳುನಾಡು ಪಿಡಬ್ಲ್ಯೂಡಿ ಸಚಿವರ ಸ್ಥಳಗಳ ಐಟಿ ಅಧಿಕಾರಿಗಳು ದಾಳಿ: ತೀವ್ರಗೊಂಡ ಶೋಧ ಕಾರ್ಯ..
author img

By ETV Bharat Karnataka Team

Published : Nov 3, 2023, 10:25 AM IST

ಚೆನ್ನೈ (ತಮಿಳುನಾಡು): ತಮಿಳುನಾಡು ಲೋಕೋಪಯೋಗಿ ಇಲಾಖೆ ಸಚಿವ ಇ.ವಿ.ವೇಲು ಅವರ ಚೆನ್ನೈ ಮತ್ತು ತಿರುವಣ್ಣಾಮಲೈನಲ್ಲಿರುವ ಮನೆಗಳು ಸೇರಿದಂತೆ 80 ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಇಂದು ಬೆಳಿಗ್ಗೆ (ನವೆಂಬರ್ 2) ದಾಳಿ ಮಾಡಿದರು. ವೇಲು ಒಡೆತನದ ವಿವಿಧ ಪ್ರದೇಶಗಳ ಮೇಲೆ ಏಕಕಾಲಕ್ಕೆ ಕಾರ್ಯಾಚರಣೆ ನಡೆದಿದ್ದು, ಶೋಧ ಕಾರ್ಯ ನಡೆಯುತ್ತಿದೆ.

ಸಚಿವ ವೇಲು ಅವರಿಗೆ ಸಂಬಂಧಿಸಿದ ಕಂಪನಿಗಳು ತೆರಿಗೆ ವಂಚಿಸಿರುವ ಆರೋಪದ ಹಿನ್ನೆಲೆಯಲ್ಲಿ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ತಿರುವಣ್ಣಾಮಲೈನಲ್ಲಿರುವ ಮನೆ, ಶಿಕ್ಷಣ ಸಂಸ್ಥೆಗಳು, ನಿರ್ಮಾಣ ಸಂಸ್ಥೆಗಳು, ಆಸ್ಪತ್ರೆ ಸೇರಿದಂತೆ ಎಲ್ಲೆಡೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಚೆನ್ನೈನ ತ್ಯಾಗರಾಯ ನಗರ, ಕಿಲ್ಪಾಕ್ಕಂ, ಮೌಂಟ್ ರೋಡ್, ವೆಪ್ಪೇರಿ, ಅಣ್ಣಾನಗರ ಮತ್ತಿತರ ಸ್ಥಳಗಳು ಹಾಗೂ ತಿರುವಣ್ಣಾಮಲೈನಲ್ಲಿರುವ ಮನೆ, ಅರುಣೈ ಕಾಲೇಜ್ ಆಫ್ ಇಂಜಿನಿಯರಿಂಗ್, ಅರುಣೈ ವೈದ್ಯಕೀಯ ಕಾಲೇಜು, ಟ್ರಸ್ಟ್‌, ಕಚೇರಿಯಲ್ಲಿ 30ಕ್ಕೂ ಹೆಚ್ಚು ತೆರಿಗೆ ಅಧಿಕಾರಿಗಳು ಶೋಧ ಕಾರ್ಯ ಕೈಗೊಂಡಿದ್ದಾರೆ.

ಮಹತ್ವದ ದಾಖಲೆಗಳು ವಶಕ್ಕೆ: 2021ರಲ್ಲಿ ಸಚಿವ ವೇಲು ಅವರ ನಿವಾಸದಿಂದ ಹಲವು ಮಹತ್ವದ ದಾಖಲೆಗಳನ್ನು ಐಟಿ ವಶಪಡಿಸಿಕೊಂಡಿತ್ತು. ಆ ದಾಖಲೆಗಳ ಆಧಾರದ ಮೇಲೆ ಮತ್ತೊಮ್ಮೆ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವೇಲು ಒಡೆತನದ ಕಂಪನಿಗಳು, ಸಹೋದರ, ಮಗ, ಮಗಳು ಮತ್ತು ಸಂಬಂಧಿಕರ ನೇತೃತ್ವದ ಕಂಪನಿಗಳಲ್ಲಿ ತನಿಖೆ ನಡೆಸುತ್ತಿದೆ.

ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರು, ಕಟ್ಟಡಗಳು ಹಾಗೂ ಹೆದ್ದಾರಿ ಇಲಾಖೆ ಗುತ್ತಿಗೆದಾರರಿಗೆ ಸೇರಿದ 40 ಕಚೇರಿಗಳಲ್ಲಿ ಕಡತಗಳ ಪರಿಶೀಲನೆ ಪ್ರಗತಿಯಲ್ಲಿದೆ. ಜನಪ್ರಿಯ ನಿರ್ಮಾಣ ಕಂಪನಿಯಾದ ಕಾಸಾ ಗ್ರ್ಯಾಂಡ್ ಸೇರಿದಂತೆ ಕಂಪನಿಗಳ ಮೇಲೂ ದಾಳಿ ನಡೆದಿದೆ.

Income Tax Raid
ಸಿಆರ್‌ಪಿಎಫ್ ಭದ್ರತೆ

ಸಿಆರ್‌ಪಿಎಫ್ ಭದ್ರತೆ: ಐಟಿ ಕಾರ್ಯಾಚರಣೆಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಭದ್ರತೆ ಒದಗಿಸುತ್ತಿದೆ. ಚೆನ್ನೈ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ 40ಕ್ಕೂ ಹೆಚ್ಚು ಕಾರುಗಳಲ್ಲಿ ತೆರಳಿರುವ ಐಟಿ ಅಧಿಕಾರಿಗಳು, ಸಚಿವರಿಗೆ ಸಂಬಂಧಿಸಿದ ಎಲ್ಲ ಸ್ಥಳಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಛತ್ತೀಸ್‌ಗಢ: ರಾಜಕೀಯ ಪಕ್ಷಕ್ಕೆ ಬೆಟ್ಟಿಂಗ್ ಆ್ಯಪ್ ಪ್ರವರ್ತಕರಿಂದ ₹3 ಕೋಟಿ ಹಣ ರವಾನೆ; ವಶಕ್ಕೆ ಪಡೆದ ಇಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.