ಹೈದಾರಾಬಾದ್: 2024ಕ್ಕೆ ತೆಲಂಗಾಣದಲ್ಲಿ ಬಿಜೆಪಿ ಸರ್ಕಾರ ರಚಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಕೆಸಿಆರ್ ಅವರು ವಿಮೋಚನಾ ದಿನಾಚರಿಸಲು ಹೆದರುತ್ತಿದ್ದರು. ಇಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಅಧಿಕೃತವಾಗಿ ತೆಲಂಗಾಣ ವಿಮೋಚನಾ ದಿನ ಆಚರಿಸುವುದಾಗಿ ಶಾ ಭರವಸೆ ನೀಡಿದರು.
ಸರ್ದಾರ್ ವಲ್ಲಭಭಾಯ್ ಪಟೇಲರ ಪರಾಕ್ರಮದಿಂದಾಗಿ ಹೈದರಾಬಾದ್ ರಾಜ್ಯದ ವಿಮೋಚನೆ ಸಾಧ್ಯವಾಗಿದೆ. ದೇಶ ಸ್ವಾತಂತ್ರ್ಯವಾದ 13 ತಿಂಗಳ ನಂತರ ಈ ರಾಜ್ಯಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಅತ್ತ ಕರ್ನಾಟಕದಲ್ಲೂ ಹೈದರಾಬಾದ್ ವಿಮೋಚನಾ ದಿನವನ್ನು ಆಚರಿಸಲಾಗುತ್ತಿದೆ. ತೆಲಂಗಾಣ ವಿಮೋಚನಾ ದಿನವನ್ನು ಆಚರಿಸುತ್ತೇವೆ ಎಂಬ ಕೆಸಿಆರ್ ಭರವಸೆ ಏನಾಗಿದೆ? ಎಂದು ಪ್ರಶ್ನಿಸಿದರು.
2023ರ ಡಿಸೆಂಬರ್ ಅಥವಾ 2024 ಜನವರಿಯಲ್ಲಿ ತೆಲಂಗಾಣದಲ್ಲಿ ಮುಂದಿನ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ.
ಇದನ್ನೂ ಓದಿ: ತೆಲಂಗಾಣದಲ್ಲೂ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ: ತೇಜಸ್ವಿ ಸೂರ್ಯ