ಹೈದರಾಬಾದ್: ಇಲ್ಲಿನ ಶಂಶಾಬಾದ್ ವಿಮಾನ ನಿಲ್ದಾಣದಲ್ಲಿ 7 ಕೋಟಿ ಮೊತ್ತದ ಅಪಾರ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಶಾರ್ಜಾ ಮೂಲಕ ಸುಡಾನ್ನಿಂದ ಹೈದರಾಬಾದ್ಗೆ ಬಂದ 23 ಪ್ರಾಯಾಣಿಕರು ಅನ್ನು ಕಸ್ಟಮ್ ಅಧಿಕಾರಿಗಳು ಪರಿಶೀಲಿಸಿದಾಗ ಅಕ್ರಮ ಚಿನ್ನ ಪತ್ತೆಯಾಗಿದೆ. ವಾಯು ಗುಪ್ತಚರದಳದ ಅಧಿಕಾರಿಗಳ ಮಾಹಿತಿ ಬೇರೆಗೆ ಜಿ9 458 ವಿಮಾನದಲ್ಲಿ ಕಸ್ಟಮ್ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಈ ವೇಳೆ, 14.9063 ಗ್ರಾಂ ಬಂಗಾರ ಪತ್ತೆಯಾಗಿದೆ. 23 ಪ್ರಯಾಣಿಕರು ಶೂ, ಟೈ ಮತ್ತು ಬಟ್ಟೆಗಳಲ್ಲಿ ಚಿನ್ನವನ್ನು ಅಡಗಿಸಿ ಸಾಗಿಸುತ್ತಿದ್ದರು. ಇನ್ನು ಈ ಕೃತ್ಯವನ್ನು ನಡೆದ ಪ್ರಮುಖ ನಾಲ್ಕು ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದವರ ವಿಚಾರಣೆ ಮುಂದುವರಿಸಲಾಗಿದೆ. ಬಂಧಿತರೆಲ್ಲರೂ ಸುಡಾನ್ ದೇಶದವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿನ್ನ ಕದ್ದು ಪರಾರಿ: ಮನೆ ಮಾಲಕಿಯ ವಿಶ್ವಾಸವನ್ನು ಬಳಸಿಕೊಂಡು 7 ಕೋಟಿ ಮೊತ್ತದ ಚಿನ್ನ ಕದ್ದು ಆರೋಪಿ ಪರಾರಿಯಾಗಿರುವ ಘಟನೆ ಹೈದರಾಬಾದ್ನ ಎಸ್ಸರ್ನಗರ್ ಪೊಲೀಸ್ ಠಾಣೆಯಲ್ಲಿ ನಡೆದಿದೆ. ರಾಧಿಕಾ ಎಂಬ ಮಹಿಳೆ ಚಿನ್ನದ ವ್ಯಾಪಾರ ಮಾಡುತ್ತಿದ್ದರು. ಇವರ ಬಳಿ ಹಲವು ವರ್ಷಗಳಿಂದ ಕಾರ್ ಡ್ರೈವರ್ ಆಗಿ ಶ್ರೀನಿವಾಸ್ ಎಂಬಾತ ಕಾರ್ಯ ನಿರ್ವಹಿಸುತ್ತಿದ್ದ. ನಿಷ್ಟೆಯಿಂದ ಕಾರ್ಯ ನಿರ್ವಹಿಸುವ ಮೂಲಕ ಈತ ರಾಧಿಕಾ ನಂಬಿಕೆಯನ್ನು ಗಳಿಸಿದ್ದ. ಇದೇ ಹಿನ್ನೆಲೆ ರಾಧಿಕಾಗೆ ಗ್ರಾಹಕರೊಬ್ಬರು ಆರ್ಡರ್ ಮಾಡಿದ್ದ 50 ಲಕ್ಷ ಮೌಲ್ಯದ ಆಭರಣದ ಜೊತೆಗೆ ಸಿರಿಗಿರಿರಾಜ್ ಜೆಮ್ಸ್ ಅಂಡ್ ಜ್ಯೂವೆಲರ್ಗೆ ಸಾಗಿಸುವಂತೆ 7 ಕೋಟಿ ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣವನ್ನು ನೀಡಿದ್ದರು.
ಈ ಆಭರಣಗಳನ್ನು ಸಂಬಂಧ ಪಟ್ಟವರಿಗೆ ತಲುಪಿಸುವ ಆತ ಇದೀಗ ಚಿನ್ನದ ಸಮೇತ ನಾಪತ್ತೆಯಾಗಿದ್ದಾನೆ. ಈ ಸಂಬಂಧ ಆಕೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಘಟನೆ ಸಂಬಂಧ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆಗೆ ಮುಂದಾಗಿದ್ದು, ಸ್ಥಳೀಯ ಸಿಸಿಟಿವಿ ಪರಿಶೀಲನೆ ನಡೆಸಿದ್ದು, ಕಣ್ಮರೆಯಾಗಿರುವ ಆರೋಪಿಗೆ ಹುಡುಕಾಟ ನಡೆಸಿದ್ದಾರೆ.
ಕೇರಳದಲ್ಲೂ ಚಿನ್ನ ಸಾಗಿಸುತ್ತಿದ್ದ ಆರೋಪಿ: ಪ್ಯಾಂಟ್ ಮತ್ತು ಟೀ ಶರ್ಟ್ನಲ್ಲಿ ಸುಮಾರು ಒಂದು ಕೋಟಿ ರೂ. ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಕಳ್ಳಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಕೇರಳದ ಕೋಯಿಕ್ಕೋಡ್ ಜಿಲ್ಲೆಯ ವಡಕರ ಮೂಲದ ಮುಹಮ್ಮದ್ ಸಫ್ವಾನ್ (37) ಬಂಧಿತ ಆರೋಪಿ. ಇಂದು ಬೆಳಗ್ಗೆ 8.30ಕ್ಕೆ ದುಬೈನಿಂದ ಇಂಡಿಗೋ ವಿಮಾನದಲ್ಲಿ ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದಾನೆ. ಬಳಿಕ ಕಸ್ಟಮ್ಸ್ ಅಧಿಕಾರಿಗಳ ತಪಾಸಣೆಯಿಂದ ತಪ್ಪಿಸಿಕೊಂಡಿದ್ದಾನೆ. ಆದರೆ, ಮಲಪ್ಪುರಂ ಜಿಲ್ಲಾ ಪೊಲೀಸ್ ಮುಖ್ಯಸ್ಥ ಎಸ್. ಸುಜಿತ್ ದಾಸ್ ನೀಡಿದ ಮಾಹಿತಿ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಈತ 1.7 ಕೆಜಿ ಚಿನ್ನವನ್ನು ಉಡುಪಿನಲ್ಲಿ ಲೇಪಿಸಿಕೊಂಡು ಪ್ರಯಾಣಿಸಿದ್ದ. ಈ ವರ್ಷದಲ್ಲಿ ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗೆ ಪೊಲೀಸರಿಗೆ ಸಿಕ್ಕಿಬಿದ್ದ ಚಿನ್ನ ಕಳ್ಳಸಾಗಣೆಯ 12ನೇ ಪ್ರಕರಣ ಇದಾಗಿದೆ.
ಇದನ್ನೂ ಓದಿ: ಗುಂಡುಹಾರಿಸಿ ರೌಡಿಶೀಟರ್ನನ್ನು ಬಂಧಿಸಿದ ಧೀರೆ.. ಮಹಿಳಾ ಎಸ್ಐ ಮೀನಾ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ