ETV Bharat / bharat

ಮಹಿಳೆಯರನ್ನು ಅರ್ಚಕರನ್ನಾಗಿ ನೇಮಿಸಲು ಸೂಕ್ತ ಕ್ರಮ: ಸಚಿವ ಪಿ.ಕೆ.ಶೇಖರ್ - Women to Become Archakars

ಮಹಿಳೆಯರನ್ನು ಅರ್ಚಕಿಯರನ್ನಾಗಿ ನೇಮಿಸಲು ಅಗತ್ಯ ಕ್ರಮಗಳು ಜಾರಿಯಲ್ಲಿವೆ. ಅರ್ಚಕರ ಹುದ್ದೆಗೆ ನೇಮಿಸುವ ಮೊದಲು ಅಂಥ ಮಹಿಳೆಯರಿಗೆ ಸೂಕ್ತ ತರಬೇತಿ ನೀಡಲಾಗುವುದು. ‘ಎಲ್ಲ ಜಾತಿಗಳ ಪುರೋಹಿತರು’ ಎಂಬ ಯೋಜನೆ ನೂರು ದಿನಗಳಲ್ಲಿ ಜಾರಿಗೆ ಬರಲಿದೆ ಎಂದು ಸಚಿವ ಪಿ.ಕೆ.ಶೇಖರ್ ಬಾಬು ಹೇಳಿದ್ದಾರೆ.

Women to Become Archakars in TN
ಮಹಿಳೆಯರನ್ನು ಅರ್ಚಕರನ್ನಾಗಿ ನೇಮಿಸಲು ಸೂಕ್ತ ಕ್ರಮ
author img

By

Published : Jun 12, 2021, 8:06 PM IST

ಚೆನ್ನೈ(ತಮಿಳುನಾಡು): ಹಿಂದೂ ಧಾರ್ಮಿಕ ದತ್ತಿ ವಿಭಾಗದಡಿ ಬರುವ ದೇವಾಲಯಗಳಲ್ಲಿ ಮಹಿಳೆಯರು ತರಬೇತಿ ಪಡೆದ ನಂತರ ಅವರನ್ನು ಅರ್ಚಕಿಯರನ್ನಾಗಿ ನೇಮಿಸಲಾಗುತ್ತದೆ ಎಂದು ತಮಿಳುನಾಡಿನ ಹಿಂದೂ ಧಾರ್ಮಿಕ ಮತ್ತು ದತ್ತಿ ಸಚಿವ ಪಿ.ಕೆ.ಶೇಖರ್ ಬಾಬು ಹೇಳಿದ್ದಾರೆ. ಸಚಿವ ಪಿ.ಕೆ.ಶೇಖರ್ ಇಂದು ನುಂಗಂಬಕ್ಕಂನಲ್ಲಿರುವ ಪ್ರಧಾನ ಕಚೇರಿಯಲ್ಲಿ ಮಾನವ ಸಂಪನ್ಮೂಲ ಮತ್ತು ಸಿಇ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಿದರು. ಬಳಿಕ ಈ ಮಹತ್ವದ ಯೋಜನೆಯನ್ನು ಘೋಷಿಸಿದ್ದಾರೆ.

ಸಭೆಯ ನಂತರ ಅವರು ಮಾತನಾಡುತ್ತಾ, ಮಹಿಳೆಯರನ್ನು ಅರ್ಚಕಿಯರನ್ನಾಗಿ ನೇಮಿಸಲು ಅಗತ್ಯ ಕ್ರಮಗಳು ಜಾರಿಯಲ್ಲಿವೆ. ಅರ್ಚಕರ ಹುದ್ದೆಗೆ ನೇಮಿಸುವ ಮೊದಲು ಅಂಥ ಮಹಿಳೆಯರಿಗೆ ಸೂಕ್ತ ತರಬೇತಿ ನೀಡಲಾಗುವುದು. ‘ಎಲ್ಲ ಜಾತಿಗಳ ಪುರೋಹಿತರು’ ಎಂಬ ಯೋಜನೆ ನೂರು ದಿನಗಳಲ್ಲಿ ಜಾರಿಗೆ ಬರಲಿದೆ.

ಡಿಎಂಕೆ ಅಧಿಕಾರಕ್ಕೆ ಬಂದ ನಂತರ, ಮಾನವ ಸಂಪನ್ಮೂಲ ಇಲಾಖೆಯಲ್ಲಿ ಪಾರದರ್ಶಕತೆ ಕಂಡುಬಂದಿದೆ. ಇದಲ್ಲದೆ, ಕೆಲವು ದೇವಾಲಯಗಳಲ್ಲಿ ತಮಿಳು ಸ್ತೋತ್ರ ಪಠಣೆ ಜಾರಿಯಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ.

ಇದನ್ನೂ ಓದಿ: ಬೇಡಿದ ವರ ನೀಡಿದ ಹರ: ನೀಲಕಂಠ ಮಹಾದೇವ ದೇವಸ್ಥಾನಕ್ಕೆ 300 ಕೆಜಿ ಲಡ್ಡು ನೀಡಿದ ಭಕ್ತ

ಇತ್ತೀಚೆಗೆ ಸಚಿವರು, ಬ್ರಾಹ್ಮಣೇತರ ಪುರೋಹಿತರ ನೇಮಕ, ದೇವಾಲಯದ ಸಿಬ್ಬಂದಿಗೆ ನೆರವು ನೀಡುವ ವಿವಿಧ ಯೋಜನೆಗಳನ್ನು ಘೋಷಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.