ETV Bharat / bharat

'ಮಹಿಳಾ ಅಭಿವೃದ್ಧಿ'ಯಿಂದ' ಮಹಿಳಾ ನೇತೃತ್ವದ ಕಡೆ 'ಭಾರತದ ನಡೆ: ಜಿ -7ಶೃಂಗದಲ್ಲಿ ಮೋದಿ ಪ್ರತಿಪಾದನೆ - ಆಶಾ ಕಾರ್ಯಕರ್ತೆಯರ ಬಗ್ಗೆ ಮೋದಿ ಮಾತು

ಸೋಮವಾರ ಬರ್ಲಿನ್‌ನಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು. ಅವರು ಆಯಾ ದೇಶಗಳೊಂದಿಗೆ ಭಾರತದ ಬಾಂಧವ್ಯ ಬಲಪಡಿಸಲು G7 ರಾಷ್ಟ್ರಗಳು ಮತ್ತು ಇತರ ಅತಿಥಿ ರಾಷ್ಟ್ರಗಳ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ಆಹಾರ ಭದ್ರತೆ ಕುರಿತು ಕೆಲವು ಸಲಹೆಗಳನ್ನು ನೀಡಿದರು.

Impact of geopolitical tension is not limited to Europe PM Modi at G7 summit  India has always been in favour of peace  India has supplied food grains to many countries in need  rising prices of energy and food grains are affecting all the countries  energy and security of developing countries are particularly at risk  New Delhi has dispatched about 35000 tonnes of wheat as humanitarian aid to Afghanistan  ಮಹಿಳಾ ಅಭಿವೃದ್ಧಿಯಿಂದ ಮಹಿಳಾ ನೇತೃತ್ವದ ಅಭಿವೃದ್ಧಿ ಕಡೆ ಭಾರತದ ನಡೆ ಎಂದ ಮೋದಿ  ಜರ್ಮನಿಯಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಮೋದಿ ಸಲಹೆ  ಆಶಾ ಕಾರ್ಯಕರ್ತೆಯರ ಬಗ್ಗೆ ಮೋದಿ ಮಾತು  ಭಾರತದ ನೈಸರ್ಗಿಕ ಕೃಷಿ ಕ್ರಾಂತಿ ಬಗ್ಗೆ ಹೇಳಿದ ಮೋದಿ
ಜಿ7ನಲ್ಲಿ ಮೋದಿ ಉಚ್ಚಾರ
author img

By

Published : Jun 28, 2022, 10:13 AM IST

Updated : Jun 28, 2022, 10:21 AM IST

ನವದೆಹಲಿ: ಭೌಗೋಳಿಕ ರಾಜಕೀಯ ಉದ್ವಿಗ್ನತೆಯ (ರಷ್ಯಾ-ಉಕ್ರೇನ್ ಯುದ್ಧ) ಪರಿಣಾಮ ಕೇವಲ ಯುರೋಪ್‌ಗೆ ಸೀಮಿತವಾಗಿಲ್ಲ. ಇಂಧನ ಮತ್ತು ಆಹಾರ ಧಾನ್ಯಗಳ ಬೆಲೆ ಏರಿಕೆಯು ಎಲ್ಲ ದೇಶಗಳ ಮೇಲೆ ಪರಿಣಾಮ ಬೀರುತ್ತಿದೆ. ನಾವು ಜಾಗತಿಕ ಉದ್ವಿಗ್ನತೆ ವಾತಾವರಣದ ನಡುವೆ ಭೇಟಿಯಾಗುತ್ತಿದ್ದೇವೆ ಮತ್ತು ಭಾರತ ಯಾವಾಗಲೂ ಶಾಂತಿಯ ಪರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.

ಜರ್ಮನಿಯಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಆಹಾರ ಭದ್ರತೆ ಮತ್ತು ಲಿಂಗ ಸಮಾನತೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಈ ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ಪರಿಣಾಮವು ಕೇವಲ ಯುರೋಪಿಗೆ ಸೀಮಿತವಾಗಿಲ್ಲ. ಇಂಧನ ಮತ್ತು ಆಹಾರ ಧಾನ್ಯಗಳ ಬೆಲೆ ಏರಿಕೆ ಎಲ್ಲ ದೇಶಗಳ ಮೇಲೆ ಪರಿಣಾಮ ಬೀರುತ್ತಿದೆ. ಅಭಿವೃದ್ಧಿಶೀಲ ರಾಷ್ಟ್ರಗಳ ಶಕ್ತಿ ಮತ್ತು ಭದ್ರತೆ ವಿಶೇಷವಾಗಿ ಅಪಾಯದಲ್ಲಿದೆ ಎಂದು ಮೋದಿ ಹೇಳಿದರು.

ಈ ಸವಾಲಿನ ಸಮಯದಲ್ಲಿ ಅಗತ್ಯ ಇರುವ ಅನೇಕ ದೇಶಗಳಿಗೆ ಭಾರತವು ಆಹಾರ ಧಾನ್ಯಗಳನ್ನು ಪೂರೈಸಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಭಾರತ ಮಾನವೀಯ ನೆರವಿಗಾಗಿ ಸುಮಾರು 35,000 ಟನ್ ಗೋಧಿಯನ್ನು ಅಫ್ಘಾನಿಸ್ತಾನಕ್ಕೆ ರವಾನಿಸಿದೆ. ಅಲ್ಲಿ ಭಾರಿ ಭೂಕಂಪದ ನಂತರವೂ ಪರಿಹಾರ ಸಾಮಗ್ರಿಗಳನ್ನು ತಲುಪಿಸಿದ ಮೊದಲ ದೇಶ ಭಾರತವಾಗಿದೆ. ನಾವು ನಮ್ಮ ನೆರೆಯ ಶ್ರೀಲಂಕಾಕ್ಕೆ ಆಹಾರ ಭದ್ರತೆಯ ಸಹಾಯ ಮಾಡುತ್ತಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.

ಓದಿ: ವಿಡಿಯೋ: ಪ್ರಧಾನಿ ಮೋದಿ ಬಳಿ ಬಂದು ಬೆನ್ನು ತಟ್ಟಿ ಕೈ ಕುಲುಕಿದ ಅಮೆರಿಕ ಅಧ್ಯಕ್ಷ!

ಜಿ-7 ಶೃಂಗಸಭೆಯಲ್ಲಿ ಸಲಹೆಗಳನ್ನು ನೀಡಿದ ಪ್ರಧಾನಿ ಮೋದಿ, ಮೊದಲನೆಯದಾಗಿ ರಸಗೊಬ್ಬರದ ಲಭ್ಯತೆ ಮೇಲೆ ಕೇಂದ್ರೀಕರಿಸಬೇಕು ಮತ್ತು ಜಾಗತಿಕ ಮಟ್ಟದಲ್ಲಿ ರಸಗೊಬ್ಬರದ ಮೌಲ್ಯವನ್ನು ಸುಗಮವಾಗಿಸಬೇಕು. ಭಾರತದಲ್ಲಿ ರಸಗೊಬ್ಬರ ಉತ್ಪಾದನೆಯನ್ನು ಹೆಚ್ಚಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

ಎರಡನೇಯದಾಗಿ ಪ್ರಧಾನಿ ಮೋದಿ, ಜಿ -7 ದೇಶಗಳಿಗೆ ಹೋಲಿಸಿದರೆ ಭಾರತವು ಅಪಾರ ಕೃಷಿ ಮಾನವ ಸಂಪನ್ಮೂಲವನ್ನು ಹೊಂದಿದೆ. ಭಾರತೀಯ ಕೃಷಿ ಕೌಶಲ್ಯಗಳು G-7 ನ ಕೆಲವು ದೇಶಗಳಲ್ಲಿ ಚೀಸ್ ಮತ್ತು ಆಲಿವ್‌ನಂತಹ ಸಾಂಪ್ರದಾಯಿಕ ಕೃಷಿ ಉತ್ಪನ್ನಗಳಿಗೆ ಹೊಸ ಜೀವನವನ್ನು ನೀಡಲು ಸಹಾಯ ಮಾಡಿದೆ ಎಂದು ಹೇಳಿದರು.

ಆಹಾರ ಭದ್ರತೆ ಬಗ್ಗೆ ಮೋದಿ ಮಾತು: ಭಾರತದ ರೈತರ ಸಾಂಪ್ರದಾಯಿಕ ಕೌಶಲದ ಸಹಾಯದಿಂದ ಜಿ-7 ದೇಶಗಳಿಗೆ ಆಹಾರ ಭದ್ರತೆ ಖಾತ್ರಿಪಡಿಸಲಾಗುವುದು. ಮುಂದಿನ ವರ್ಷ ಜಗತ್ತು ಅಂತಾರಾಷ್ಟ್ರೀಯ ‘ರಾಗಿ’ ವರ್ಷವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ, ನಾವು ರಾಗಿಯಂತಹ ಪೌಷ್ಟಿಕಾಂಶದ ಪರ್ಯಾಯ ಉತ್ತೇಜಿಸಲು ಅಭಿಯಾನ ನಡೆಸಬೇಕು. ವಿಶ್ವದಲ್ಲಿ ಆಹಾರ ಭದ್ರತೆ ಖಾತ್ರಿಪಡಿಸುವಲ್ಲಿ ರಾಗಿಗಳು ಅಮೂಲ್ಯವಾದ ಕೊಡುಗೆಯನ್ನು ನೀಡಬಲ್ಲವು ಎಂದು ಹೇಳಿದರು.

ಸಭೆಯಲ್ಲಿ ಮೋದಿ ಅವರು ಭಾರತದಲ್ಲಿ ನಡೆಯುತ್ತಿರುವ 'ನೈಸರ್ಗಿಕ ಕೃಷಿ' ಕ್ರಾಂತಿಯನ್ನು ಎತ್ತಿ ತೋರಿಸಿದರು. ಈ ಪ್ರಯೋಗವನ್ನು ಅಧ್ಯಯನ ಮಾಡಲು G7 ರಾಷ್ಟ್ರದ ತಜ್ಞರನ್ನು ಕೇಳಿದರು. ಲಿಂಗ ಸಮಾನತೆ ಕುರಿತಾದ ಭಾರತದ ದೃಷ್ಟಿಕೋನದ ಕುರಿತು ವ್ಯಾಪಕವಾಗಿ ಮಾತನಾಡಿದ ಅವರು, ಲಿಂಗ ಸಮಾನತೆಗೆ ಸಂಬಂಧಿಸಿದಂತೆ ಇಂದು ಭಾರತವು ಮಹಿಳೆಯರ ಆರ್ಥಿಕ ಅಭಿವೃದ್ಧಿ ಹಾಗೂ ಮಹಿಳಾ ನೇತೃತ್ವದ ಕಡೆ ತೆಗೆದುಕೊಂಡು ಹೋಗಲಾಗುತ್ತಿದೆ. ಆರು ದಶಲಕ್ಷಕ್ಕೂ ಹೆಚ್ಚು ಭಾರತೀಯ ಮಹಿಳಾ ಕಾರ್ಯಕರ್ತರು ಸಾಂಕ್ರಮಿಕ ರೋಗದಿಂದ ನಾಗರಿಕರನ್ನು ಸುರಕ್ಷಿತವಾಗಿರಿಸಲು ಹೋರಾಡಿದ್ದರು ಎಂದು ಹೆಮ್ಮೆಯಿಂದ ಹೇಳಿಕೊಂಡರು.

ಭಾರತದಲ್ಲಿ ಲಸಿಕೆಗಳು ಮತ್ತು ಪರೀಕ್ಷಾ ಕಿಟ್‌ಗಳನ್ನು ಅಭಿವೃದ್ಧಿಪಡಿಸಲು ಮಹಿಳಾ ವಿಜ್ಞಾನಿಗಳು ದೊಡ್ಡ ಕೊಡುಗೆ ನೀಡಿದ್ದಾರೆ. ಭಾರತದಲ್ಲಿ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಮಹಿಳಾ ಸ್ವಯಂಸೇವಕರು ಗ್ರಾಮೀಣ ಆರೋಗ್ಯವನ್ನು ಒದಗಿಸುವಲ್ಲಿ ಸಕ್ರಿಯರಾಗಿದ್ದಾರೆ. ಅವರನ್ನು ನಾವು 'ಆಶಾ ಕಾರ್ಯಕರ್ತರು' ಎಂದು ಕರೆಯುತ್ತೇವೆ. ಕಳೆದ ತಿಂಗಳಷ್ಟೇ ವಿಶ್ವ ಆರೋಗ್ಯ ಸಂಸ್ಥೆಯು ಈ ಭಾರತೀಯ ಆಶಾ ಕಾರ್ಯಕರ್ತರಿಗೆ '2022 ಗ್ಲೋಬಲ್ ಲೀಡರ್ಸ್ ಅವಾರ್ಡ್' ನೀಡಿ ಗೌರವಿಸಿದೆ ಎಂಬುದನ್ನು ನೆನಪಿಸಿಕೊಂಡರು.

ಭಾರತದಲ್ಲಿ ಸ್ಥಳೀಯ ಸರ್ಕಾರದಿಂದ ಹಿಡಿದು ರಾಷ್ಟ್ರೀಯ ಸರ್ಕಾರದವರೆಗೆ ಚುನಾಯಿತರಾದ ಎಲ್ಲ ನಾಯಕರನ್ನು ಲೆಕ್ಕ ಹಾಕಿದರೆ ಅವರಲ್ಲಿ ಅರ್ಧಕ್ಕಿಂತ ಹೆಚ್ಚು ಮಹಿಳೆಯರಿದ್ದಾರೆ. ಮುಂದಿನ ವರ್ಷ ಭಾರತವು ಜಿ20 ಅಧ್ಯಕ್ಷರಾಗಲಿದೆ. G-20 ಪ್ಲಾಟ್‌ಫಾರ್ಮ್ ಅಡಿ ಕೋವಿಡ್ ನಂತರದ ಚೇತರಿಕೆ ಸೇರಿದಂತೆ ಇತರ ವಿಷಯಗಳ ಕುರಿತು G7 ದೇಶಗಳೊಂದಿಗೆ ನಿಕಟ ಸಂವಾದವನ್ನು ನಿರ್ವಹಿಸುವ ಭಾರತದ ನಿಲುವನ್ನು ಅವರು ಪುನರುಚ್ಚರಿಸಿದರು.

Last Updated : Jun 28, 2022, 10:21 AM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.