ETV Bharat / bharat

ಮಕ್ಕಳಾಗದ ಹಿನ್ನೆಲೆ ಗೃಹಿಣಿಗೆ ವಿಷವುಣಿಸಿ ಕೊಂದ ಪತಿಯ ಕುಟುಂಬ..! - ಕೌಶಂಬಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ

ಉತ್ತರ ಪ್ರದೇಶದಲ್ಲಿ 15 ವರ್ಷ ಕಳೆದರೂ ಮಕ್ಕಳಾಗದ ಹಿನ್ನೆಲೆಯಲ್ಲಿ ಮಹಿಳೆಗೆ ವಿಷವುಣಿಸಿ ಕೊಂದಿರುವ ಘಟನೆ ನಡೆದಿದೆ.

in-laws-poison-woman-as-she-could-not-conceive
15 ವರ್ಷ ಕಳೆದರೂ ಮಕ್ಕಳಾಗದ ಹಿನ್ನೆಲೆಯಲ್ಲಿ ಸೊಸೆಯನ್ನು ಕೊಂದ ಪತಿ ಕುಟುಂಬ
author img

By

Published : May 8, 2023, 9:05 PM IST

ಕೌಶಂಬಿ(ಉತ್ತರ ಪ್ರದೇಶ): ಇಲ್ಲಿನ ವಿವಾಹಿತ ಮಹಿಳೆಯೊಬ್ಬರಿಗೆ ವಿಷ ಹಾಕಿ ಕೊಂದಿರುವ ಸಂಚಲನ ಪ್ರಕರಣ ಬೆಳಕಿಗೆ ಬಂದಿದೆ. ಮದುವೆಯಾಗಿ 15 ವರ್ಷ ಕಳೆದರೂ ಮಕ್ಕಳಾಗದ ಹಿನ್ನೆಲೆಯಲ್ಲಿ ಅತ್ತೆ, ಸೊಸೆಗೆ ವಿಷವುಣಿಸಿ ಸಾಯಿಸಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಭಾನುವಾರ ರಾತ್ರಿ ಈ ಘಟನೆ ವರದಿಯಾಗಿದೆ. ಸಾಲಿ ಬೇಗಂ(33) ಮೃತ ಮಹಿಳೆ ಎಂದು ಗುರುತಿಸಲಾಗಿದೆ.

ಸಾಲಿಯಾ ಬೇಗಂ ಅವರು ತಾಜ್ ಮಲ್ಹಾನ್ ಗ್ರಾಮದ ನಿವಾಸಿ ಫಿರೋಜ್ ಅಹ್ಮದ್ ಅವರೊಂದಿಗೆ 15 ವರ್ಷಗಳ ಹಿಂದೆ ವಿವಾಹವಾಗಿದ್ದರು ಎಂದು ಸಂತ್ರಸ್ತರು ತಿಳಿಸಿದ್ದಾರೆ. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ ವಿವಾಹಿತ ಮಹಿಳೆಗೆ ಮಕ್ಕಳಾಗಿರಲಿಲ್ಲ. ಇದರಿಂದ ಆಕೆಯ ಅತ್ತೆ ಸಾನಿಯಾ ಬೇಗಂ ಜೊತೆ ದಿನವೂ ಜಗಳವಾಡತೊಡಗಿದ್ದರು. ಭಾನುವಾರ ರಾತ್ರಿ 10:30 ರ ಸುಮಾರಿಗೆ ಸಾನಿಯಾ ತನ್ನ ಸಹೋದರ ಗೌಸ್ ಅಹ್ಮದ್‌ಗೆ ಕರೆ ಮಾಡಿ, ತನಗೆ ಮಕ್ಕಳಿಲ್ಲದ ಕಾರಣ ತನ್ನ ಪತಿ ಫಿರೋಜ್ ಮತ್ತು ಇತರ ಕುಟುಂಬ ಸದಸ್ಯರು ವಿಷ ಕುಡಿಯುವಂತೆ ಒತ್ತಾಯಿಸಿದ್ದಾರೆ ಎಂದು ತಿಳಿಸಿದ್ದಾಳೆ.

ಈ ವಿಷಯ ತಿಳಿದ ತಕ್ಷಣ ಸಹೋದರ ತನ್ನ ಮಗ ಮತ್ತು ಇತರ ಸಂಬಂಧಿಕರೊಂದಿಗೆ ಆಕೆಯ ಮನೆಗೆ ಧಾವಿಸಿ ನೋಡಿದಾಗ ಆಕೆಯ ಸ್ಥಿತಿ ಗಂಭೀರವಾಗಿತ್ತು, ನಂತರ ಅವರನ್ನು ಸಿರತುವಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಮಹಿಳೆಯನ್ನು ಪರಿಶೀಲಿಸಿದ ವೈದ್ಯರು ಸಾವನ್ನಪ್ಪಿರುವುದಾಗಿ ಘೋಷಿಸಿದ್ದಾರೆ.

ಮೃತಳ ಸಹೋದರ ಮೊಹಮ್ಮದ್ ಅವರ ದೂರಿನ ಆಧಾರದ ಮೇಲೆ, ಮಹಿಳೆಯ ಪತಿ ಮತ್ತು ಅವರ ಕುಟುಂಬದ ನಾಲ್ವರು ಸದಸ್ಯರ ವಿರುದ್ಧ ಕಡಧಾಮ್ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಿಸಲಾಗಿದೆ. ಮೃತರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಕೌಶಂಬಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಮರ್ ಬಹದ್ದೂರ್ ತಿಳಿಸಿದ್ದಾರೆ.

ಸದ್ಯ ವಿವಾಹಿತ ಮಹಿಳೆ, ತನ್ನ ಸಹೋದರನ ಬಳಿ ತನಗೆ ವಿಷವುಣಿಸಿರುವ ಬಗ್ಗೆ ಕರೆ ಮಾಡಿ ತಿಳಿಸಿರುವ ಆಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ:ಕಲಬುರಗಿ: ಯುವ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆ

ಬೇರೆ ಜಾತಿಯ ವ್ಯಕ್ತಿಯನ್ನು ಮದುವೆಯಾಗಿದ್ದಕ್ಕಾಗಿ ಯುವತಿಯ ಕೊಲೆ: ಇತ್ತೀಚಿಗೆ ಬೇರೆ ಜಾತಿಯ ವ್ಯಕ್ತಿಯನ್ನು ಮದುವೆಯಾಗಿದ್ದಕ್ಕಾಗಿ ಯುವತಿಯನ್ನು ಮನೆಯಿಂದ ಹೊರಗೆ ಎಳೆದುಕೊಂಡು ಹೋಗಿ ಆಕೆಯ ಕತ್ತು ಸೀಳಿ ಕೊಲೆಗೈದ ಮರ್ಯಾದಾ ಹತ್ಯೆಯ ಶಂಕಿತ ಪ್ರಕರಣವೊಂದು ಉತ್ತರ ಪ್ರದೇಶದ ಪಿಸಾವನ್ ಪೊಲೀಸ್ ಸರ್ಕಲ್ ವ್ಯಾಪ್ತಿಯ ಬಜನಗರ ಗ್ರಾಮದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದರು.

ಈ ಕುರಿತು ಸೀತಾಪುರದ ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಎಎಸ್‌ಪಿ) ಎನ್‌ಪಿ ಸಿಂಗ್ ಮಾತನಾಡಿ, "20 ವರ್ಷದ ಯುವತಿಯು ಬಜನಗರ ಗ್ರಾಮದ ರೂಪ ಚಂದ್ರ ಮೌರ್ಯ ಎಂಬುವರನ್ನು ಪ್ರೀತಿಸುತ್ತಿದ್ದಳು. ಮಹಿಳೆಯ ಚಿಕ್ಕಪ್ಪ ಶ್ಯಾಮು ಸಿಂಗ್​ಗೆ ಇವರಿಬ್ಬರ ಸಂಬಂಧದ ಬಗ್ಗೆ ತಿಳಿದಾಗ, ಆಕೆಯನ್ನು ತಂದೆ ಪುಟಾನ್ ಸಿಂಗ್ ತೋಮರ್ ಕೆಲಸ ಮಾಡುತ್ತಿದ್ದ ಗಾಜಿಯಾಬಾದ್‌ಗೆ ಕಳುಹಿಸಿದ್ದರು. ಆದರೆ, ಕೆಲವು ತಿಂಗಳುಗಳ ನಂತರ ಮೌರ್ಯ, ಗಾಜಿಯಾಬಾದ್​ಗೆ ತೆರಳಿದ್ದು, ಅಲ್ಲಿ ಇಬ್ಬರೂ ಓಡಿಹೋಗಿ ಕಳೆದ ವರ್ಷದ ನವೆಂಬರ್‌ನಲ್ಲಿ ನ್ಯಾಯಾಲಯದಲ್ಲಿ ವಿವಾಹವಾಗಿದ್ದರು. ಮದುವೆಯಾದ ಕೆಲವು ದಿನಗಳ ಬಳಿಕ ಗ್ರಾಮಕ್ಕೆ ಮರಳಿದ್ದು, ಈ ವಿಷಯ ತಿಳಿದ ಶ್ಯಾಮು ಸಿಂಗ್, ಶನಿವಾರ ದಂಪತಿ ವಾಸಿಸುತ್ತಿದ್ದ ಮನೆಗೆ ತೆರಳಿ ಮಹಿಳೆಯನ್ನು ಹೊರಗೆ ಎಳೆದುಕೊಂಡು ಬಂದು ಕುಡುಗೋಲಿನಿಂದ ಆಕೆಯ ಕತ್ತು ಸೀಳಿದ್ದಾನೆ" ಎಂದು ತಿಳಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.