ETV Bharat / bharat

IMF ಮುಖ್ಯಸ್ಥರಾಗಿ ಕ್ರಿಸ್ಟಲಿನಾ ಜಾರ್ಜೀವ ಮುಂದುವರಿಯಲು ಐಎಂಎಫ್ ಬೋರ್ಡ್​ ಅನುಮತಿ - ಕ್ರಿಸ್ಟಲಿನಾ ಜಾರ್ಜೀವ ಐಎಂಎಫ್ ಮುಖ್ಯಸ್ಥೆಯಾಗಿ ಮುಂದುವರಿಕೆ

ಐಎಂಎಫ್‌ನ 24 ಸದಸ್ಯರ ಕಾರ್ಯನಿರ್ವಾಹಕ ಮಂಡಳಿಯು ವಿಶ್ವ ಬ್ಯಾಂಕಿನ ಉನ್ನತ ಅಧಿಕಾರಿಯಾಗಿ ತನ್ನ ಹಿಂದಿನ ಪಾತ್ರದ ಪರಿಸ್ಥಿತಿಯಲ್ಲಿ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜೀವಾ ಅನುಚಿತ ಪಾತ್ರದ ಬಗ್ಗೆ ಸಾಬೀತಾಗಿಲ್ಲ. ಹೀಗಾಗಿ, ಕ್ರಿಸ್ಟಲಿನಾ ಜಾರ್ಜೀವರನ್ನು ತನ್ನ ವ್ಯವಸ್ಥಾಪಕ ನಿರ್ದೇಶಕರಾಗಿ ಮುಂದುವರಿಸಲು ನಿರ್ಧರಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ..

Georgieva
ಕ್ರಿಸ್ಟಲಿನಾ ಜಾರ್ಜೀವ
author img

By

Published : Oct 12, 2021, 4:15 PM IST

ವಾಷಿಂಗ್​ಟನ್ : ವಿಶ್ವ ಬ್ಯಾಂಕಿನಲ್ಲಿದ್ದಾಗ ಚೀನಾ ಪರವಾಗಿ ವರದಿಯ ಮೇಲೆ ಪ್ರಭಾವ ಬೀರಿದ ಆರೋಪದ ಹೊರತಾಗಿಯೂ ಅಂತಾರಾಷ್ಟ್ರೀಯ ಹಣಕಾಸು ನಿಧಿ( IMF)ಯು ಕ್ರಿಸ್ಟಲಿನಾ ಜಾರ್ಜೀವರನ್ನು ತನ್ನ ವ್ಯವಸ್ಥಾಪಕ ನಿರ್ದೇಶಕರಾಗಿ ಮುಂದುವರಿಸಲು ನಿರ್ಧರಿಸಿದೆ.

ಈ ವಿಷಯದ ಬಗ್ಗೆ ತನ್ನ ಪರಿಶೀಲನೆಯ ಸಮಯದಲ್ಲಿ ಪ್ರಸ್ತುತಪಡಿಸಿದ ಮಾಹಿತಿಯು "ವ್ಯವಸ್ಥಾಪಕ ನಿರ್ದೇಶಕರು ಅನುಚಿತ ಪಾತ್ರ ವಹಿಸಿದ್ದಾರೆ ಎಂದು ನಿರ್ಣಾಯಕವಾಗಿ ತೋರಿಸಲಿಲ್ಲ" ಎಂದು ಮಂಡಳಿ ಹೇಳಿದೆ.

ಬೀಜಿಂಗ್ ಅನ್ನು ಶಾಂತಗೊಳಿಸುವ ಪ್ರಯತ್ನದಲ್ಲಿ ವಿಶ್ವ ಬ್ಯಾಂಕ್ ಸಿಬ್ಬಂದಿಗೆ ಚೀನಾದ ವ್ಯಾಪಾರ ಶ್ರೇಯಾಂಕಗಳನ್ನು ಬದಲಾಯಿಸಲು ಒತ್ತಡ ಹೇರಲಾಗಿದೆ ಎಂಬ ಆರೋಪಗಳಿಗೆ ಪ್ರತಿಕ್ರಿಯೆಯಾಗಿ ಅಂತಾರಾಷ್ಟ್ರೀಯ ಹಣಕಾಸು ನಿಧಿ ಮಂಗಳವಾರ ತನ್ನ ವ್ಯವಸ್ಥಾಪಕ ನಿರ್ದೇಶಕರ ಬಗ್ಗೆ "ಸಂಪೂರ್ಣ ವಿಶ್ವಾಸ" ವ್ಯಕ್ತಪಡಿಸಿದೆ.

ಐಎಂಎಫ್‌ನ 24 ಸದಸ್ಯರ ಕಾರ್ಯನಿರ್ವಾಹಕ ಮಂಡಳಿಯು ವಿಶ್ವ ಬ್ಯಾಂಕಿನ ಉನ್ನತ ಅಧಿಕಾರಿಯಾಗಿ ತನ್ನ ಹಿಂದಿನ ಪಾತ್ರದ ಪರಿಸ್ಥಿತಿಯಲ್ಲಿ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜೀವಾ ಅನುಚಿತ ಪಾತ್ರದ ಬಗ್ಗೆ ಸಾಬೀತಾಗಿಲ್ಲ. ಹೀಗಾಗಿ, ಕ್ರಿಸ್ಟಲಿನಾ ಜಾರ್ಜೀವರನ್ನು ತನ್ನ ವ್ಯವಸ್ಥಾಪಕ ನಿರ್ದೇಶಕರಾಗಿ ಮುಂದುವರಿಸಲು ನಿರ್ಧರಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

"ಪ್ರಸ್ತುತಪಡಿಸಿದ ಎಲ್ಲಾ ಪುರಾವೆಗಳನ್ನು ಪರೀಶೀಲಿಸಿದ ನಂತರ, ಕಾರ್ಯನಿರ್ವಾಹಕ ಮಂಡಳಿಯು ವ್ಯವಸ್ಥಾಪಕ ನಿರ್ದೇಶಕರ ನಾಯಕತ್ವ ಮತ್ತು ತನ್ನ ಕರ್ತವ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಸಾಮರ್ಥ್ಯದ ಮೇಲೆ ತನ್ನ ಸಂಪೂರ್ಣ ವಿಶ್ವಾಸ ಪುನರುಚ್ಚರಿಸಿದೆ" ಎಂದು ಅದು ಹೇಳಿದೆ.

ಆದಾಗ್ಯೂ, ವಿಶ್ವಬ್ಯಾಂಕ್ ಸಿಬ್ಬಂದಿಯಿಂದ ಸಂಭವನೀಯ ದುರ್ವರ್ತನೆಗಳ ಕುರಿತು ತನಿಖೆ ಮುಂದುವರಿದಿದೆ ಮತ್ತು ಐಎಂಎಫ್‌ನ ಅತಿದೊಡ್ಡ ಷೇರುದಾರ ಯುಎಸ್​​ ಈ ವಿಷಯದ ಮುಂದಿನ ತನಿಖೆಯನ್ನು ಸೂಕ್ಷ್ಮವಾಗಿ ಗಮನಿಸಲು ಯೋಜಿಸಿದೆ ಎಂದು ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.